ಹೊಸಕೋಟೆ:ಇತಿಹಾಸದಲ್ಲೇ ಖರೀದಿ ರಾಜಕೀಯ ನಡೆದಿರಲಿಲ್ಲ. ಇಂಥ ಖರೀದಿಗೆ ಹೋದ ಎಂಟಿಬಿ ನಾಗರಾಜ್‌ಗೆ ಮತ ಕೇಳುವ ನೈತಿಕ ಹಕ್ಕಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜ ಕಿಡಿಕಾರಿದ್ದಾರೆ.
ಅನರ್ಹರು ನಾಲಾಯಕ್ ಎಂದು ಕೋರ್ಟ್ ಹೇಳಿದೆ.. ಕೈ ಎಂಎಲ್‌ಸಿ ಡಿಸೋಜ - ಹೊಸಕೋಟೆ ಬೈ ಎಲೆಕ್ಷನ್
ಉಪಚುನಾವನೆ ನಡೆಯುವುದು ಆ ಕ್ಷೇತ್ರದ ಜನಪ್ರತಿನಿಧಿ ವಿಧಿವಶರಾದಾಗ ಇಲ್ಲವೇ ರಾಜಕೀಯ ಬೇಡ ಎಂದು ನಿರ್ಧರಿಸಿದಾಗ. ಆದರೆ, ಒಂದು ಸರ್ಕಾರವನ್ನು ಕೆಡವಿ ಸ್ವಾರ್ಥಕ್ಕಾಗಿ ಹೋದಾಗ ಅಲ್ಲ ಎಂದು ಕಾಂಗ್ರೆಸ್‌ನ ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜ ಅನರ್ಹ ಶಾಸಕರ ವಿರುದ್ಧ ಕುಟುಕಿದ್ದಾರೆ.
ಪಟ್ಟಣದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಭ್ಯರ್ಥಿ ಪದ್ಮಾವತಿ ಸುರೇಶ್ಗೆ ಮಹಿಳೆಯರು ಸ್ವಾಭಿಮಾನದ ಮತ ಹಾಕುವ ಮೂಲಕ ಪಕ್ಷಾಂತರಿಗಳಿಗೆ ತಕ್ಕ ಪಾಠ ಕಲಿಸಬೇಕು. ಸಿದ್ದರಾಮಯ್ಯ ಕೊಟ್ಟ ಅನುದಾನದಿಂದ ಕ್ಷೇತ್ರದ ಅಭಿವೃದ್ಧಿಯಾಗಿದೆ. ಅಂತಹ ಪಕ್ಷಕ್ಕೆ ಮೋಸ ಮಾಡಿದ್ದಾರೆ ಎಂದು ಎಂಟಿಬಿ ವಿರುದ್ಧ ಹರಿಹಾಯ್ದಿದ್ದಾರೆ.
ಯಾವ ಕಾರಣಕ್ಕೂ ಎಂಟಿಬಿ ನಾಗರಾಜು ಅವರನ್ನು ಗೆಲ್ಲಿಸಬೇಡಿ. ಉಪಚುನಾವಣೆ ನಡಿಯೋದು ಚುನಾಯಿತ ಪ್ರತಿನಿಧಿ ವಿಧಿವಶರಾದಾಗ ಅಥವಾ ರಾಜಕೀಯವೇ ಬೇಡ ಎಂದು ರಾಜೀನಾಮೆ ನೀಡಿದಾಗ ಮಾತ್ರ. ಆದರೆ, ಸಮ್ಮಿಶ್ರ ಸರ್ಕಾರವನ್ನು ಬೀಳಿಸಿ, ತಮ್ಮ ಬೇಳೆ ಬೇಯಿಸಿಕೊಳ್ಳಲು ಬಿಜೆಪಿ ಹೋಗಿರುವುದು ರಾಜ್ಯದ ಜನತೆಗೆ ತಿಳಿದಿದೆ. 15 ಅನರ್ಹ ಶಾಸಕರನ್ನು ಸೋಲಿಸಿ ಮುಂದೆ ನಮ್ಮ ಪಕ್ಷ ಅಧಿಕಾರಕ್ಕೆ ಬರಲಿದೆ. ಮಹಿಳೆಯರ ಬಗ್ಗೆ ಹಗುರವಾಗಿ ಮಾತನಾಡುವ ನಾಗರಾಜ್‌ಗೆ ಮತದಾರರೇ ಬುದ್ಧಿ ಕಲಿಸುತ್ತಾರೆ ಎಂದರು.