ಬೆಂಗಳೂರು:ಜಮೀರ್ ಅಹಮದ್ ಎನ್ನುವ ಗೋಸುಂಬೆ ರಾಜಕಾರಣಿಯನ್ನು ಶಾಸಕತ್ವ ಸ್ಥಾನದಿಂದ ಕಿತ್ತು ಹಾಕಬೇಕು ಎಂದು ವಿಧಾನಪರಿಷತ್ ಸದಸ್ಯ ರವಿಕುಮಾರ್ ಒತ್ತಾಯಿಸಿದ್ದಾರೆ.
ಕಾಂಗ್ರೆಸ್‌ನವರು ಗೋಸುಂಬೆ ರಾಜಕಾರಣ ಬಿಡಬೇಕು: ಎಂಎಲ್ಸಿ ರವಿಕುಮಾರ್ ತಿರುಗೇಟು ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪಾದರಾಯನಪುರದಲ್ಲಿ ಕೊರೊನಾ ಗಲಾಟೆಯ ಪುಂಡರನ್ನು ಜಮೀರ್ ಸ್ವಾಗತಿಸುತ್ತಾರೆ. ಡಿ.ಜೆ.ಹಳ್ಳಿಯಲ್ಲಿ ಗಲಾಟೆ ಮಾಡಿದವರು ಅಮಾಯಕರು ಎಂದಿದ್ದಾರೆ. ಆದರೆ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅಮಾಯಕರಲ್ಲವೇ? ಎಂದು ಪ್ರಶ್ನಿಸಿದರು.
ದಲಿತ ಶಾಸಕರೊಬ್ಬರ ಮನೆಗೆ ಬೆಂಕಿ ಹಾಕಿದರೂ ಕಾಂಗ್ರೆಸ್‌ನವರು ಖಂಡಿಸಲಿಲ್ಲ. ದಲಿತೋದ್ಧಾರ ಮಾಡುತ್ತೇವೆ ಅಂತಾರೆ ಕಾಂಗ್ರೆಸ್ಸಿಗರು. ಆದರೀಗ ಗೋಸುಂಬೆ ರಾಜಕಾರಣ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರು ಗೋಸುಂಬೆ ರಾಜಕಾರಣ ಬಿಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗೋಲಿಬಾರ್ ಮಾಡಿರುವ ಕ್ರಮಕ್ಕೆ ಸರ್ಕಾರವನ್ನು ಅಭಿನಂದಿಸಿದ ಅವರು, ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದವರಿಂದಲೇ ನಷ್ಟ ಭರಿಸಬೇಕು ಎಂದು ಹೇಳಿದರು.