ಕರ್ನಾಟಕ

karnataka

ETV Bharat / state

ಪೊಲೀಸ್ ಕಮಿಷನರ್ ಕಚೇರಿಗೆ ದಿಢೀರ್ ಭೇಟಿ ನೀಡಿದ ಶಾಸಕ ಜಮೀರ್ ಅಹಮದ್ - ಜಮೀರ್ ಅಹ್ಮದ್ ಖಾನ್

ರಾಜ್ಯ ರಾಜಕಾರಣದಲ್ಲಿ ಬಿಟ್ ಕಾಯಿನ್ ಪ್ರಕರಣದ ಬಗ್ಗೆ ಜೋರು ಚರ್ಚೆಯಾಗುತ್ತಿರುವ ಬೆನ್ನಲೇ ಪೊಲೀಸ್ ಕಮಿಷನರ್ ಕಮಲ್ ಪಂತ್ ಸೇರಿದಂತೆ ಹಿರಿಯ ಅಧಿಕಾರಿಗಳನ್ನು ಜಮೀರ್ ಅಹಮದ್ ಭೇಟಿ ಮಾಡಿರುವುದು ಭಾರಿ ಕುತೂಹಲ ಮೂಡಿಸಿದೆ..

ಪೊಲೀಸ್ ಕಮೀಷನರ್ ಕಚೇರಿಗೆ ದಿಢೀರ್ ಭೇಟಿ ನೀಡಿದ ಜಮೀರ್ ಅಹಮದ್
ಪೊಲೀಸ್ ಕಮೀಷನರ್ ಕಚೇರಿಗೆ ದಿಢೀರ್ ಭೇಟಿ ನೀಡಿದ ಜಮೀರ್ ಅಹಮದ್

By

Published : Nov 12, 2021, 8:39 PM IST

ಬೆಂಗಳೂರು :ಇನ್‌ಫೆಂಟ್ರಿ ರಸ್ತೆಯಲ್ಲಿರುವ ಪೊಲೀಸ್ ಕಮಿಷನರ್ ಕಚೇರಿಗೆ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಜಮೀರ್ ಅಹ್ಮದ್ ಖಾನ್ ಭೇಟಿ ನೀಡಿದ್ದಾರೆ.

ಪೊಲೀಸ್ ಕಮಿಷನರ್ ಕಚೇರಿಗೆ ದಿಢೀರ್ ಭೇಟಿ ನೀಡಿದ ಶಾಸಕ ಜಮೀರ್ ಅಹಮದ್

ರಾಜ್ಯ ರಾಜಕಾರಣದಲ್ಲಿ ಬಿಟ್ ಕಾಯಿನ್ ಪ್ರಕರಣದ ಬಗ್ಗೆ ಜೋರು ಚರ್ಚೆಯಾಗುತ್ತಿರುವ ಬೆನ್ನಲೇ ಪೊಲೀಸ್ ಕಮಿಷನರ್ ಕಮಲ್ ಪಂತ್ ಸೇರಿದಂತೆ ಹಿರಿಯ ಅಧಿಕಾರಿಗಳನ್ನು ಜಮೀರ್ ಅಹಮದ್ ಭೇಟಿ ಮಾಡಿರುವುದು ಭಾರಿ ಕುತೂಹಲ ಮೂಡಿಸಿದೆ.

ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಜಮೀರ್ ಅಹ್ಮದ್​, ಶಾಸಕನಾಗಿ ಸಹಜವಾಗಿ ಭೇಟಿಯಾಗಿದ್ದೇನೆ. ತಿಂಗಳಿಗೊಮ್ಮೆಯಾದರೂ ಹಿರಿಯ ಅಧಿಕಾರಿಗಳನ್ನ ಭೇಟಿ ಮಾಡುತ್ತಲೇ ಇರುತ್ತೇನೆ.

ಅದೇ ರೀತಿ ಇಂದು ಸಹ ಬಂದಿದ್ದೇನೆ. ನನ್ನ ಕ್ಷೇತ್ರದಲ್ಲಿ ಏನಾದರೂ ಆಗಿದೆಯಾ? ಏನಾದರೂ ಆದರೂ ನಿಮಗೆ ಗೊತ್ತಾಗಲಿದೆ. ಅಂತಹ ಯಾವುದೇ ಕಾರಣವಿಲ್ಲ, ಸಹಜವಾಗಿ ಬಂದಿದ್ದೇನೆ.

ಬರುವಾಗ ಹಿರಿಯ ಐಪಿಎಸ್ ಅಧಿಕಾರಿ ಸೌಮೇಂದು ಮುಖರ್ಜಿ ಸಿಕ್ಕಿದ್ದರೂ ಸಹಜವಾಗಿ ಮಾತನಾಡಿದೆ. ಯಾವುದೇ ಅಂತಹ ಗಂಭೀರ ಕಾರಣಗಳಿಗಾಗಿ ಭೇಟಿಯಾಗಿಲ್ಲ ಎಂದಷ್ಟೇ ಹೇಳಿ ನಿರ್ಗಮಿಸಿದರು.

ABOUT THE AUTHOR

...view details