ಬೆಂಗಳೂರು: ವಿಧಾನ ಪರಿಷತ್ ಕಲಾಪದ ವೇಳೆ ಕಾಂಗ್ರೆಸ್ ಸದಸ್ಯ ಪ್ರಕಾಶ್ ರಾಥೋಡ್ ಮೊಬೈಲ್ ವೀಕ್ಷಣೆ ಮಾಡಿದ ಪ್ರಕರಣದ ಸತ್ಯಾಸತ್ಯತೆ ತಿಳಿಯಲು ನೀತಿ ನಿರೂಪಣಾ ಸಮಿತಿಗೆ ವಿಷಯವನ್ನು ವರ್ಗಾವಣೆ ಮಾಡಿದ್ದು, ಸಮಿತಿಯನ್ನೂ ರಚನೆ ಮಾಡಲಾಗಿದೆ.
ಪರಿಷತ್ ಕಲಾಪ ಆರಂಭಗೊಳ್ಳುತ್ತಿದ್ದಂತೆ ಪ್ರಕಾಶ್ ರಾಥೋಡ್ ಮೊಬೈಲ್ ವೀಕ್ಷಣೆ ವಿಚಾರ ಕಲಾಪದಲ್ಲಿ ಪ್ರಸ್ತಾಪವಾಯಿತು. ಈ ಕುರಿತು ಚರ್ಚೆ ಬದಲು ಮೊಬೈಲ್ ಬಳಸಿದ್ದಾರಾ, ಮೊಬೈಲ್ ಫೋನ್ ಗ್ಯಾಲರಿ ತೆರೆದು ಫೋಟೋ ವೀಡಿಯೋ ಏನಾದರೂ ನೋಡುತ್ತಿದ್ದರಾ? ಸೆರೆಯಾಗಿರುವ ವಿಡಿಯೋ ದೃಶ್ಯಾವಳಿಯಲ್ಲಿ ಏನೇನಿದೆ? ಎನ್ನುವ ಅಂಶಗಳು ಸೇರಿದಂತೆ ಪ್ರಕರಣದ ಸತ್ಯಾಸತ್ಯತೆ ತಿಳಿಯಲು ನೀತಿ ನಿರೂಪಣಾ ಸಮಿತಿಗೆ ವರ್ಗಾವಣೆ ಮಾಡಲಾಯಿತು.
ಪರಿಷತ್ನಲ್ಲಿ ನೀಲಿಚಿತ್ರ ವೀಕ್ಷಣೆ ಆರೋಪ; ಸತ್ಯಾಸತ್ಯತೆ ಪರಿಶೀಲನೆಗೆ ಸಮಿತಿ - ಕಾಂಗ್ರೆಸ್ ಸದಸ್ಯ ಪ್ರಕಾಶ್ ರಾಥೋಡ್ ವಿರುದ್ಧ ಕಲಾಪದಲ್ಲಿ ಮೊಬೈಲ್ ವೀಕ್ಷಣೆ
ಕಾಂಗ್ರೆಸ್ ಎಂಎಲ್ಸಿ ಪ್ರಕಾಶ್ ರಾಥೋಡ್ ಕಲಾಪದ ವೇಳೆ ನೀಲಿ ಚಿತ್ರ ವೀಕ್ಷಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಆರೋಪದ ಸತ್ಯಾಸತ್ಯತೆ ಪರೀಕ್ಷಿಸಲು ನೀತಿ ನಿರೂಪಣಾ ಸಮಿತಿ ರಚಿಸಲಾಗಿದೆ.
ಪರಿಷತ್ನಲ್ಲಿ ನೀಲಿಚಿತ್ರ ವೀಕ್ಷಣೆ ಆರೋಪ ಪ್ರಕರಣ
ಇನ್ನು ಈ ಸಮಿತಿಗೆ ಮೂವರು ಸದಸ್ಯರನ್ನು ನೇಮಿಸಿದ್ದು, ಕಾಂಗ್ರೆಸ್ ಸದಸ್ಯ ಬಿ.ಕೆ. ಹರಿಪ್ರಸಾದ್, ಬಿಜೆಪಿ ಸದಸ್ಯೆ ತೇಜಸ್ವಿನಿ ಗೌಡ ಮತ್ತು ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡರು ಸತ್ಯಾಸತ್ಯತೆ ಕುರಿತು ಪರಿಶೀಲನೆ ನಡೆಸಿ ಸದನಕ್ಕೆ ವರದಿ ನೀಡಲಿದ್ದಾರೆ.
ಇದನ್ನೂ ಓದಿ:ಆಟವಾಡುತ್ತಿದ್ದಾಗ ಸ್ಫೋಟಗೊಂಡ ಬಾಂಬ್... ಮೂವರು ಮಕ್ಕಳಿಗೆ ಗಾಯ!
TAGGED:
MLC Prakash Rathod case