ಬೆಂಗಳೂರು : ಕಾಂಗ್ರೆಸ್ ಪಾದಯಾತ್ರೆ ವೇಸ್ಟ್ ಆಫ್ ಟೈಂ, ವೇಸ್ಟ್ ಆಫ್ ಮನಿ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ವಾಗ್ದಾಳಿ ನಡೆಸಿದರು.
ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ನವರು ಸದನದ ಕಲಾಪ ಹಾಳು ಮಾಡಿದರು. ಜನವಿರೋಧಿಯಾಗಿ ನಡೆದುಕೊಂಡರು. ತಮ್ಮ ಪಾದಯಾತ್ರೆ ಬಗ್ಗೆಯೂ ಸದನದಲ್ಲಿ ಕಾಂಗ್ರೆಸ್ ಚರ್ಚಿಸಲಿಲ್ಲ. ಮೇಕೆದಾಟು, ಎತ್ತಿನಹೊಳೆ, ಮಹದಾಯಿ ವಿಚಾರದಲ್ಲಿ ಕಾಂಗ್ರೆಸ್ ಕೊಡುಗೆ ಶೂನ್ಯ. ಮೇಕೆದಾಟುವಿನ ಡಿಪಿಆರ್ ಮಾಡಿದ್ದು ಹೆಚ್ ಡಿ ಕುಮಾರಸ್ವಾಮಿ. ಯೋಜನೆ ಪ್ರಾರಂಭ ಮಾಡಿದ್ದು ಬಿಜೆಪಿ. ಈಗ ಕಾಂಗ್ರೆಸ್ ನವರು ಅದು ಮಾಡಿ ಇದು ಮಾಡಿ ಅಂತಾರೆ ಎಂದು ಕಿಡಿ ಕಾರಿದರು.