ಬೆಂಗಳೂರು: ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ ಕೇಸ್ನಲ್ಲಿ ಕಾಂಗ್ರೆಸ್ ಹಾಗೂ ಈ ಕ್ಷೇತ್ರದ ಶಾಸಕ ಜಮೀರ್ ಅಹ್ಮದ್ ಖಾನ್ ಎಂಟ್ರಿ ಕೊಟ್ಟಿದ್ದಾರೆ. ಇಷ್ಟು ದಿನ ಹಿಂದೂ ಸಂಘಟನೆಗಳು, ವಕ್ಫ್ ಬೋರ್ಡ್, ಬಿಬಿಎಂಪಿ ನಡುವೆ ವಾದ-ಪ್ರತಿವಾದಗಳು ನಡೆಯುತ್ತಿದ್ದವು.
ತಮ್ಮ ಆಸ್ತಿ ಎಂದು ಹೇಳುತ್ತಿರುವ ವಕ್ಫ್ ಬೋರ್ಡ್ಗೆ ದಾಖಲೆ ಸಲ್ಲಿಸುವಂತೆ ಬಿಬಿಎಂಪಿ ನೋಟಿಸ್ ನೀಡಿತ್ತು. ಮೂರು ದಿನದೊಳಗೆ ದಾಖಲೆ ಸಲ್ಲಿಸುವಂತೆ ಪಾಲಿಕೆ ನೀಡಿದ್ದ ಗಡುವು ಇಂದಿಗೆ ಕೊನೆ ಆಗಿದೆ.