ಕರ್ನಾಟಕ

karnataka

ಫಾರ್ಚುನರ್ ಕಾರುಗಳಿಗೆ ಕನ್ನ; ಕದ್ದ ವಾಹನಕ್ಕೆ ಎಂಎಲ್ಸಿ ಕಾರು ನಂಬರ್ ಬಳಸಿ ಸಿಕ್ಕಿಬಿದ್ದರು!

By

Published : Apr 9, 2023, 3:58 PM IST

Updated : Apr 9, 2023, 4:36 PM IST

ಟೊಯೊಟಾ ಫಾರ್ಚುನರ್ ಕಾರುಗಳನ್ನು ಕದ್ದು ಬೇರೆ ರಾಜ್ಯಗಳಿಗೆ ಮಾರಾಟ ಮಾಡುತ್ತಿದ್ದ ಕಳ್ಳರ ತಂಡವನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

Highgrounds police busted interstate gang
ಅಂತರರಾಜ್ಯ ಕಳ್ಳರಜಾಲ ಬಯಲಿಗೆಳೆದ ಹೈಗ್ರೌಂಡ್ಸ್ ಪೊಲೀಸರು

ಅಂತರ್‌ರಾಜ್ಯ ಕಳ್ಳರ ಜಾಲ ಬಯಲು

ಬೆಂಗಳೂರು: ಕಾರುಗಳನ್ನು ಕದ್ದು ಅವುಗಳ ನಂಬರ್‌ಪ್ಲೇಟ್ ಬದಲಿಸಿ ಮಾರಾಟ ಮಾಡುತ್ತಿದ್ದ ಅಂತರ್‌ರಾಜ್ಯ ಕಳ್ಳರ ಗುಂಪನ್ನು ಹೈಗ್ರೌಂಡ್ಸ್ ಠಾಣಾ ಪೊಲೀಸರು ಸೆರೆ ಹಿಡಿದಿದ್ದಾರೆ. ನಸೀಬ್, ಮಂಜುನಾಥ್, ಷಹಬಾಜ್ ಖಾನ್, ಸೈಯ್ಯದ್ ರಿಯಾಜ್​​, ಇಮ್ರಾನ್ ಹಾಗೂ ನಯಾಜ್ ಖಾನ್ ಬಂಧಿತರು. ಇವರಿಂದ 3 ಕೋಟಿ ರೂ ಮೌಲ್ಯದ ಎಂಟು ಕಾರುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಎಂಎಲ್ಸಿ ಕಾರು ನಂಬರ್ ಬಳಸಿದ್ದರು: ಆರೋಪಿಗಳು ಹೆಚ್ಚಾಗಿ ಟೊಯೊಟಾ ಫಾರ್ಚುನರ್ ಕಾರುಗಳನ್ನೇ ಕಳ್ಳತನ ಮಾಡುತ್ತಿದ್ದರು. ಕಾರುಗಳ ನಂಬರ್ ಬದಲಿಸಿ ಕೇರಳ, ಮಹಾರಾಷ್ಟ್ರ, ರಾಜಾಸ್ತಾನ, ದೆಹಲಿ ಸೇರಿದಂತೆ ಹಲವೆಡೆ ಮಾರಾಟ ಮಾಡುತ್ತಿದ್ದರು. ಇದೇ ರೀತಿ‌ ನಂಬರ್ ಬದಲಿಸಿ ಮಾರಾಟ ಮಾಡುವಾಗ ಜೆಡಿಎಸ್ ಎಂಎಲ್ಸಿ ಭೋಜೇಗೌಡರ ಕಾರಿನ ನಂಬರ್ ಬಳಸಿದ್ದು, ಆ ಕಾರನ್ನು ಕ್ವೀನ್ಸ್ ರಸ್ತೆಯ ಐ ಕಾರ್ಸ್ ಸ್ಟುಡಿಯೋದಲ್ಲಿ ಮಾರಾಟಕ್ಕಿಟ್ಟಿದ್ದರು. ಇದನ್ನು ಕಂಡ ಭೋಜೇಗೌಡರ ಆಪ್ತರೊಬ್ಬರು ನೀಡಿದ ಮಾಹಿತಿಯನ್ವಯ ಹೈಗ್ರೌಂಡ್ಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು.

ಕದ್ದ ಕಾರುಗಳು

ಬಂಧಿತ ಷಹಬಾಜ್ ಖಾನ್ ಜೆಡಿಎಸ್ ಮುಖಂಡ:ಪ್ರಕರಣದಲ್ಲಿ ಬಂಧಿತರ ಪೈಕಿ ಷಹಬಾಜ್ ಖಾನ್ ಮೈಸೂರು ಭಾಗದಲ್ಲಿ ಜೆಡಿಎಸ್ ಪಕ್ಷದ ಮುಖಂಡ. ಈತ ಪ್ರಸ್ತುತ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಪ್ರಯತ್ನಿಸಿದ್ದಾನೆ. ಮೈಸೂರು ಭಾಗದಲ್ಲಿ ಜೆಡಿಎಸ್ ಸಂಘಟನೆಯಲ್ಲಿ ಕೆಲಸ ಮಾಡಿರುವುದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.

ಇದನ್ನೂಓದಿ:ಪಶ್ಚಿಮ ಆಫ್ರಿಕಾದ ಬುರ್ಕಿನ್​ ಫಾಸೊದಲ್ಲಿ ಐಸಿಸ್​ ಉಗ್ರರ ಅಟ್ಟಹಾಸ: 44 ಜನರ ಹತ್ಯೆ

Last Updated : Apr 9, 2023, 4:36 PM IST

ABOUT THE AUTHOR

...view details