- ಬೆಂಗಳೂರು: ಮಹದೇವಪುರದ ಕ್ಷೇತ್ರದ ವ್ಯಾಪ್ತಿಯಲ್ಲಿ ವಿಧಾನ ಪರಿಷತ್ ಚುನಾವಣೆಯು ಶಾಂತಿಯುತವಾಗಿ ಶೇಕಡಾ 100 ರಷ್ಟು ಮತದಾನ ನಡೆಯಿತು.
- ಬೆಂಗಳೂರು ಗ್ರಾಮಾಂತರ ಕ್ಷೇತ್ರ ವಿಧಾನ ಪರಿಷತ್ ಚುನಾವಣೆಯಲ್ಲಿ ಶೇಕಡಾ 99.91 ರಷ್ಟು ಮತದಾನವಾಗಿದೆ.
- ಉತ್ತರ ಕನ್ನಡ: ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗುವ ವಿಧಾನ ಪರಿಷತ್ ಚುನಾವಣಾ ಮತದಾನ ಜಿಲ್ಲೆಯಾದ್ಯಂತ ಬಹುತೇಕ ಶಾಂತಿಯುತವಾಗಿ ನಡೆದಿದ್ದು, ಜಿಲ್ಲೆಯಲ್ಲಿ ಶೇ.99.73 ರಷ್ಟು ಮತದಾನವಾಗಿದೆ.
- ಶಿವಮೊಗ್ಗ ಸ್ಥಳೀಯ ಸಂಸ್ಥೆಯ ವಿಧಾನ ಪರಿಷತ್ ಚುನಾವಣೆಯಲ್ಲಿ ಶೇ 99.86 ರಷ್ಟು ಮತದಾನವಾಗಿದೆ.
- ಕೊಡಗು ಜಿಲ್ಲೆಯಲ್ಲಿ ವಿಧಾನ ಪರಿಷತ್ ಚುನಾವಣೆ: ಶೇಕಡಾ 99.70ರಷ್ಟು ಮತದಾನ
MLC Election: ಮತಪೆಟ್ಟಿಗೆ ಸೇರಿದ ಅಭ್ಯರ್ಥಿಗಳ ಭವಿಷ್ಯ.. ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನ? - ವಿಧಾನ ಪರಿಷತ್ ಚುನಾವಣೆ
20:22 December 10
ಮಹದೇವಪುರದ ಕ್ಷೇತ್ರದಲ್ಲಿ ಶೇ.100 ರಷ್ಟು ಮತದಾನ
19:55 December 10
ಯಾದಗಿರಿ ಜಿಲ್ಲೆಯಲ್ಲಿ ಶೇ.99.72 ರಷ್ಟು ಜನರಿಂದ ಹಕ್ಕು ಚಲಾವಣೆ
- ಕಲಬುರಗಿ-ಯಾದಗಿರಿ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆ
- ಶೇ.99.72 ರಷ್ಟು ಜನರಿಂದ ಹಕ್ಕು ಚಲಾವಣೆ
- 2458 ಮತದಾರರಲ್ಲಿ 2451 ಜನರಿಂದ ಮತದಾನ
19:41 December 10
ದಕ್ಷಿಣ ಕನ್ನಡದಲ್ಲಿ ಶೇ.99.55 ರಷ್ಟು ಮತದಾನ
- ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ಚುನಾವಣಾ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ದ್ವೈವಾರ್ಷಿಕ ಚುನಾವಣೆ
- ಶೇ.99.55 ರಷ್ಟು ಮತದಾನ; 6,040 ಮತದಾರರ ಪೈಕಿ 6,013 ಮಂದಿಯಿಂದ ಹಕ್ಕು ಚಲಾವಣೆ
- ಉಡುಪಿ ಜಿಲ್ಲೆಯ ಬೈಂದೂರು, ಹೆಬ್ರಿ, ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದರೆ, ಬಂಟ್ವಾಳ, ಕಡಬ ಸೇರಿದಂತೆ 5 ತಾಲೂಕುಗಳಲ್ಲಿ ಶೇ.100 ರಷ್ಟು ವೋಟಿಂಗ್
- ಮಂಗಳೂರಿನ ಪಾಂಡೇಶ್ವರದ ರೊಸಾರಿಯೊ ಪಿಯು-ಡಿಗ್ರಿ ಕಾಲೇಜಿನಲ್ಲಿ ಡಿ.14 ರಂದು ಮತ ಎಣಿಕೆ
19:15 December 10
ಮೇಲ್ಮನೆಗೆ ಮತದಾನ ಮಾಡದ 7 ಮಂದಿ: ಚಾಮರಾಜನಗರದಲ್ಲಿ 99.69% ವೋಟಿಂಗ್
- ವಿಧಾನ ಪರಿಷತ್ ಚುನಾವಣೆಗೆ ಚಾಮರಾಜನಗರದಲ್ಲಿ ಶೇ. 99.69ರಷ್ಟು ಮತದಾನ
- 7 ಮಂದಿ ಹೊರತುಪಡಿಸಿ ಎಲ್ಲರೂ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ
- 2275 ಮತದಾರರಲ್ಲಿ 2268 ಮತದಾನ ಮಾಡಿದ್ದಾರೆ
19:09 December 10
ವಿಜಯಪುರ-ಬಾಗಲಕೋಟೆಯಲ್ಲಿ ಶೇ.99.86 ರಷ್ಟು ವೋಟಿಂಗ್
- ವಿಜಯಪುರ-ಬಾಗಲಕೋಟೆ ಎಂಎಲ್ಸಿ ಚುನಾವಣೆ
- ಒಟ್ಟು ಶೇ.99.86 ರಷ್ಟು ಮತದಾನ
- ವಿಜಯಪುರದಲ್ಲಿ ಹಕ್ಕು ಚಲಾಯಿಸಿದ 3931 ಮತದಾರರು
- ಬಾಗಲಕೋಟೆಯಲ್ಲಿ 3432 ಜನರಿಂದ ವೋಟಿಂಗ್
- ಡಿಸೆಂಬರ್ 14 ರಂದು ಮತ ಎಣಿಕೆ ಹಾಗೂ ಫಲಿತಾಂಶ ಪ್ರಕಟವಾಗಲಿದೆ
19:02 December 10
ಮಂಡ್ಯದಲ್ಲಿ ಶೇ.99.85 ರಷ್ಟು ಮತದಾನ
- ಮಂಡ್ಯದಲ್ಲಿ ಶಾಂತಿಯುತ ಮತದಾನ
- ಹಕ್ಕು ಚಲಾಯಿಸಿದ ಶೇ.99.85 ರಷ್ಟು ಮತದಾರರು
- 4024 ಮತದಾರರ ಪೈಕಿ 4018 ಮಂದಿಯಿಂದ ಮತದಾನ
- ಕೆ.ಆರ್.ಪೇಟೆ ಪುರಸಭೆಯಲ್ಲಿ ಸಚಿವ ನಾರಾಯಣ್ ಗೌಡ ವೋಟಿಂಗ್
- ನಗರಸಭೆಯಲ್ಲಿ ಸಂಸದೆ ಸುಮಲತಾ, ಶಾಸಕ ಎಂ.ಶ್ರೀನಿವಾಸ್ ಹಕ್ಕು ಚಲಾವಣೆ
18:23 December 10
ಪರಿಷತ್ ಚುನಾವಣೆ - ಬೆಳಗಾವಿಯಲ್ಲಿ ಶೇ.99.97, ಧಾರವಾಡದಲ್ಲಿ ಶೇ.99.63 ರಷ್ಟು ಮತದಾನ
- ಬೆಳಗಾವಿ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆ
- ಜಿಲ್ಲೆಯಲ್ಲಿ ಶೇಕಡ 99.97ರಷ್ಟು ಮತದಾನ
- 8849 ಮತದಾರರ ಪೈಕಿ 8846 ಮತದಾರರಿಂದ ಹಕ್ಕು ಚಲಾವಣೆ
- ಧಾರವಾಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಲ್ಲಿ ಒಟ್ಟು ಶೇ.99.63 ರಷ್ಟು ವೋಟಿಂಗ್
- ಈ ಪೈಕಿ ಹುಬ್ಬಳ್ಳಿ-ಧಾರವಾಡದಲ್ಲಿ ಶೇ.99.31, ಹಾವೇರಿ- ಶೇ.99.85 & ಗದಗದಲ್ಲಿ ಶೇ.99.59 ಮತದಾನ
17:09 December 10
ಟೀಕಾಕಾರರಿಗೆ ಗೆಲುವಿನ ಮೂಲಕ ಉತ್ತರ ನೀಡುತ್ತೇನೆ: ಸೂರಜ್ ರೇವಣ್ಣ
- ವಿಧಾನ ಪರಿಷತ್ಗೆ ನನ್ನ ಸ್ಪರ್ಧೆ ಅನಿರೀಕ್ಷಿತವಾಗಿದ್ದು
- ಟೀಕೆ ಮಾಡುವವರಿಗೆ ಗೆಲುವಿನ ಮೂಲಕ ಉತ್ತರ ನೀಡುತ್ತೇನೆ
- ಮೈಸೂರಿನಲ್ಲಿ ಹಾಸನ ಕ್ಷೇತ್ರದ ಅಭ್ಯರ್ಥಿ ಸೂರಜ್ ರೇವಣ್ಣ ಹೇಳಿಕೆ
16:56 December 10
ಶಿರಸಿಯಲ್ಲಿ ಕಾಗೇರಿ, ಹೆಗಡೆಯಿಂದ ಮತ ಚಲಾವಣೆ
- ಶಿರಸಿಯಲ್ಲಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಕಾಗೇರಿ, ಸಂಸದ ಅನಂತಕುಮಾರ್ ಹೆಗಡೆಯಿಂದ ಮತ ಚಲಾವಣೆ
- ಸಂಸದರು ಬಂದಾಗ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಕೈ ಕುಲುಕಿದ್ದು ವಿಶೇಷವಾಗಿತ್ತು
- ಬಿಜೆಪಿಗೆ ಗೆಲುವು ಕಷ್ಟ ಅನ್ನೋ ಪ್ರಶ್ನೆಗೆ, ಹೌದಾ? ಅದ್ರ ಬಗ್ಗೆ ನನಗೆ ಗೊತ್ತಿಲ್ಲ ಎಂದ ಅನಂತಕುಮಾರ್ ಹೆಗಡೆ
- ಬಿಜೆಪಿ ಚುನಾವಣೆಯಲ್ಲಿ ಗೆಲ್ಲುತ್ತೆ ಎಂದಷ್ಟೇ ಹೇಳಿ ಹೋದ ಸಂಸದರು
- ಚುನಾವಣೆ ಹೇಗೆ ನಡೆದಿದೆ ಅನ್ನೋದನ್ನ ನಾವು ಆತ್ಮಾವಲೋಕನ ಮಾಡಿಕೊಳ್ಬೇಕು
- ಇನ್ನಷ್ಟು ಶಕ್ತಿ ಕೊಡಬೇಕಿದ್ರೆ ಇದರ ಸಿಂಹಾವಲೋಕನ ಅಗತ್ಯ
- ಘನತೆಯನ್ನ ಹೊಂದಿರೋ ವಿಧಾನ ಪರಿಷತ್ಗೆ ಆಯ್ಕೆಯಾಗೋರು ಉತ್ತಮ ಕೆಲಸ ಮಾಡ್ಲಿ ಅಂತ ಹಾರೈಸುತ್ತೇನೆ
- ಚುನಾವಣೆಯಲ್ಲಿ ಹಣದ ಹರಿವಿನ ಬಗ್ಗೆ ಮಾತನಾಡಿದ ಕಾಗೇರಿ
15:55 December 10
ಕಾರ್ಯಕರ್ತರ ಶ್ರಮ- ಸಂಘಟನೆಯ ಶಕ್ತಿ ಮೇಲೆ ಗೆಲ್ತೇನೆ: ಬಿಜೆಪಿ ಅಭ್ಯರ್ಥಿ ಡಿಎಸ್ ಅರುಣ್
- ಹತ್ತು ವಿಧಾನ ಸಭಾ ಕ್ಷೇತ್ರಗಳಲ್ಲಿ ಮೂರು ಬಾರಿ ಪ್ರವಾಸ ಮಾಡಿದ್ದೇನೆ ಎಲ್ಲಾ ಕಡೆಯಲ್ಲು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ
- ಕಾರ್ಯಕರ್ತರ ಶ್ರಮ ಹಾಗೂ ಸಂಘಟನೆಯ ಶಕ್ತಿ ಮೇಲೆ ಬಾರಿ ಅಂತರದಲ್ಲಿ ಗೆಲವು ಸಾಧಿಸಲಿದ್ದೇನೆ
- ನಮ್ಮ ಪಕ್ಷದ ಬೆಂಬಲಿತ ಜನಪ್ರತಿನಿಧಿಗಳೆ ಹೆಚ್ಚು ಸಂಖ್ಯೆಯಲ್ಲಿರುವುದರಿಂದ 3,000ಕ್ಕೂ ಹೆಚ್ಚು ಮತ ಪಡೆದು ಗೆಲ್ತೇನೆ
- ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿ ಡಿಎಸ್ ಅರುಣ್ ವಿಶ್ವಾಸ
15:49 December 10
ಮತದಾನ ಬಹಿಷ್ಕಾರ ಮಾಡಿದ ಏಳು ಜನ ಸದಸ್ಯರಲ್ಲಿ ಐವರಿಂದ ಮತದಾನ
- ವಿಧಾನ ಪರಿಷತ್ ಚುನಾವಣೆಗೆ ಮತದಾನ ಬಹಿಷ್ಕಾರ ಮಾಡುವುದಾಗಿ ಘೋಷಿಸಿದ್ದ ನಾಲೂರು ಗ್ರಾ.ಪಂ ಸದಸ್ಯರು
- ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ನಾಲೂರು ಗ್ರಾಮ
- ಗ್ರಾಮದ ಅಭಿವೃದ್ದಿಗೆ ಅನುದಾನ ನೀಡದ ಸರ್ಕಾರದ ನೀತಿಯನ್ನು ಖಂಡಿಸಿದ್ದ 7 ಸದಸ್ಯರು
- ಇವರಲ್ಲಿ ಇಂದು ಐದು ಮಂದಿಯಿಂದ ಮತದಾನ
15:38 December 10
ದಾವಣಗೆರೆಯಲ್ಲಿ ಹಕ್ಕು ಚಲಾವಣೆ ಮಾಡಿದ ಜನ ಪ್ರತಿನಿಧಿಗಳಿವರು..
- ಟ್ಯಾಕ್ಟರ್ನಲ್ಲಿ ಮತಗಟ್ಟೆಗೆ ಬಂದು ವೋಟ್ ಮಾಡಿದ ಹೊನ್ನಾಳಿ ಶಾಸಕ ಎಂಪಿ ರೇಣುಕಾಚಾರ್ಯ
- ಪಾಲಿಕೆಯ ಸದಸ್ಯರೊಂದಿಗೆ ಆಗಮಿಸಿ ಹಕ್ಕು ಚಲಾಯಿಸಿದ ಸಂಸದ ಜಿಎಂ ಸಿದ್ದೇಶ್ವರ್
- ಹಾಲಿ ಪರಿಷತ್ ಸದಸ್ಯರಾದ ತೇಜಸ್ವಿನಿ ಗೌಡ ಹಾಗೂ ಆರ್ ಶಂಕರ್ರಿಂದ ಮತದಾನ
- ಕೈ ಅಭ್ಯರ್ಥಿ ಸೋಮಶೇಖರ್ ಪರ ಹಿರಿಯ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ವೋಟ್
15:31 December 10
ಎಲ್ಲಾ ಕ್ಷೇತ್ರಗಳಲ್ಲೂ ಗೆಲ್ತೇವೆ: ಸಿಎಂ ಬೊಮ್ಮಾಯಿ ವಿಶ್ವಾಸ
- ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಿದ ಎಲ್ಲಾ ಕ್ಷೇತ್ರಗಳಲ್ಲೂ ಗೆಲ್ತೇವೆ
- ಒಂದೊಂದು ಚುನಾವಣೆ ಅದರದ್ದೆ ಆದಂತ ಮತದಾರರ ಮೇಲೆ ತೀರ್ಮಾನ ಆಗುತ್ತದೆ
- ಉಪಚುನಾವಣೆ ಇರಲಿ, ವಿಧಾನ ಪರಿಷತ್ ಚುನಾವಣೆ ಇರಲಿ ಅದರ ನೆಲೆಗಟ್ಟಿನ ಮೇಲಾಗುತ್ತೆ
- ಅವತ್ತಿನ ಸಂದರ್ಭದಲ್ಲಿ ಯಾವ ರಾಜಕೀಯ ಸನ್ನಿವೇಶ ಇರುತ್ತೋ ಆ ನೆಲೆಗಟ್ಟಿನ ಮೇಲೆ ಆಗುತ್ತೆ
- ಬೆಳಗಾವಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ
15:24 December 10
ಫಸ್ಟ್ ರೌಂಡ್‌ನಲ್ಲೇ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸ್ತಾರೆ - ಲಕ್ಷ್ಮಿ ಹೆಬ್ಬಾಳ್ಕರ್
- ಬೆಳಗಾವಿಯಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹಕ್ಕು ಚಲಾವಣೆ
- ಪರಿಷತ್ ಚುನಾವಣೆಯಲ್ಲಿ ಸತೀಶ್ ಅಣ್ಣಾ ಜಾರಕಿಹೊಳಿ ನೇತೃತ್ವದಲ್ಲಿ ಒಗ್ಗಟ್ಟಾಗಿ ಕೆಲಸ ಮಾಡಿದ್ದೇವೆ
- ಗೋಕಾಕ, ಅರಬಾವಿ ಸೇರಿ 14 ತಾಲೂಕುಗಳಲ್ಲಿ ಕಾಂಗ್ರೆಸ್ ಪಕ್ಷದ ಮತದಾರರು ಇದ್ದಾರೆ
- ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವಷ್ಟು ಮತಗಳಿವೆ
- ನಾನೇ 11 ದಿನಗಳ ಕಾಲ ಚಿಕ್ಕೋಡಿ ಲೋಕಸಭೆಯಲ್ಲಿ ಇದ್ದು ಪ್ರಚಾರ ಮಾಡಿರುವೆ
- ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪರ ವಾತಾವರಣ ವಿದೆ
- ಫಸ್ಟ್ ರೌಂಡ್‌ನಲ್ಲೇ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸ್ತಾರೆ
- ದೇವರ ಆಶೀರ್ವಾದ, ಮತದಾರರ ಆಶೀರ್ವಾದ ಇದೆ
- ಚುನಾವಣೆ ಅಂದಮೇಲೆ ನಮ್ಮ ನಾಯಕರು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಬಂದಿದ್ದರು
- ಮತದಾರರಿಗೆ ಯಾರು ಪರಿಣಾಮ ಬೀರುತ್ತಾರೆ ಅನ್ನೋದು ಮುಖ್ಯ
- ಹಾನಗಲ್ ವಿಧಾನಸಭೆ ಚುನಾವಣೆ ಫಲಿತಾಂಶ ನಮಗೆ ಇಲ್ಲಿ ನೋಡಲು ಸಿಗಲಿದೆ
- ಮತದಾನದ ಬಳಿಕ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ಹೆಬ್ಬಾಳ್ಕರ್
15:19 December 10
ಧಾರವಾಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಲ್ಲಿ ಒಟ್ಟು ಶೇ.84.06 ರಷ್ಟು ಮತದಾನ
- ಹಾವೇರಿಯಲ್ಲಿ ಮಧ್ಯಾಹ್ನ 2 ಗಂಟೆಯವರೆಗೆ ಶೇ.88.93ರಷ್ಟು ಮತದಾನ
- ಧಾರವಾಡದಲ್ಲಿ ಶೇ.68.98 ಹಾಗೂಗದಗದಲ್ಲಿ ಶೇ.92. 93ರಷ್ಟು ವೋಟಿಂಗ್
- ಒಟ್ಟು ಧಾರವಾಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಲ್ಲಿ ಶೇ.84.06 ರಷ್ಟು ಮತದಾನ
15:16 December 10
ಸಚಿವ ಎಸ್ ಅಂಗಾರರಿಂದ ಮತ ಚಲಾವಣೆ
- ಸುಳ್ಯ ನಗರಸಭೆ ಮತಕೇಂದ್ರದಲ್ಲಿ ಸಚಿವ ಎಸ್ ಅಂಗಾರರಿಂದ ವೋಟಿಂಗ್
- ಚನ್ನಕೇಶವ ದೇಗುಲದಲ್ಲಿ ಪೂಜೆ ಸಲ್ಲಿಸಿದ ನಂತರ ಮತ ಚಲಾಯಿಸಿದ ಸಚಿವ
- ಸುಳ್ಯ,ಕಡಬ ತಾಲೂಕಿನಲ್ಲಿ ಮತದಾನ ಬಹುತೇಕ ಪೂರ್ಣ
15:15 December 10
ಹಕ್ಕು ಚಲಾಯಿಸಿದ ಶೋಭಾ ಕರಂದ್ಲಾಜೆ
- ಚಿಕ್ಕಮಗಳೂರು ವಿಧಾನ ಪರಿಷತ್ ಚುನಾವಣೆ
- ಮೂಡಿಗೆರೆ ಪಟ್ಟಣ ಪಂಚಾಯಿತಿಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತದಾನ
- ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿ ಎಂಕೆ ಪ್ರಾಣೇಶ್ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ ನಡುವೆ ಪೈಪೋಟಿ
- ಮಧ್ಯಾಹ್ನ 2 ಗಂಟೆಯವರೆಗೆ 68.18ರಷ್ಟು ಮತದಾನ
14:29 December 10
ಮತದಾನದ ಗುಟ್ಟು ಬಿಟ್ಟು ಕೊಟ್ಟ ಸತೀಶ್ ಜಾರಕಿಹೊಳಿ
- ಬೆಳಗಾವಿಯಲ್ಲಿ ಮತದಾನದ ಗುಟ್ಟು ಬಿಟ್ಟು ಕೊಟ್ಟ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ
- ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ ಪರವಾಗಿ ಮತ ಚಲಾವಣೆ ಮಾಡಿದ್ದೇವೆ
- ಮೊದಲ ಪ್ರಾಶಸ್ತ್ಯ ಮತದಲ್ಲೇ ಗೆಲುತ್ತೇವೆ
- ಮೂರು ಜನರಲ್ಲಿ ಈಗ ಸ್ಪರ್ಧೆ ಇದ್ದು ಇಬ್ಬರಿಗಿಂತ ಹೆಚ್ಚು ಮತ ನಾವು ಪಡೆಯುತ್ತೇವೆ
- ಹದಿನೈದು ದಿನಗಳಿಂದ ಜಿಲ್ಲೆಯಲ್ಲಿ ಪ್ರಚಾರ ಮಾಡುತ್ತಿದ್ದೇವೆ
- ಶಾಸಕರು, ಮಾಜಿ ಶಾಸಕರು ಎಲ್ಲರೂ ಒಮ್ಮತದಿಂದ ಪ್ರಚಾರ ಮಾಡಿದ್ದೇವೆ
- ಕಾಂಗ್ರೆಸ್ ಗೆಲ್ಲುವಷ್ಟು ಸಂಖ್ಯಾಬಲ ನಮ್ಮಲ್ಲಿದೆ
- ಮಹಾಂತೇಶ್ ಕವಟಗಿಮಠ ಇಲ್ಲಾ ಲಖನ್ ಜಾರಕಿಹೊಳಿ ಇಬ್ಬರಲ್ಲಿ ಒಬ್ಬರು ಗೆಲ್ಲಬೇಕು
- ಲಖನ್ ಜಾರಕಿಹೊಳಿ ಆರು ತಿಂಗಳ ಹಿಂದೆ ನಮ್ಮ ಪಕ್ಷದಲ್ಲಿ ಇದ್ರೂ, ಈಗ ಇಲ್ಲ
- ರಮೇಶ್ ಜಾರಕಿಹೊಳಿ ಅವರ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ
- ಇಬ್ಬರು ಮೂರು ಜನ ಲಖನ್ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ
- ಲಖನ್ ಜಾರಕಿಹೊಳಿ ಎನೇ ಇದ್ರೂ ಬಿಜೆಪಿ ಬಿ ಟೀಮ್
- ಗೋಕಾಕ್, ಅರಭಾವಿಯಲ್ಲಿ ಸ್ವಯಂ ಆಗಿ ಮೊದಲ ಬಾರಿ ಮತದಾನ ಮಾಡುತ್ತಿದ್ದಾರೆ
- ಇದೇ ನಮ್ಮ ಮೊದಲ ಗೆಲುವು ಎಂದ ಸತೀಶ್ ಜಾರಕಿಹೊಳಿ
14:24 December 10
16 ಸ್ಥಾನಗಳಲ್ಲಿ ನಾವು ಗೆಲ್ತೇವೆ: ಸಚಿವ ಕೆ.ಎಸ್ ಈಶ್ವರಪ್ಪ
- ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಸಚಿವ ಕೆ.ಎಸ್ ಈಶ್ವರಪ್ಪ ಮತದಾನ
- ಪರಿಷತ್ ಚುನಾವಣೆಯಲ್ಲಿ 16 ಸ್ಥಾನ ಗೆಲ್ಲುತ್ತೇವೆ ಎಂದ ಸಚಿವರು
- ನಮ್ಮ ಅಭ್ಯರ್ಥಿ ಡಿ.ಎಸ್ ಅರುಣ್ ಅತ್ಯಧಿಕ ಮತಗಳ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ
- ವಿಶ್ವಾಸ ವ್ಯಕ್ತಪಡಿಸಿದ ಈಶ್ವರಪ್ಪ
14:18 December 10
ಬಿಜೆಪಿ ಪಕ್ಷದವರಿಗೆ ಬದ್ಧತೆ-ಶಕ್ತಿ ಇಲ್ಲ ಎಂಬುದು ಚುನಾವಣೆಯಲ್ಲಿ ಸಾಬೀತಾಗತ್ತೆ: ಡಿಕೆಶಿ
- ಬೆಂಗಳೂರು ಗ್ರಾಮಾಂತರ ಎಂಎಲ್ಸಿ ಚುನಾವಣೆ
- ರಾಮನಗರ ಜಿಲ್ಲೆ ಕನಕಪುರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತದಾನ
- ಡಿಕೆಶಿಗೆ ಸಾಥ್ ನೀಡಿದ ನಗರಸಭಾ ಸದಸ್ಯರು
- ಈ ಬಾರಿ ಚುನಾವಣೆಯಲ್ಲಿ ನಮ್ಮ ನಿರೀಕ್ಷೆಗೂ ಹೆಚ್ಚು ಸ್ಥಾನ ಬರಲಿದೆ
- ಕಾಂಗ್ರೆಸ್ ಪಕ್ಷದ ಜೊತೆ ಜನತೆ ಇದ್ದಾರೆಂಬುದಕ್ಕೆ ಈ ಚುನಾವಣೆಯ ಫಲಿತಾಂಶದಿಂದ ಗೊತ್ತಾಗುತ್ತೆ
- ಬಿಜೆಪಿ ಪಕ್ಷದವರಿಗೆ ಬದ್ಧತೆ ಹಾಗೂ ಶಕ್ತಿ ಎರಡು ಕೂಡ ಇಲ್ಲ ಎಂಬುದು ಈ ಚುನಾವಣೆಯಲ್ಲಿ ಸಾಬೀತಾಗತ್ತೆ
- ವೋಟ್ ಮಾಡಿದ ಬಳಿಕ ಡಿಕೆಶಿ ಹೇಳಿಕೆ
14:06 December 10
ಸಿದ್ದು ಎಲ್ಲಿ ನಿಂತ್ರೂ ಗೆಲ್ತಾರೆ, ಚಾಮರಾಜನಗರಕ್ಕೆ ಬಂದ್ರೆ ಕ್ಷೇತ್ರ ಬಿಟ್ಟು ಕೊಡುವೆ: ಶಾಸಕ ಪುಟ್ಟರಂಗಶೆಟ್ಟಿ
- ಮಾಜಿ ಸಿಎಂ ಸಿದ್ದರಾಮಯ್ಯ ಎಲ್ಲಿ ನಿಂತರೂ ಗೆಲ್ತಾರೆ
- ವಿಧಾನಸಭಾ ಚುನಾವಣೆಗೆ ಚಾಮರಾಜನಗರಕ್ಕೆ ಬಂದರೆ ನನ್ನ ಕ್ಷೇತ್ರ ಬಿಟ್ಟು ಕೊಡುತ್ತೇನೆ
- ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಜಿಲ್ಲೆಯ ಅಭಿವೃದ್ಧಿಗೆ ನೂರಾರು ಕೋಟಿ ಅನುದಾನ ಕೊಟ್ಟಿದ್ದಾರೆ
- ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಸ್ಪರ್ಧಿಸುವಂತೆ ಆಹ್ವಾನ ನೀಡುವೆ
- ಮೈಸೂರು-ಚಾಮರಾಜನಗರ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ತಿಮ್ಮಯ್ಯ ಗೆಲ್ಲಲಿದ್ದಾರೆ
- ವೋಟ್ ಮಾಡಿದ ಬಳಿಕ ಕೈ ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತು
14:06 December 10
ಮೈಸೂರು-ಚಾಮರಾಜನಗರದಲ್ಲಿ ಶೇ.45ರಷ್ಟು ಮತದಾನ
- ಮೈಸೂರು-ಚಾಮರಾಜನಗರ ಪರಿಷತ್ ಚುನಾವಣೆ
- ಬೆಳಗ್ಗೆ 8 ರಿಂದ ಮಧ್ಯಾಹ್ನ 1 ರವರೆಗೆ ಶೇ.45ರಷ್ಟು ಮತದಾನ
- ಈವರೆಗೆ 1030 ಮತದಾರರಿಂದ ವೋಟಿಂಗ್
- ಚಾಮರಾಜನಗರ ತಾಲೂಕಿನಲ್ಲಿ ಶೇ. 40.87, ಗುಂಡ್ಲುಪೇಟೆಯಲ್ಲಿ ಶೇ.55.85
- ಯಳಂದೂರಿನಲ್ಲಿ ಶೇ. 42.44, ಕೊಳ್ಳೆಗಾಲದಲ್ಲಿ ಶೇ.16.72 ಹಾಗೂ ಹನೂರು ತಾಲೂಕಿಲ್ಲಿ ಶೇ.63.7 ರಷ್ಟು ಮತದಾನ
13:52 December 10
ಶಾಸಕ ರಮೇಶ್ ಜಾರಕಿಹೊಳಿಯಿಂದ ಮತದಾನ
- ಹಕ್ಕು ಚಲಾವಣೆ ಮಾಡಿದ ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ
- ಗೋಕಾಕ ನಗರಸಭೆ ಕಾರ್ಯಾಲಯದ ಮತಗಟ್ಟೆಯಲ್ಲಿ ಮತದಾನ
13:46 December 10
ಪಕ್ಷೇತರರಿಂದ ಯಾವುದೇ ನಷ್ಟವಿಲ್ಲ, ಬಿಜೆಪಿ ಗೆಲುವು ನಿಶ್ಚಿತ: ಶೆಟ್ಟರ್ ವಿಶ್ವಾಸ
- ಭಾರತೀಯ ಜನತಾ ಪಕ್ಷಕ್ಕೆ ಪಕ್ಷೇತರ ಅಭ್ಯರ್ಥಿಗಳಿಂದ ಯಾವುದೇ ಹಾನಿಯಾಗುವುದಿಲ್ಲ
- ಪರಿಷತ್ ಚುನಾವಣೆಯಲ್ಲಿ 15ಕ್ಕೂ ಹೆಚ್ಚು ಸ್ಥಾನವನ್ನು ಬಿಜೆಪಿ ಗೆಲ್ಲಲಿದೆ
- ಧಾರವಾಡ, ಗದಗ, ಹಾವೇರಿಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರದೀಪ ಶೆಟ್ಟರ್ ಪ್ರಚಂಡ ಬಹುಮತ ಪಡೆದು ಗೆಲ್ತಾರೆ
- ಹುಬ್ಬಳ್ಳಿಯಲ್ಲಿ ಮತ ಚಲಾಯಿಸಿದ ಬಳಿಕ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿಕೆ
13:35 December 10
ಸತೀಶ್ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳ್ಕರ್ ಮತದಾನ
- ಬೆಳಗಾವಿ ವಿಧಾನ ಪರಿಷತ್ ದ್ವಿಸದಸ್ಯ ಸ್ಥಾನಕ್ಕೆ ಚುನಾವಣೆ
- ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮತದಾನ
- 13 ಜನ ಪಾಲಿಕೆ ಸದಸ್ಯರ ಜೊತೆಗೆ ಮಹಾನಗರ ಪಾಲಿಕೆಯಲ್ಲಿ ವೋಟ್ ಮಾಡಿದ ಕೈ ನಾಯಕರು
- ಮತದಾನಕ್ಕೂ ಮುನ್ನ ಸತೀಶ್ ಜಾರಕಿಹೊಳಿ ಕಾಲಿಗೆ ನಮಸ್ಕರಿಸಿದ ಲಕ್ಷ್ಮಿ ಹೆಬ್ಬಾಳ್ಕರ್
- ಅಕ್ಕಪಕ್ಕದಲ್ಲಿ ಕುಳಿತು ಕೆಲಹೊತ್ತು ಚರ್ಚೆ
13:33 December 10
ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವರು, ಶಾಸಕರಿಂದ ಹಕ್ಕು ಚಲಾವಣೆ
- ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ರಿಂದ ಮತದಾನ
- ಶಾಸಕರುಗಳಾದ ಅರವಿಂದ ಬೆಲ್ಲದ್, ಅಮೃತ ದೇಸಾಯಿ, ವಿ.ಎಸ್.ಸಂಕನೂರ, ಅಭ್ಯರ್ಥಿ ಪ್ರದೀಪ್ ಶೆಟ್ಟರ್ರಿಂದ ಹಕ್ಕು ಚಲಾವಣೆ
- ಹುಬ್ಬಳ್ಳಿ ಪಾಲಿಕೆ ಕಚೇರಿಯ ಮತಗಟ್ಟೆ 144ರಲ್ಲಿ ವೋಟಿಂಗ್
13:27 December 10
ಮತಗಟ್ಟೆಗೆ ಧಾರವಾಡ ಡಿಸಿ ಭೇಟಿ
- ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ
- ಮತಗಟ್ಟೆಗೆ ಜಿಲ್ಲಾಧಿಕಾರಿ ನಿತೇಶ ಪಾಟೀಲ ಭೇಟಿ ಭೇಟಿ
- ಧಾರವಾಡ ತಾಲೂಕಿನ ಮನಸೂರ ಗ್ರಾಮದ ಮತಗಟ್ಟೆಗೆ ಬಂದು ಪರಿಶೀಲನೆ
- ಯಾವುದೇ ಅಹಿತರಕ ಘಟನೆಗಳು ನಡೆದಿಲ್ಲ
- ಶಾಂತಿಯುತವಾಗಿ ಮತದಾನ ನಡೆಯುತ್ತಿದೆ
- ಎಲ್ಲರು ಆದಷ್ಟು ಬೇಗ ಆಗಮಿಸಿ ಮತ ಚಲಾಯಿಸುವಂತೆ ಡಿಸಿ ಮನವಿ
13:21 December 10
ಮುಹೂರ್ತ ನೋಡಿ ಮತ ಚಲಾಯಿಸಿದ ಬಿಜೆಪಿ ಅಭ್ಯರ್ಥಿ
- ಬೆಳಗಾವಿ ಜಿಲ್ಲೆ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್ ದ್ವಿಸದಸ್ಯ ಸ್ಥಾನಕ್ಕೆ ಮತದಾನ
- ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠರಿಂದ ಹಕ್ಕು ಚಲಾವಣೆ
- ಸಮಯ ನೋಡಿಕೊಂಡು ಮತಚಲಾಯಿಸಿದ ಬಿಜೆಪಿ ಅಭ್ಯರ್ಥಿ
- ಮಧ್ಯಾಹ್ನ 12 ಗಂಟೆ ಒಂದು ನಿಮಿಷ ಆಗುವವರೆಗೂ ಮತಗಟ್ಟೆಯಲ್ಲಿ ಕಾದು ಕುಳಿತಿದ್ದ ಮಹಾಂತೇಶ
13:16 December 10
ಜೆಡಿಎಸ್ ಗೊಂದಲದಿಂದ ಬಿಜೆಪಿಗೆ ಲಾಭ - ಶಾಸಕ ಜ್ಯೋತಿ ಗಣೇಶ್
- ತುಮಕೂರಿನಲ್ಲಿ ಬಿಜೆಪಿ ಶಾಸಕ ಜ್ಯೋತಿ ಗಣೇಶ್ರಿಂದ ಮತದಾನ
- ಕೊನೇ ಕ್ಷಣದಲ್ಲಿ ಜೆಡಿಎಸ್ ಪಕ್ಷದಲ್ಲಿ ತುಂಬಾ ಗೊಂದಲ ಉಂಟಾಗಿದೆ
- ಅವರ ಗೊಂದಲ ಬಿಜೆಪಿಗೆ ಲಾಭವಾಗಲಿದೆ
- ಕುಮಾರಸ್ವಾಮಿ ಅವರು ಪ್ರಚಾರಕ್ಕೆ ಬರುತ್ತೇನೆ ಎಂದು ಬಂದಿಲ್ಲ
- ಅಂದುಕೊಂಡಷ್ಟು ಸ್ಟ್ರಾಂಗ್ ಅವರು ಆಗಿಲ್ಲ
- ಹಾಗಂತ ಅವರ ಮುಖಂಡರೇ ಹೇಳುತ್ತಾರೆ
- ಆರಂಭದಲ್ಲಿ ಇದ್ದಂತಹ ಹುರುಪು ಕೊನೇ ಎರಡು ದಿನದಲ್ಲಿ ಜೆಡಿಎಸ್ನಲ್ಲಿ ಇರಲಿಲ್ಲ
- ಶಾಸಕ ಜ್ಯೋತಿ ಗಣೇಶ್ ಹೇಳಿಕೆ
13:08 December 10
ಕುಷ್ಟಗಿ ತಾಲೂಕಿನ 15 ಗ್ರಾ.ಪಂ.ಗಳಲ್ಲಿ ಶೇ.100 ರಷ್ಟು ಮತದಾನ
- ಕುಷ್ಟಗಿ ತಾಲೂಕಿನಲ್ಲಿ ನಡೆದ ವಿಧಾನ ಪರಿಷತ್ ಚುನಾವಣೆ
- 36 ಗ್ರಾಮ ಪಂಚಾಯತಿಗಳ ಪೈಕಿ 15ರಲ್ಲಿ ಶೇ.100 ರಷ್ಟು ಮತದಾನ
- ಕುಷ್ಟಗಿ ಪುರಸಭೆಯ ಮತಗಟ್ಟೆಯಲ್ಲಿ ಶಾಸಕ ಸೇರಿದಂತೆ 17 ಜನ ಹಕ್ಕು ಚಲಾಯಿಸಿದ್ದಾರೆ
13:01 December 10
ನಾನು ಬಿಜೆಪಿ ಅಭ್ಯರ್ಥಿಗೆ ಮತಹಾಕಿದ್ದೇನೆ - ಸಂಸದ ಬಸವರಾಜ್
- ನಾನು ಬಿಜೆಪಿ ಅಭ್ಯರ್ಥಿಗೆ ಮತಹಾಕಿದ್ದೇನೆ
- ಆರೋಗ್ಯದಲ್ಲಿನ ಏರುಪೇರಿನಿಂದ ಕ್ಷೇತ್ರದಲ್ಲಿ ಜಾಸ್ತಿ ಓಡಾಡಲು ಆಗಿಲ್ಲ
- ಬಿಜೆಪಿ ಅಭ್ಯರ್ಥಿ ಗೆಲ್ಲುತ್ತಾರೆ ಎಂಬ ವಿಶ್ವಾಸ ಇದೆ
- ಪಕ್ಷದ ವಿಚಾರ ಬಂದಾಗ ಪಕ್ಷದ ಚಿಹ್ನೆಗೆ ಮತಹಾಕಬೇಕು
- ತುಮಕೂರಿನಲ್ಲಿ ಸಂಸದ ಜಿ.ಎಸ್.ಬಸವರಾಜ್ ಹೇಳಿಕೆ
12:47 December 10
ಸಂಸದ ಮುನಿಸ್ವಾಮಿ-ಶಾಸಕ ಶ್ರೀನಿವಾಸಗೌಡರಿಂದ ಮತದಾನ
- ತಮ್ಮ ಹಕ್ಕು ಚಲಾಯಿಸಿದ ಸಂಸದ ಮುನಿಸ್ವಾಮಿ ಹಾಗೂ ಶಾಸಕ ಶ್ರೀನಿವಾಸಗೌಡ
- ಕೋಲಾರ ನಗರಸಭೆಯಲ್ಲಿ ವೋಟಿಂಗ್
- ಮತದಾನ ಮಾಡೋದು ಹೇಗೆ ಎಂದು ಸಿಬ್ಬಂದಿಯಿಂದ ಹೇಳಿಸಿಕೊಂಡ ಶ್ರೀನಿವಾಸಗೌಡ
12:41 December 10
ಮತಗಟ್ಟೆಯಲ್ಲಿ ಮೊಬೈಲ್ ಬಳಕೆ: ಚುನಾವಣಾಧಿಕಾರಿಗಳು ಗರಂ
- ಕೋಲಾರ ನಗರಸಭೆ ಮತಗಟ್ಟೆಯಲ್ಲಿ ಮೊಬೈಲ್ ಬಳಕೆ
- ನಗರಸಭೆ ಆಯುಕ್ತರು ಹಾಗೂ ಸಿಬ್ಬಂದಿಯನ್ನ ತರಾಟೆಗೆ ತೆಗೆದುಕೊಂಡ ಚುನಾವಣಾಧಿಕಾರಿಗಳು
- ಮತದಾನ ಮಾಡುವ ವೇಳೆ ಮೊಬೈಲ್ ಬಳಸಿದ ಮತದಾರನ ವಿರುದ್ದ ಕ್ರಮಕ್ಕೆ ಸೂಚಿಸಿದ ಡಿಸಿ ಸೆಲ್ವಮಣಿ
12:34 December 10
17 ಜನ ಕಾಂಗ್ರೆಸ್ ಸದಸ್ಯರ ಜೊತೆ ಆಗಮಿಸಿ ಶಾಸಕಿ ಖನೀಜ್ ಫಾತೀಮಾ ವೋಟ್
- ಕಲಬುರಗಿ ಉತ್ತರ ಕ್ಷೇತ್ರದ ಶಾಸಕಿ ಖನೀಜ್ ಫಾತೀಮಾರಿಂದ ಹಕ್ಕು ಚಲಾವಣೆ
- 17 ಜನ ಕಾಂಗ್ರೆಸ್ ಪಾಲಿಕೆ ಸದಸ್ಯರ ಜೊತೆ ಆಗಮಿಸಿ ವೋಟ್ ಮಾಡಿದ ಶಾಸಕಿ
12:29 December 10
ಕೊಳ್ಳೇಗಾಲ ಶಾಸಕ ಎನ್.ಮಹೇಶ್ರಿಂದ ಮತದಾನ
- ಮೈಸೂರು-ಚಾಮರಾಜನಗರ ವಿಧಾನ ಪರಿಷತ್ ಚುನಾವಣೆ
- ನಗರಸಭಾ ಕಚೇರಿಯಲ್ಲಿ ಕೊಳ್ಳೇಗಾಲ ಶಾಸಕ ಎನ್.ಮಹೇಶ್ರಿಂದ ಮತದಾನ
- ಬಿಜೆಪಿ ಅಭ್ಯಥಿ೯ ರಘು ಕೌಟಿಲ್ಯ ಪ್ರಥಮ ಪ್ರಾಶಸ್ತ್ಯದ ಮತಗಳಿಂದ ಜಯಳಿಸುತ್ತಾರೆಂದ ಶಾಸಕ
12:21 December 10
ನನ್ನ ವಿವೇಚನೆಗೆ ತಕ್ಕಂತೆ ಮತ ಹಾಕಿದ್ದೇನೆ: ಸಭಾಪತಿ ಬಸವರಾಜ್ ಹೊರಟ್ಟಿ
- ಮತದಾನ ಮಾಡಿದ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ
- ಹುಬ್ಬಳ್ಳಿ ಮಹಾನಗರ ಪಾಲಿಕೆ ಮತಗಟ್ಟೆಯಲ್ಲಿ ವೋಟಿಂಗ್
- ಒಂದಕ್ಕಿಂತ ಹೆಚ್ಚು ಮತ ಹಾಕುವ ಅವಕಾಶ ಕೆಲವೇ ಚುನಾವಣೆಗೆ ಇರುತ್ತೆ
- ಈ ಚುನಾವಣೆಯಲ್ಲಿ 5 ಜನರಿಗೆ ಪ್ರಾಶಸ್ಥ್ಯದ ಮತ ಹಾಕಬಹುದು
- ನಾನು ನನ್ನ ವಿವೇಚನೆಗೆ ತಕ್ಕಂತೆ ಮತ ಹಾಕಿದ್ದೇನೆ ಎಂದ ಹೊರಟ್ಟಿ
12:15 December 10
ಪುತ್ತೂರಿನಲ್ಲಿ ಬಿರುಸಿನ ಮತದಾನ: ಹಕ್ಕು ಚಲಾಯಿಸಿದ ಶಾಸಕ ಸಂಜೀವ ಮಠಂದೂರು
- ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಸದಸ್ಯರ ಆಯ್ಕೆಗಾಗಿ ಚುನಾವಣೆ
- ಪುತ್ತೂರು ತಾಲೂಕಿನಲ್ಲಿ ಬೆಳಗ್ಗಿನಿಂದಲೇ ಬಿರುಸಿನ ಮತದಾನ
- ನಗರಸಭೆಯಲ್ಲಿ ಹಕ್ಕು ಚಲಾಯಿಸಿದ ಶಾಸಕ ಸಂಜೀವ ಮಠಂದೂರು
- ಬಿಜೆಪಿ ಬೆಂಬಲಿತ ಸದಸ್ಯರೊಂದಿಗೆ ಆಗಮಿಸಿ ಮತದಾನ
- 15ಕ್ಕೂ ಅಧಿಕ ಸ್ಥಾನದಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ಪಡೆಯತ್ತೆ
- ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಇತರ ಪಕ್ಷಗಳಿಂದಲೂ ಮತ ಲಭ್ಯವಾಗಲಿದೆ
- ಪ್ರಥಮ ಪ್ರಾಶಸ್ತ್ಯದ ಮತಗಳನ್ನು ಪಡೆದು ನಿರೀಕ್ಷೆಗೂ ಮೀರಿ ಗೆಲುವು ಪಡೆಯಲಿದ್ದಾರೆ ಎಂದ ಶಾಸಕ
- 22 ಗ್ರಾಪಂಗಳ 343 ಸದಸ್ಯರು, ನಗರಸಭೆಯ 31 ಮಂದಿ ಹಾಗೂ ಶಾಸಕಕರು ಸೇರಿ ಪುತ್ತೂರಿನಲ್ಲಿ ಒಟ್ಟು 375 ಮತದಾರರು
- 23 ಮತದಾನ ಕೇಂದ್ರಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
11:59 December 10
- ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ, ಸತೀಶ್ ಜಾರಕಿಹೊಳಿ ಮುಖಾಮುಖಿ
- ಬೆಳಗಾವಿ ಜಿಲ್ಲೆ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ದ್ವಿಸದಸ್ಯ ಸ್ಥಾನಕ್ಕೆ ಮತದಾನ
- ಮತದಾನಕ್ಕೆ ಆಗಮಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ
- ಬೆಳಗಾವಿ ಮಹಾನಗರ ಪಾಲಿಕೆ ಕಚೇರಿಯಲ್ಲಿಯ ಮತಗಟ್ಟೆಗೆ ಆಗಮನ
- ಸತೀಶ್ ಜಾರಕಿಹೊಳಿ ಆಗಮಿಸಿದ ಬಳಿಕ ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಆಗಮನ
- ಉಭಯ ಕುಶಲೋಪರಿ ವಿಚಾರಿಸಿದ ನಾಯಕರು
- ವೋಟಿಂಗ್ ಮಾಡಿ ಬಂದ್ರಾ ಎಂದು ಸತೀಶ್ ಜಾರಕಿಹೊಳಿ ಕೇಳಿದ ಮಹಾಂತೇಶ ಕವಟಗಿಮಠ
- ನಮ್ಮ ಎಂಎಲ್‌ಎ ಮೇಡಂ ಬರಬೇಕು ಕಾಯ್ತಿದ್ದೀವಿ ಎಂದ ಸತೀಶ್ ಜಾರಕಿಹೊಳಿ
- ಸತೀಶ್ ಜಾರಕಿಹೊಳಿ ಭೇಟಿಯಾಗಿ ಮತದಾನಕ್ಕೆ ತೆರಳಿದ ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ
11:41 December 10
- ಮತದಾನದ ನಂತರ ಶಿಗ್ಗಾಂವಿ ನಿವಾಸದಲ್ಲಿ ಸಾರ್ವಜನಿಕರಿಂದ ಮನವಿ ಸ್ವೀಕರಿಸಿ, ಬೆಳಗಾವಿಯತ್ತ ಪ್ರಯಾಣ ಬೆಳೆಸಿದ ಸಿಎಂ
- ಹಾವೇರಿ ಜಿಲ್ಲೆ ಶಿಗ್ಗಾಂವಿ ಪಟ್ಟಣದಲ್ಲಿರೋ ನಿವಾಸ
- ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ ಮತದಾನಕ್ಕೆ ಆಗಮಿಸಿದ್ದ ಸಿಎಂ
- ಪಟ್ಟಣದ ತಾಲೂಕು ಪಂಚಾಯ್ತಿ ಕಚೇರಿಯಲ್ಲಿ ಮತ ಚಲಾಯಿಸಿ, ತಮ್ಮ ನಿವಾಸಕ್ಕೆ ಆಗಮಿಸಿದ್ದ ಸಿಎಂ
11:29 December 10
- ವಿಧಾನ ಪರಿಷತ್ ಚುನಾವಣೆ ಹಿನ್ನಲೆ, ಚಿಕ್ಕಮಗಳೂರಿನಲ್ಲಿ ಮತದಾನ ಪ್ರಕ್ರಿಯೆ ಆರಂಭ
- ಚಿಕ್ಕಮಗಳೂರು ಜಿಲ್ಲೆಯಲ್ಲಿ 230 ಮತಗಟ್ಟೆಗಳಲ್ಲಿ ಮತದಾನ
- 3 ಪುರಸಭೆ, 4 ಪಟ್ಟಣ ಪಂಚಾಯಿತಿ, 223 ಗ್ರಾಮ ಪಂಚಾಯಿತಿಗಳಲ್ಲಿ ಮತದಾನ
- 1142 ಪುರುಷರು, 1275 ಮಹಿಳೆಯರು ಸೇರಿದಂತೆ 2417 ಮತದಾರರು ತಮ್ಮ ಮತ ಚಲಾಯಿಸಲಿದ್ದಾರೆ
11:29 December 10
- ರಾಯಚೂರು-ಕೊಪ್ಪಳ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ಗೆ ಚುನಾವಣೆ
- ಬೆಳಗ್ಗಿನಿಂದ ನೀರಸ ಮತದಾನ ಪ್ರಕ್ರಿಯೆ
- ಸುಗಮ ಮತದಾನಕ್ಕೆ ಜಿಲ್ಲಾಡಳಿತ ಸಕಲ ವ್ಯವಸ್ಥೆ ಕೈಗೊಂಡಿದೆ
- ಜಿಲ್ಲೆಯ ಏಳು ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 181 ಮತಗಟ್ಟೆಗಳು ಹಾಗೂ ಕೊಪ್ಪಳ ಜಿಲ್ಲೆಯಲ್ಲಿ 157 ಮತಗಟ್ಟೆಗಳು ಸೇರಿದಂತೆ ಒಟ್ಟು 336 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ
11:28 December 10
- ಮೈಸೂರು: ಬಿರುಸಿನಿಂದ ನಡೆಯತ್ತಿದೆ ಮತದಾನ
- ಸಂದೇಶ್ ನಾಗರಾಜ್, ಶ್ರೀಕಂಠೇಗೌಡರಿಂದ ಹಕ್ಕು ಚಲಾವಣೆ
- ಮೈಸೂರು ಪಾಲಿಕೆ ಮತಗಟ್ಟೆಗೆ ತೆರಳಿ ಮತದಾನ
- ನಾನು ಕಾಂಗ್ರೆಸ್, ಬಿಜೆಪಿಯನ್ನೇ ಬೆಂಬಲಿಸಿರುವುದು
- ಮೈಸೂರಿನಲ್ಲಿ ಎರಡು ಸ್ಥಾನಗಳಿವೆ, ಕಾಂಗ್ರೆಸ್ ಬಿಜೆಪಿಗೆ ಬೆಂಬಲಿಸಿದ್ದೇನೆ
- ಇದರಲ್ಲಿ ಯಾವುದೇ ಮುಚ್ಚು ಮರೆ ಇಲ್ಲ
- ಮತದಾನ ನಂತರ ಸಂದೇಶ್ ನಾಗರಾಜ್ ಹೇಳಿಕೆ
11:28 December 10
- ಕೊಪ್ಪಳ: ಸಚಿವ ಹಾಲಪ್ಪ ಆಚಾರ್ರಿಂದ ಮತದಾನ
- ಜಿಲ್ಲೆಯ ಯಲಬುರ್ಗಾ ಪಟ್ಟಣ ಪಂಚಾಯತ್ ನಲ್ಲಿನ ಮತಗಟ್ಟೆಯಲ್ಲಿ ಮತದಾನ
- ಕೊಪ್ಪಳ- ರಾಯಚೂರು ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲಿದೆ
- ಇಲ್ಲಿ ಮೇಲ್ವರ್ಗ ,ಕೇಳ್ವರ್ಗದವರು ಎಂಬ ಬೇಧವಿಲ್ಲ
- ಕ್ಷೇತ್ರದಲ್ಲಿ ಇಬ್ಬರು ಜೆಡಿಎಸ್ ಶಾಸಕರಿದ್ದಾರೆ,ಅವರು ಕಾಂಗ್ರೆಸ್ ಗೆ ಬೆಂಬಲ ಘೋಷಿಸಿರಬಹುದು
- ನಮ್ಮ ಅಭ್ಯರ್ಥಿ ವಿಶ್ವನಾಥ ಬನಹಟ್ಟಿ ಬಿಜೆಪಿಯ ರಾಜ್ಯ ಸಂಘಟನೆಯಲ್ಲಿದ್ದವರು, ಅವರು ಗೆಲ್ಲಲಿದ್ದಾರೆ
- ಮತದಾನ ಮಾಡಿದ ಬಳಿಕ ಮಾತನಾಡಿದ ಆಚಾರ್
11:28 December 10
- ಶಿಕಾರಿಪುರದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ತಮ್ಮ ಪುತ್ರ ಸಂಸದ ಬಿ.ವೈ.ರಾಘವೇಂದ್ರ ರವರ ಜೊತೆ ಬಂದು ಮತದಾನ
- ಮತದಾನಕ್ಕೂ ಮುನ್ನ ಮನೆಯಲ್ಲಿ ದೇವರಿಗೆ ಪೊಜೆ ಸಲ್ಲಿಸಿದ್ದ ಮಾಜಿ ಸಿಎಂ
- ತಮ್ಮ ಮನೆಗೆ ಬಂದ ಬಿಜೆಪಿ ಅಭ್ಯರ್ಥಿ ಡಿ.ಎಸ್.ಅರುಣ್ ರವರಿಗೆ ಆರ್ಶಿವಾದ ನೀಡಿ,ನಂತರ ತಮ್ಮ ಆರಾಧ್ಯ ದೈವ ಹುಚ್ಚರಾಯ ಸ್ವಾಮಿಗೆ ವಿಶೇಷ ಪೊಜೆ ಸಲ್ಲಿಸಿದ್ದರು
- ಸೊರಬ ಶಾಸಕ ಕುಮಾರ ಬಂಗಾರಪ್ಪನವರಿಂದ ಸೊರಬ ಪುರಸಭೆಯಲ್ಲಿ ಮತದಾನ
- ಸಾಗರದಲ್ಲಿ ಹರತಾಳು ಹಾಲಪ್ಪನವರಿಂದ ಮತದಾನ
11:28 December 10
ಧಾರವಾಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರಕ್ಕೆ 10 ಗಂಟೆಯವರೆಗೆ ಆದ ಮತದಾನದ ವಿವರ:
- ಧಾರವಾಡ ಜಿಲ್ಲೆ -4.44%
- ಹಾವೇರಿ ಜಿಲ್ಲೆ-6.66%
- ಗದಗ ಜಿಲ್ಲೆ- 7.98%
- ಒಟ್ಟು - ಶೇ.6.37 ರಷ್ಟು ಮತದಾನವಾಗಿದೆ
11:01 December 10
- ಶಿಗ್ಗಾಂವಿ ತಾಲೂಕು ಪಂಚಾಯ್ತಿ ಕಚೇರಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮತದಾನ
- ಹಾವೇರಿ ಜಿಲ್ಲೆ ಶಿಗ್ಗಾಂವಿ ಪಟ್ಟಣದಲ್ಲಿರೋ ತಾಲೂಕು ಪಂಚಾಯ್ತಿ ಕಚೇರಿ
- ಧಾರವಾಡ ವಿಧಾನ ಪರಿಷತ್ ನ ದ್ವಿಸದಸ್ಯ ಸ್ಥಾನಕ್ಕೆ ನಡಿತಿರೋ ಚುನಾವಣೆ
- ನಾವು ಸ್ಪರ್ಧೆ ಮಾಡಿದ ಕಡೆಗಳಲೆಲ್ಲಾ ಉತ್ತಮವಾದ ವಾತಾವರಣವಿದೆ
- ಬಿಪಿನ್ ರಾವತ್ ಸಾವನ್ನ ಸಂಭ್ರಮಿಸಿದವರ ಮೇಲೆ ಕಠಿಣ ಕ್ರಮಕ್ಕೆ ಅಧಿಕಾರಿಗಳ ಮೇಲೆ ಸೂಚನೆ ನೀಡಿದ್ದೇನೆ
- ಇಡೀ ದೇಶವೇ ರಾವತ್ ಸಾವಿಗೆ ಕಂಬನಿ ಮಿಡಿಯುತ್ತಿದೆ
- ಮಕ್ಕಳಿಗೆ ಲಸಿಕೆ ಹಾಕೋ ಬಗ್ಗೆ ಕೇಂದ್ರದ ಪರಿಣಿತರ ತಂಡ ನಿರ್ಧಾರ ಮಾಡುತ್ತದೆ
- ಕೇರಳದಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿರೋ ವಿಚಾರ ಈಗಾಗಲೆ ಆ ಬಗ್ಗೆ ಸಭೆ ನಡೆಸಿದ್ದೇನೆ
- ಮತ ಚಲಾವಣೆ ನಂತರ ಸಿಎಂ ಬೊಮ್ಮಾಯಿ ಹೇಳಿಕೆ
11:01 December 10
- ಬಿರುಸಿನಿಂದ ಸಾಗಿದ ಮತದಾನ ಪ್ರಕ್ರಿಯೆ
- ಸಭಾಪತಿ ಬಸವರಾಜ ಹೊರಟ್ಟಿ ಮತ ಚಲಾವಣೆ
- ಹುಬ್ಬಳ್ಳಿಯ ಪಾಲಿಕೆ ಕಚೇರಿಯ ಮತಗಟ್ಟೆ ಸಂಖ್ಯೆ 144 ರಲ್ಲಿ ಮತದಾನ
11:01 December 10
- ಬೆಳಗಾವಿಯ ಖಾನಾಪುರ ಪಟ್ಟಣ ಪಂಚಾಯಿತಿಯಲ್ಲಿ ಮತ ಚಲಾಯಿಸಿದ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್
- ಹಕ್ಕು ಚಲಾಯಿಸಿ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿದ ಅಂಜಲಿ
10:50 December 10
- ಗಂಗಾವತಿ: ರಾಯಚೂರು-ಕೊಪ್ಪಳ ಜಿಲ್ಲೆಯ ಸ್ಥಳೀಯ ಜನಪ್ರತಿನಿಧಿಗಳ ವಿಧಾನ ಪರಿಷತ್ ಕ್ಷೇತ್ರದ ಚುನಾವಣೆ
- ಮತದಾರರೊಂದಿಗೆ ಸರತಿ ಸಾಲಲ್ಲಿ ನಿಂತ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ
- ಇಲ್ಲಿನ ಸರ್ಕಾರಿ ಜೂನಿಯರ್ ಕಾಲೇಜಿನ ಆವರಣದಲ್ಲಿರುವ ಪ್ರೌಢ ಶಾಲಾ ವಿಭಾಗದಲ್ಲಿ ತೆರೆಯಲಾಗಿದ್ದ ಮತಗಟ್ಟೆಯಲ್ಲಿ ಮತದಾನ
- ಮತದಾರರೊಂದಿಗೆ ಸರತಿ ಸಾಲಲ್ಲಿ ನಿಂತು ಮತಚಲಾಯಿಸಿ ಸರಳತೆ ಮೆರೆದ ಶಾಸಕ
10:50 December 10
ಆಂಬ್ಯುಲೆನ್ಸ್ ಮೂಲಕ ಬಂದು ಮತ ಚಲಾವಣೆ
- ಆಂಬ್ಯುಲೆನ್ಸ್ ಮೂಲಕ ಬಂದು ಮತ ಚಲಾವಣೆ
- ಆನೇಕಲ್ ತಾಲೂಕಿನಲ್ಲಿ ವಿಧಾನ ಪರಿಷತ್ ಮತದಾನ ಕೇಂದ್ರದಲ್ಲಿ ಘಟನೆ
- ಬೊಮ್ಮಸಂದ್ರ ಪುರಸಭೆಯ ವಾರ್ಡ್ ನಂ1ರ ಪುರಸಭೆ ಸದಸ್ಯೆ ನಜ್ಮಾ ಪಾರೂಕ್ರಿಂದ ಮತದಾನ
- ಕಳೆದ ರಾತ್ರಿ ಅನಾರೋಗ್ಯದಿಂದ ಖಾಸಗಿ ಆಸ್ಪತ್ರೆ ಸೇರಿದ್ದ ಸದಸ್ಯೆ
10:38 December 10
ಕೇಸರಿ ಶಾಲು, ಪೇಟ ತೊಟ್ಟು ಮತದಾನ
- ಆನೇಕಲ್ ತಾಲೂಕಿನ ಮರಸೂರು ಗ್ರಾಮ ಪಂಚಾಯ್ತಿಯಲ್ಲಿ ಮತದಾನ
- ಕೇಸರಿ ಶಾಲು ಹಾಗೂ ಪೇಟ ತೊಟ್ಟು ಮತದಾನ ಮಾಡಿದ ಬಿಜೆಪಿ ಸದಸ್ಯರು
- ಮರಸೂರು ಗ್ರಾಮ ಪಂಚಾಯತಿ ಕಚೇರಿಯ ಮತ ಕೇಂದ್ರದಲ್ಲಿ ಮತದಾನಕ್ಕೆ ಅವಕಾಶ
- ಬಿಜೆಪಿ ಅಭ್ಯರ್ಥಿ ಗೋಪಿನಾಥ ರೆಡ್ಡಿ ಪರ ಜೈಕಾರ ಹಾಕಿದ ಸದಸ್ಯರು
10:33 December 10
- ದಾವಣಗೆರೆ: ಜಿಲ್ಲೆಯಲ್ಲಿ ಮತದಾನ ಪ್ರಕ್ರಿಯೆ ಆರಂಭ
- ಸಾಕಷ್ಟು ಗ್ರಾಮ ಪಂ.ಸದಸ್ಯರು, ಅಧ್ಯಕ್ಷ, ಉಪಾಧ್ಯಕ್ಷರು ಮತದಾನ ಮಾಡುತ್ತಿದ್ದಾರೆ
- ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಮತದಾನಕ್ಕೆ ಸಕಲ ಸಿದ್ಧತೆ ನಡೆಸಲಾಗಿದೆ
- ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ, ಸಂಸದ ಜಿಎಂ ಸಿದ್ದೇಶ್ವರ್, ಮತದಾನ ಮಾಡಲಿದ್ದಾರೆ
10:32 December 10
- ಮಂಗಳೂರು: ದ.ಕ.ಜಿಲ್ಲೆ ಮತ್ತು ಉಡುಪಿಜಿಲ್ಲೆಯನ್ನು ಒಳಗೊಂಡ ಸ್ಥಳೀಯಾಡಳಿತದ ರಾಜ್ಯ ವಿಧಾನ ಪರಿಷತ್ ನ ದ್ವಿಸದಸ್ಯತ್ವದ ಚುನಾವಣೆಗೆ ಮತದಾನ
- ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಶಾಸಕ ವೇದವ್ಯಾಸ ಕಾಮತ್, ಮಂಗಳೂರು ಮನಪಾ ಮೇಯರ್ ಪ್ರೇಮಾನಂದ ಶೆಟ್ಟಿಯಿಂದ ಮತ ಚಲಾವಣೆ
- ಅತೀ ಹೆಚ್ಚು ಮತಗಳ ಅಂತರದಿಂದ ಬಿಜೆಪಿಯ ಅಭ್ಯರ್ಥಿಯಾಗಿ ಕೋಟ ಶ್ರೀನಿವಾಸ ಪೂಜಾರಿಯವರು ಆಯ್ಕೆಯಾಗಲಿದ್ದಾರೆ
- ಇಡೀ ಜಿಲ್ಲೆಯಲ್ಲಿ ವಾತಾವರಣ ಬಿಜೆಪಿ ಪರವಾಗಿದೆ
- ಅತೀ ಹೆಚ್ಚು ಸದಸ್ಯರು ನಮ್ಮ ಪಕ್ಷದಲ್ಲಿದ್ದಾರೆ. ಹಾಗಾಗಿ ಮೊದಲ ಪ್ರಾಶಸ್ತ್ಯದಲ್ಲಿ ಕೋಟ ಶ್ರೀನಿವಾಸ ಪೂಜಾರಿ ಗೆಲುವು ಸಾಧಿಸಲಿದ್ದಾರೆ ಎಂದ ಕಟೀಲು,
ಒಟ್ಟು 6040 ಮತದಾರರು
- ದ.ಕ.ಜಿಲ್ಲೆಯಲ್ಲಿ 231 ಹಾಗೂ ಉಡುಪಿ ಜಿಲ್ಲೆಯಲ್ಲಿ158 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ
- ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಒಟ್ಟು 6040 ಮತದಾರರಿದ್ದಾರೆ
- 2916 ಪುರುಷ ಮತದಾರರು ಹಾಗೂ 3124 ಮಹಿಳಾ ಮತದಾರರಿದ್ದಾರೆ
- ದ.ಕ.ಜಿಲ್ಲೆಯ 223 ಗ್ರಾಪಂಗಳಲ್ಲಿ 3290 ಚುನಾಯಿತ ಸದಸ್ಯರಿದ್ದಾರೆ
- ಮಂಗಳೂರು ಮನಪಾದ 68 ಸದಸ್ಯರು, 2 ನಗರಸಭೆಯ 64 ಸದಸ್ಯರು, 2 ಪುರಸಭೆಯ62 ಸದಸ್ಯರು, 3 ಪಟ್ಟಣ ಪಂಚಾಯತ್ ನ 51 ಸದಸ್ಯರಿದ್ದಾರೆ
- ಉಡುಪಿ ಜಿಲ್ಲಯ 154 ಗ್ರಾಪಂಗಳಲ್ಲಿ 2387 ಚುನಾಯಿತ ಸದಸ್ಯರಿದ್ದಾರೆ
- 1 ನಗರ ಸಭೆಯ 41ಸದಸ್ಯರು, 2 ಪುರಸಭೆಯ 58 ಸದಸ್ಯರು ಹಾಗೂ ಒಂದು ಪಪಂನ 19 ಸದಸ್ಯರು ಮತದಾನ ಚಲಾಯಿಸಲಿದ್ದಾರೆ
10:24 December 10
10:20 December 10
- ಬಿಜೆಪಿ ಚಿಹ್ನೆ ಪ್ರದರ್ಶನಕ್ಕೆ ಶಾಸಕ ಪುಟ್ಟರಂಗಶೆಟ್ಟಿ ಗರಂ
- ಚಾಮರಾಜನಗರ: ಮೈಸೂರು- ಚಾಮರಾಜನಗರ ವಿಧಾನ ಪರಿಷತ್ ಕ್ಷೇತ್ರಕ್ಕೆ ಬಿರುಸಿನ ಮತದಾನ
- ಮತದಾನ ಮಾಡಲು ಚಾಮರಾಜನಗರ ನಗರಸಭೆ ಮತಗಟ್ಟೆಗೆ ಆಗಮಿಸಿದ ಕೈ ಶಾಸಕ ಪುಟ್ಟರಂಗಶೆಟ್ಟಿ
- ಬಿಜೆಪಿ ಸದಸ್ಯರು ಪಕ್ಷದ ಚಿನ್ನೆಯ ಶಲ್ಯ ಹೊದ್ದು ಬಂದಿದ್ದಕ್ಕೆ ಗರಂ ಆಗಿ ಮಾತಿನ ಚಕಮಕಿ
- ನೀವು ಇಲ್ಲಿ ಮತದಾನ ಮಾಡಬೇಕು, ಪ್ರಚಾರವನ್ನಲ್ಲ, ಬಿಜೆಪಿ ಚಿಹ್ನೆಯನ್ನೇಕೆ ಪ್ರದರ್ಶನ ಮಾಡುತ್ತಿದ್ದೀರಿ ಎಂದು ಗರಂ
- ತಾವೇನು ಪ್ರಚಾರ ಮಾಡುತ್ತಿಲ್ಲ, ಮತದಾನ ಮಾಡಿ ತೆರಳುತ್ತೇವೆ ಎಂದ ಬಿಜೆಪಿಗರು
ಮಹಿಳಾ ಮತದಾರರೇ ಅಧಿಕ:
- ಜಿಲ್ಲೆಯಲ್ಲಿ ಒಟ್ಟು 139 ಗ್ರಾಮ ಪಂಚಾಯ್ತಿಗಳಿದ್ದು, 5 ನಗರ ಸ್ಥಳೀಯ ಸಂಸ್ಥೆಗಳು ಸೇರಿದಂತೆ ಒಟ್ಟು 2269 ಮತದಾರರಿದ್ದಾರೆ.
- 1082 ಪುರುಷ ಹಾಗೂ 1187 ಮಹಿಳಾ ಮತದಾರರಿದ್ದಾರೆ.
- ಅನಕ್ಷರಸ್ಥರು, ಅಂಧರ ಪರವಾಗಿ ಮತ ಚಲಾಯಿಸುವ 44 ಮಂದಿ ಪ್ರಾಕ್ಸಿ ವೋಟರ್ಸ್ ಜಿಲ್ಲೆಯಲ್ಲಿದ್ದು ಹನೂರು ತಾಲೂಕಲ್ಲೇ 21 ಮಂದಿ ಈ ಬದಲಿ ಮತದಾರರಿದ್ದಾರೆ
10:17 December 10
ಮೈಸೂರು- ಚಾಮರಾಜನಗರ ದ್ವಿಸದಸ್ಯ ಕ್ಷೇತ್ರದ ಚುನಾವಣೆ
- ವಿಧಾನ ಪರಿಷತ್ ಚುನಾವಣೆಯಲ್ಲಿ ಮೈಸೂರು- ಚಾಮರಾಜನಗರ ದ್ವಿಸದಸ್ಯ ಕ್ಷೇತ್ರದ ಚುನಾವಣೆಗೆ ಮತದಾನ ಆರಂಭ
- ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿ 6771 ಮತದಾರರಿದ್ದಾರೆ.ಒಟ್ಟು 393 ಮತಗಟ್ಟೆಗಳನ್ನು ತೆರೆಯಲಾಗಿದೆ
- ಬಿಜೆಪಿ ಅಭ್ಯರ್ಥಿ ಆರ್.ರಘು, ಕಾಂಗ್ರೆಸ್ ನಿಂದ ಡಾ.ಡಿ.ತಿಮ್ಮಯ್ಯ, ಜೆಡಿಎಸ್ ನಿಂದ ಸಿ.ಎನ್.ಮಂಜೇಗೌಡ, ಕನ್ನಡ ಚಳವಳಿ ಪಕ್ಷದ ವಾಟಾಳ್ ನಾಗರಾಜ್ ಹಾಗೂ ಮೂವರು ಪಕ್ಷೇತರರು ಸೇರಿದಂತೆ ಒಟ್ಟು ಏಳು ಮಂದಿ ಕಣದಲ್ಲಿದ್ದಾರೆ
- ಎರಡು ಜಿಲ್ಲೆಯಲ್ಲಿ ಮತಗಟ್ಟೆ ಅಧಿಕಾರಿಗಳು ಮತದಾನ ಅಧಿಕಾರಿಗಳು, ಮೈಕ್ರೋ ಅಬ್ಸರ್ವರ್ ಸೇರಿದಂತೆ 1809 ಸಿಬ್ಬಂದಿಯನ್ನು ನೇಮಿಸಲಾಗಿದೆ
- ಮತದಾನದ ನಂತರ ಮತಪೆಟ್ಟೆಗೆಗಳನ್ನು ನಗರದ ಮಹಾರಾಣಿ ಕಾಲೇಜಿನಲ್ಲಿ ಭದ್ರಪಡಿಸಲಾಗುತ್ತದೆ
10:16 December 10
ಮತಗಟ್ಟೆಗೆ ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ್ ಭೇಟಿ
- ಹಾವೇರಿ ತಾಲೂಕು ಪಂಚಾಯ್ತಿಯಲ್ಲಿರೋ ಮತಗಟ್ಟೆಗೆ ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ್ ಭೇಟಿ
- ಧಾರವಾಡ ವಿಧಾನ ಪರಿಷತ್‍ನ ದ್ವಿಸದಸ್ಯ ಸ್ಥಾನಕ್ಕೆ ಚುನಾವಣೆ
- ಮತಗಟ್ಟೆಗೆ ಭೇಟಿ ನೀಡಿ, ವ್ಯವಸ್ಥೆ ಪರಿಶೀಲಿಸಿದ ಅಭ್ಯರ್ಥಿ
- ಸಲೀಂ ಅಹ್ಮದ್ ಭೇಟಿ ವೇಳೆ ಹಾಜರಿದ್ದ ಕಾಂಗ್ರೆಸ್ ನಗರಸಭೆ ಸದಸ್ಯರು
- ಪರಿಷತ್ ಚುನಾವಣೆಯಲ್ಲಿ ಕ್ಷೇತ್ರದ ಮತದಾರರು ತಮಗೆ ಆಶೀರ್ವಾದ ಮಾಡಲಿದ್ದಾರೆ.
- ರಾಜ್ಯದಲ್ಲಿ ಹದಿನಾಲ್ಕಕ್ಕೂ ಅಧಿಕ ಸ್ಥಾನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದ ಸಲೀಂ
- ಧಾರವಾಡ ದ್ವಿಸದಸ್ಯ ಸ್ಥಾನಕ್ಕೆ ನಡೆಯುತ್ತಿದೆ ಚುನಾವಣೆ
- ಹಾವೇರಿ ಜಿಲ್ಲೆಯ 230 ಮತಗಟ್ಟೆಗಳಲ್ಲಿ ಮತದಾನ
- ಜಿಲ್ಲೆಯಲ್ಲಿ 1649 ಪುರುಷ, 1720 ಮಹಿಳಾ ಮತದಾರರು ಸೇರಿದಂತೆ ಹಕ್ಕು 3369 ಮತದಾರರಿಂದ ಹಕ್ಕು ಚಲಾವಣೆ
10:07 December 10
- ಸಚಿವ ಈಶ್ವರಪ್ಪ ಬಿಜೆಪಿಯ ಪಾಲಿಕೆ ಸದಸ್ಯರುಗಳು ಸೇರಿದಂತೆ ಇಬ್ಬರು ಎಂಎಲ್ಗಗಳ ಜೊತೆ ಪಾಲಿಕೆಯಲ್ಲಿಯೇ ಮತದಾನ ಮಾಡಲಿದ್ದಾರೆ
- ಶಿಕಾರಿಪುರದಲ್ಲಿ ಮಾಜಿ ಸಿಎಂ ಯಡಿಯೂರಪ್ಪ, ಸಂಸದ ರಾಘವೇಂದ್ರ ರವರು ತಮ್ಮ ಪುರಸಭಾ ಸದಸ್ಯರೊಂದಿಗೆ ಮತದಾನ ಮಾಡಲಿದ್ದಾರೆ
- ಸೊರಬದ ಶಾಸಕ ಕುಮಾರ ಬಂಗಾರಪ್ಪ, ತಮ್ಮ ಹುಟ್ಟೂರು ಕುಬಟೂರಿನಲ್ಲಿ ಮತದಾನ ಮಾಡಲಿದ್ದಾರೆ
- ಸಾಗರ ಶಾಸಕ ಹಾರತಾಳು ಹಾಲಪ್ಪ ತಮ್ಮ ಹುಟ್ಟೂರು ಹಾರತಾಳುವಿನಲ್ಲಿ ಮತದಾನ ಮಾಡಲಿದ್ದಾರೆ
- ಗೃಹ ಸಚಿವ ಅರಗ ಜ್ಞಾನೇಂದ್ರ ಆರಗ ಗ್ರಾಮದಲ್ಲಿ ಮತದಾನ ಮಾಡಲಿದ್ದಾರೆ
- ಶಿವಮೊಗ್ಗ ಗ್ರಾಮಾಂತರ ಶಾಸಕ ಕೆ.ಬಿ.ಪ್ರಸನ್ನ ಕುಮಾರ್ ಶಿವಮೊಗ್ಗದಲ್ಲಿ ಮತದಾನ ಮಾಡಲಿದ್ದಾರೆ
- ಭದ್ರಾವತಿ ಕಾಂಗ್ರೆಸ್ ಶಾಸಕ ಸಂಗಮೇಶ್ ರವರು ಭದ್ರಾವತಿ ನಗರಸಭೆಯಲ್ಲಿ ಮತದಾನ ಮಾಡಲಿದ್ದಾರೆ
10:07 December 10
ಗೆಲುವು ನನ್ನದೇ ಅಂತರವಷ್ಟೇ ತಿಳಿಯಬೇಕಿದೆ...
- ಶಿವಮೊಗ್ಗ: ಗೆಲುವು ನನ್ನದೇ ಎಂದು ವಿಶ್ವಾಸ ವ್ಯಕ್ತಪಡಿಸಿದ ಕಾಂಗ್ರೆಸ್ ಅಭ್ಯರ್ಥಿ ಆರ್.ಪ್ರಸನ್ನ ಕುಮಾರ್
- ಮಹಾನಗರ ಪಾಲಿಕೆಯಲ್ಲಿ ಬೂತ್ ನಂಬರ್ 218 ರಲ್ಲಿ ಮತ ಚಲಾಯಿಸಿದ ಪ್ರಸನ್ನ ಕುಮಾರ್
- ನಾನು ಚುನಾವಣೆ ಪ್ರಕ್ರಿಯೆ ಪ್ರಾರಂಭವಾದಾಗಿನಿಂದಲೂ ಸಹ ಸಿದ್ಧತೆಯಲ್ಲಿದ್ದೇನೆ
- ಎಲ್ಲಾ ಕಡೆ ಪ್ರಚಾರ ನಡೆಸಿ, ಸಭೆಗಳ ಮೂಲಕ ಮತಯಾಚನೆ ಮಾಡಿದ್ದೇನೆ
10:03 December 10
- ಕಲಬುರಗಿ ತಾಲೂಕು ಪಂಚಾಯತ್ ಕಚೇರಿಯಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಜಿ.ಪಾಟೀಲ್ ಹಾಗೂ ಸಂಸದ ಉಮೇಶ್ ಜಾಧವ್ರಿಂದ ಮತದಾನ
- ಕಳೆದ ಬಾರಿ 800 ಮತಗಳಿಂದ ಗೆದ್ದಿದ್ದು, ಈ ಬಾರಿ 1600ಕ್ಕಿಂತ ಅಧಿಕ ಮತಗಳಿಂದ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಜಾಧವ್
10:03 December 10
ಅಮರೇಗೌಡ ಪಾಟೀಲ ಬಯ್ಯಾಪೂರರಿಂದ ಮತ ಚಲಾವಣೆ
- ಕುಷ್ಟಗಿ: ಪುರಸಭೆ ಮತಗಟ್ಟೆಯಲ್ಲಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರರಿಂದ ಮತ ಚಲಾವಣೆ
- ಮತಗಟ್ಟೆ ಸಂಖೆ 264 ರಲ್ಲಿ ತಮ್ಮ ಹಕ್ಕು ಚಲಾಯಿಸಿದ ಶಾಸಕ
- ಮತಗಟ್ಟೆ ಪ್ರವೇಶಿಸುವ ಮತದಾರರಿಗೆ ಸ್ಕ್ರೀನಿಂಗ್ ಪರೀಕ್ಷೆ
- ಕುಷ್ಟಗಿ ತಾಲೂಕಿನ 36 ಮತಗಟ್ಟೆಯಲ್ಲಿ ಮಂದಗತಿಯಲ್ಲಿ ಮತದಾನ ಪ್ರಕ್ರಿಯೆ ಆರಂಭ
09:47 December 10
ಕಣ್ಣೀರು ಹಾಕಿದ ಮಂಜು
- ಮಂಡ್ಯದಲ್ಲಿ ಮತದಾನ ಆರಂಭದ ವೇಳೆ ಅಭ್ಯರ್ಥಿ ಬೂಕಹಳ್ಳಿ ಮಂಜು ಕಣ್ಣೀರು
- ಮತದಾರ ನನ್ನ ಕೈ ಬಿಡಲ್ಲ ಎಂದು ಬಿಕ್ಕಿ ಬಿಕ್ಕಿ ಅತ್ತ ಅಭ್ಯರ್ಥಿ
- ಬಿಜೆಪಿ ಮೈತ್ರಿಯಾಗಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ
- ನಿನ್ನೆ ಸಂಜೆ 4 ಗಂಟೆವರೆಗೂ ಎಲ್ಲವೂ ಚೆನ್ನಾಗಿತ್ತು, 4 ಗಂಟೆಯ ಬಳಿಕ ಎಲ್ಲವೂ ಬದಲಾವಣೆಯಾಗಿದೆ
- ಒಂದು ವರ್ಷದ ಹೋರಾಟ ನೀರಿನಲ್ಲಿ ಹೋಮ ಮಾಡಿದಂತೆ ಮಾಡ್ತಾ ಇದ್ದಾರೆ ಎಂದು ಕಣ್ಣೀರು ಹಾಕಿದ ಮಂಜು
09:45 December 10
ಪಾಲಿಕೆ ಸದಸ್ಯರಿಂದ ಮತದಾನ
- ಹುಬ್ಬಳ್ಳಿಯ ಮಹಾನಗರ ಪಾಲಿಕೆಯಲ್ಲಿ ಚುನಾವಣೆ ಪ್ರಕ್ರಿಯೆ
- ನೂತನವಾಗಿ ಆಯ್ಕೆಯಾದ ಮಹಾನಗರ ಪಾಲಿಕೆ ಸದಸ್ಯರಿಂದ ಮತದಾನ
- ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸೇರಿದಂತೆ ಬಿಜೆಪಿ ಪಾಲಿಕೆ ಸದಸ್ಯರಿಂದ ಮತದಾನ
- 11 ಗಂಟೆ ಸುಮಾರಿಗೆ ಒಗ್ಗಟ್ಟಾಗಿ ಆಗಮಿಸಿ ಮಹಾನಗರ ಪಾಲಿಕೆಯಲ್ಲಿನ ಮತಗಟ್ಟೆಯಲ್ಲಿ ಮತಚಲಾಯಿಸಲಿರುವ ನಾಯಕರು
- ಮತದಾನದ ವೇಳೆ, ಮಾಸ್ಕ್, ಸಾಮಾಜಿಕ ಅಂತರ ಪಾಲನೆ
- ಮತಗಟ್ಟೆ ಸಂಖ್ಯೆ 144 ರಲ್ಲಿ ಮತದಾನ ಮಾಡುತ್ತಿರುವ ಪಾಲಿಕೆ ಸದಸ್ಯರು
09:32 December 10
- ವಿಶೇಷ ಪೂಜೆ ಸಲ್ಲಿಸಿದ ಸಚಿವ ಕೆ.ಎಸ್ ಈಶ್ವರಪ್ಪ
- ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ನಗರದ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪೂಜೆ
- ಮಹಾನಗರ ಪಾಲಿಕೆ ಸದಸ್ಯರೊಂದಿಗೆ ಆಗಮಿಸಿದ ಸಚಿವ ಕೆ.ಎಸ್ ಈಶ್ವರಪ್ಪ
- ಮಹಾನಗರ ಪಾಲಿಕೆ ಮೇಯರ್ ಸುನೀತಾ ಅಣ್ಣಪ್ಪ,ಉಪ ಮೇಯರ್ ಗನ್ನಿ ಶಂಕರ್ ಸೇರಿದಂತೆ ಮಹಾನಗರ ಪಾಲಿಕೆ ಸದಸ್ಯರು, ಪಕ್ಷದ ಮುಖಂಡರು ಭಾಗಿ
09:28 December 10
ದೇವರ ಮೊರೆ ಹೋದ ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ
- ಬೆಳಗಾವಿಯಲ್ಲಿ ಎರಡು ಸ್ಥಾನಗಳಿಗೆ ಪರಿಷತ್ ಚುನಾವಣೆಗೆ ಇಂದು ಮತದಾನ
- ಬೆಳ್ಳಂಬೆಳಿಗ್ಗೆ ದೇವರ ಮೊರೆ ಹೋದ ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ
- ಚಿಕ್ಕೋಡಿಯ ಹುದ್ದಾರ ಗಲ್ಲಿಯ ರವಿವಾರಪೇಟೆಯಲ್ಲಿರುವ ದುರದಡೇಶ್ವರ ಮಠಕ್ಕೆ ಕವಟಗಿಮಠ ಭೇಟಿ
- ಬಳಿಕ ಹಾಲಟ್ಟಿ ಲಕ್ಷ್ಮೀ ದೇವಿಯ ಆಶೀರ್ವಾದ ಪಡೆದ ಕವಟಗಿಮಠ
09:27 December 10
ಅವಳಿ ಜಿಲ್ಲೆಗಳಲ್ಲಿ ಮತದಾನ ಆರಂಭ
- ವಿಜಯಪುರ- ಬಾಗಲಕೋಟೆ ಪರಿಷತ್ ಚುನಾವಣೆ
- ಅವಳಿ ಜಿಲ್ಲೆಗಳಲ್ಲಿ ಮತದಾನ ಆರಂಭ
- ಹಕ್ಕು ಚಲಾಯಿಸಲು ಆಗಮಿಸುತ್ತಿರುವ ಸ್ಥಳೀಯ ಜನಪ್ರತಿನಿಧಿಗಳು
- ಅವಳಿ ಜಿಲ್ಲೆಯ 3536 ಪುರುಷ, 3852 ಮಹಿಳಾ ಮತದಾರರು ಸೇರಿ ಒಟ್ಟು 7390 ಮತದಾರರು ಮತ ಚಲಾಯಿಸಲಿದ್ದಾರೆ
- ವಿಜಯಪುರ ಜಿಲ್ಲೆಯಲ್ಲಿ 208 ಬಾಗಲಕೋಟೆ ಜಿಲ್ಲೆಯ 203 ಮತಗಟ್ಟೆಗಳಲ್ಲಿ ನಡೆಯಲಿರೋ ಮತದಾನ
- ಬಿಗಿ ಭದ್ರತೆಗಾಗಿ ವಿಜಯಪುರ ಜಿಲ್ಲೆಯಲ್ಲಿ 811 ಹಾಗೂ ಬಾಗಲಕೋಟೆ ಜಿಲ್ಲೆಯಲ್ಲಿ 307 ಪೊಲೀಸ್ ಅಧಿಕಾರಿ, ಸಿಬ್ಬಂದಿ ನೇಮಕ
- ಅವಳಿ ಜಿಲ್ಲೆಯಲ್ಲಿ 80 ಅತೀ ಸೂಕ್ಷ್ಮ, 156 ಸೂಕ್ಷ್ಮ, 175 ಸಾಧಾರಣ ಮತಗಟ್ಟೆಗಳಲ್ಲಿ ಆರಂಭವಾಗಿರೋ ಮತದಾನ
09:25 December 10
ಬೂತ್ ಏಜೆಂಟ್ ಆಗ್ತೀನಿ ಎಂದಿದ್ದ ಸತೀಶ್ ಜಾರಕಿಹೊಳಿ
- ಬೆಳಗಾವಿಯಲ್ಲಿ ಜಿದ್ದಾಜಿದ್ದಿನ ವಿಧಾನ ಪರಿಷತ್ ಚುನಾವಣೆಗೆ ಮತದಾನ
- ಅಣ್ಣ ರಮೇಶ್ ಜಾರಕಿಹೊಳಿ ಕ್ಷೇತ್ರದಲ್ಲಿ ತಮ್ಮ ಸತೀಶ್ ಜಾರಕಿಹೊಳಿ ಮೊಕ್ಕಾಂ
- ಗುಜನಾಳ ಗ್ರಾಮ ಪಂಚಾಯತಿ ಬಳಿ ಮೊಕ್ಕಾಂ ಹೂಡಿದ ಸತೀಶ ಜಾರಕಿಹೊಳಿ
- ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ ಗುಜನಾಳ ಗ್ರಾಮ
- ಸತೀಶ್ ಜಾರಕಿಹೊಳಿ, ಕೆಪಿಸಿಸಿ ಕಾರ್ಯಾಧ್ಯಕ್ಷ
- ಗುಜನಾಳ ಮತಗಟ್ಟೆಯಲ್ಲಿ ಬೂತ್ ಏಜೆಂಟ್ ಆಗ್ತೀನಿ ಎಂದಿದ್ದ ಸತೀಶ್ ಜಾರಕಿಹೊಳಿ
- ಶಾಸಕರಿಗೆ ಬೂತ್ ಎಜೆಂಟ್ ಆಗಲು ಅವಕಾಶ ಇರದ ಹಿನ್ನೆಲೆ ಬೂತ್ ಹೊರಗೆ ಮೊಕ್ಕಾಂ ಹೂಡಿದ ಸತೀಶ್ ಜಾರಕಿಹೊಳಿ
- ಗೋಕಾಕ್ ತಾಲೂಕಿನಲ್ಲಿ ಚುನಾವಣೆ ಅಕ್ರಮದ ಶಂಕೆ ಹಿನ್ನೆಲೆ ಬೂತ್ ಏಜೆಂಟ್ ಆಗೋದಾಗಿ ಮೊದಲೇ ಘೋಷಣೆ ಮಾಡಿದ್ದ ಸತೀಶ ಜಾರಕಿಹೊಳಿ
09:24 December 10
ಹಕ್ಕು ಚಲಾಯಿಸಿದ ಸಂಸದೆ, ನಗರ ಶಾಸಕರು
- ಬೆಳಗಾವಿ ಪರಿಷತ್ ಚುನಾವಣೆ ಮತದಾನ ಆರಂಭ
- ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ನಾಯಕರಿಂದ ಮತದಾನ
- ಹಕ್ಕು ಚಲಾಯಿಸಿದ ಸಂಸದೆ, ನಗರ ಶಾಸಕರು
- ಸಂಸದೆ ಮಂಗಲ ಅಂಗಡಿ, ಶಾಸಕರಾದ ಅಭಯ ಪಾಟೀಲ, ಅನಿಲ್ ಬೆನಕೆಯಿಂದ ಮತದಾನ
- ಪಾಲಿಕೆ ಬಿಜೆಪಿ ಸದಸ್ಯರ ಜೊತೆಗೆ ಆಗಮಿಸಿ ಮತದಾನ
09:11 December 10
ವಿಧಾನ ಪರಿಷತ್ ಚುನಾವಣೆ: ಮತದಾನ ಆರಂಭ
ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‍ನ 25 ಸ್ಥಾನಗಳಿಗೆ ಇಂದು ಚುನಾವಣೆ ನಡೆಯುತ್ತಿದೆ. ಇಂದು ಬೆಳಗ್ಗೆ 8ರಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದ್ದು, ಮೂರು ಪಕ್ಷಗಳ ಘಟಾನುಘಟಿ ನಾಯಕರು ಚುನಾವಣಾ ಕ್ಷೇತ್ರಗಳಿಂದ ಹೊರಬಂದಿದ್ದು, ತಮ್ಮ ಅಭ್ಯರ್ಥಿಗಳ ಗೆಲುವಿಗೆ ಹಾತೊರೆಯುತ್ತಿದ್ದಾರೆ.
25 ಕ್ಷೇತ್ರಗಳಲ್ಲಿ ಒಟ್ಟು 90 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಪೈಕಿ 89 ಮಂದಿ ಪುರುಷ ಅಭ್ಯರ್ಥಿಗಳು ಸ್ಪರ್ಧಿಸಿದ್ದರೆ, ಚಿಕ್ಕಮಗಳೂರು ಕ್ಷೇತ್ರದಿಂದ ಒಬ್ಬ ಮಹಿಳಾ ಅಭ್ಯರ್ಥಿ ಮಾತ್ರ ಕಣದಲ್ಲಿರುವುದು ಈ ಬಾರಿಯ ಚುನಾವಣೆಯ ವಿಶೇಷ. ಕಾಂಗ್ರೆಸ್ ಅಭ್ಯರ್ಥಿ ಎ.ವಿ.ಗಾಯತ್ರಿ ಶಾಂತೇಗೌಡ ಚಿಕ್ಕಮಗಳೂರಿನಿಂದ ಸ್ಪರ್ಧಿಸಿದ್ದಾರೆ.
ಬಿಜೆಪಿ ಹಾಗೂ ಕಾಂಗ್ರೆಸ್ ತಲಾ 20 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರೆ, ಜೆಡಿಎಸ್ 6 ಕ್ಷೇತ್ರಗಳಲ್ಲಿ ಮಾತ್ರ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಇನ್ನು ಆಮ್ ಆದ್ಮಿ ಪಕ್ಷ 3 ಕ್ಷೇತ್ರಗಳಲ್ಲಿ, ಕನ್ನಡ ಚಳವಳಿ ವಾಟಾಳ್ ಪಕ್ಷ 1, ಕರ್ನಾಟಕ ರಾಷ್ಟ್ರ ಸಮಿತಿ 1, ಜನಹಿತ ಪಕ್ಷ 1, ಜೆಡಿಯು 1, ಜನತಾ ಪಾರ್ಟಿ 2, ಎಸ್ಡಿಪಿಐ 1, ಪಕ್ಷೇತರರು 33 ಅಭ್ಯರ್ಥಿಗಳು ಸೇರಿ ಒಟ್ಟು 90 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.
25 ಕ್ಷೇತ್ರಗಳ ಚುನಾವಣೆಗೆ 6,073 ಮತಗಟ್ಟೆಗಳನ್ನು ತೆರೆಯಲಾಗುತ್ತದೆ. ಪುರುಷರು 47,368 ಹಾಗೂ 51,474 ಮಹಿಳೆಯರು ಮತ್ತು ಇತರ 3 ಮಂದಿ ಸೇರಿದಂತೆ ಒಟ್ಟು 98,846 ಸದಸ್ಯರು ಮತ ಚಲಾಯಿಸುವ ಹಕ್ಕು ಪಡೆದಿದ್ದಾರೆ. ಚುನಾವಣೆಗೆ 7073 ಪಿಆರ್‌ಒಗಳು, 9344 ಪಿಒಗಳು ಹಾಗೂ 6648 ಮೈಕ್ರೋ ಅಬ್ಸರ್ವರ್ಗಳನ್ನು ನಿಯೋಜಿಸಲಾಗಿದೆ.