ಕರ್ನಾಟಕ

karnataka

ETV Bharat / state

ಎಂಎಲ್​​ಸಿ ಪಾಸ್​​​ ದುರುಪಯೋಗ ಆರೋಪ: ಸಿ.ಆರ್.ಮನೋಹರ್ ದೂರು - ವಿಧಾನಸೌಧ ಪೊಲೀಸ್​​ ಠಾಣೆ

ವಿಧಾನಪರಿಷತ್ ಸದಸ್ಯ ಸಿ.ಆರ್.ಮನೋಹರ್, ತಮ್ಮ ಹೆಸರಿನಲ್ಲಿ ಕಾರಿಗೆ ನಕಲಿ‌ ಪಾಸ್ ಮಾಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ವಿಧಾನಸೌಧ ಪೊಲೀಸ್​​ ಠಾಣೆಗೆ ದೂರನ್ನು ನೀಡಿದ್ದಾರೆ.

ಸಿ.ಆರ್. ಮನೋಹರ್

By

Published : Sep 1, 2019, 8:49 AM IST

ಬೆಂಗಳೂರು:ವಿಧಾನ ಪರಿಷತ್ ಸದಸ್ಯ ಸಿ.ಆರ್.ಮನೋಹರ್, ತಮ್ಮ ಹೆಸರಿನಲ್ಲಿ ಕಾರಿಗೆ ನಕಲಿ‌ ಪಾಸ್ ಮಾಡಿಸಿಕೊಂಡಿದ್ದಾರೆ ಎಂದು ಇಬ್ಬರು ಆರೋಪಿಗಳ ವಿರುದ್ಧ ಕ್ರಮ ಗೊಳ್ಳಬೇಕೆಂದು ಆಗ್ರಹಿಸಿ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಕರ್ನಾಟಕ ವಿಧಾನ ಪರಿಷತ್ ಸದಸ್ಯರು ಉಪಯೋಗಿಸುವ ಪಾಸ್ ದುರುಪಯೋಗ ಪಡಿಸಿಕೊಂಡಿರುವ ಆರೋಪ ಹೊತ್ತಿರುವ ನಾಗರಾಜ್ ಹಾಗೂ ಅರುಣ್ ಕುಮಾರ್ ಎಂಬುವರ ವಿರುದ್ಧ ಎಂಎಲ್​ಸಿ ಮನೋಹರ್ ದೂರು ನೀಡಿದ್ದಾರೆ.

ಸಿ.ಆರ್. ಮನೋಹರ್ ಹೆಸರಿನಲ್ಲಿ ನಕಲಿ ಪಾಸ್​​​

ಆರೋಪಿಗಳು ಕೆಎ 02 ಎಂಡಿ 7935 ನಂಬರ್​​​ನ ಸ್ಕಾರ್ಪಿಯೋ ವಾಹನದ ಮೇಲೆ ನಕಲಿ ಪಾಸ್ ಹಾಕಿಕೊಂಡಿದ್ದಾರೆ. ಅನುಮಾನಗೊಂಡು ಮಂಗಳೂರು ಪೊಲೀಸರು ತಪಾಸಣೆ ನಡೆಸಿದಾಗ ಎಂಎಲ್​​​​ಸಿ ಪಾಸ್ ದುರುಪಯೋಗ ಪಡಿಸಿಕೊಂಡಿರುವುದು ಗೊತ್ತಾಗಿದೆ.

ಈ ಬಗ್ಗೆ ಮಂಗಳೂರು ಪೊಲೀಸರು ಕರೆ ಮಾಡಿ ಮಾಹಿತಿ ಪಡೆದ ಹಿನ್ನೆಲೆಯಲ್ಲಿ ಮೇಲ್ಮನೆ ಸದಸ್ಯ ಮನೋಹರ್ ಅವರು ಆರೋಪಿಗಳು‌ ನಕಲಿ ಪಾಸ್ ಸೃಷ್ಟಿಸಿ ಮೋಸ ಮಾಡುವ ಉದ್ದೇಶ ಇಟ್ಟುಕೊಂಡಿದಾರೆ. ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ABOUT THE AUTHOR

...view details