ಬೆಂಗಳೂರು : ಜನಪ್ರತಿನಿಧಿಗಳು ಪ್ರತಿ ವರ್ಷ ಜೂನ್ನಲ್ಲಿ ತಮ್ಮ ಆಸ್ತಿ ವಿವರವನ್ನು ಲೋಕಾಯುಕ್ತರಿಗೆ ಸಲ್ಲಿಸಬೇಕು. ಆದರೆ, ಈ ವರ್ಷ ಇದುವರೆಗೆ ಆಸ್ತಿ ವಿವರ ಸಲ್ಲಿಸದವರ ಪಟ್ಟಿ ದೊಡ್ಡದಿದೆ. ಈ ಕುರಿತು ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.
ಈ ವರ್ಷ ಕೊರೊನಾ ಕಾರಣ ಆಡಿಟಿಂಗ್ ಸಮಸ್ಯೆಯಾಗಿದೆ ಎಂದು ಹಲವರು ಪತ್ರ ಬರೆದಿದ್ದಾರೆ. ಅಲ್ಲದೇ, ಆದಾಯ ಇಲಾಖೆಗೆ ಆಸ್ತಿ ವಿವರ ಸಲ್ಲಿಕೆ ಮಾಡಲು ನವೆಂಬರ್ವರೆಗೆ ಸಮಯವಕಾಶ ಇದೆ. ಹೀಗಾಗಿ ಈ ಬಾರಿ ಬಹಳಷ್ಟು ಮಂದಿ ಆಸ್ತಿ ವಿವರ ಸಲ್ಲಿಕೆ ಮಾಡಿಲ್ಲ. ಲೋಕಾಯುಕ್ತ ನ್ಯಾಯಮೂರ್ತಿಯಾದ ನಾನು ಹಾಗೂ ಹೈಕೋರ್ಟ್ ನ್ಯಾಯಮೂರ್ತಿಗಳು ಆಸ್ತಿ ವಿವರ ಸಲ್ಲಿಕೆ ಮಾಡಬೇಕು ಎಂಬ ನಿಯಮ ಇಲ್ಲ. ನಾವು ಅಧಿಕಾರ ಸ್ವೀಕಾರ ಮಾಡುವಾಗ ನಮ್ಮ ಆಸ್ತಿ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ತೆರಿಗೆ ಕಟ್ಟಿಯೇ ಅಧಿಕಾರ ಸ್ವೀಕಾರ ಮಾಡಿರುವುದು. ಹೀಗಾಗಿ, ನಮ್ಮ ಆಸ್ತಿ ವಿವರ ಬಹಿರಂಗ ಮಾಡಬೇಕಾದ ನಿಯಮ ಇಲ್ಲ. ಹಾಗೆ ಹೊಸ ಕಾನೂನು ತರಲು ನನಗೂ ಇಷ್ಟ ಇಲ್ಲ ಎಂದು ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಹೇಳಿದ್ದಾರೆ.
ಸದ್ಯ 225 ಶಾಸಕರ ಪೈಕಿ, ಇಲ್ಲಿಯವರೆಗೆ 148 ಮಂದಿ ಆಸ್ತಿ ವಿವರ ಸಲ್ಲಿಸಿಲ್ಲ. ಅವರ ಹೆಸರುಗಳು ಹೀಗಿವೆ :