ದೊಡ್ಡಬಳ್ಳಾಪುರ : ಸಮ್ಮಿಶ್ರ ಸರ್ಕಾರ ಬಿದ್ದು ಹೋಗೋ ಭಯ ಮೈತ್ರಿ ಪಕ್ಷಕ್ಕೆ, ಹೊಸ ಸರ್ಕಾರ ರಚಿಸೋ ಟೆನ್ಶನ್ ಬಿಜೆಪಿಗೆ. ಹೀಗೆ ಎಲ್ಲಾ ಪಕ್ಷಗಳ ರಾಜಕಾರಣಿಗಳು ಸದಾ ಒಂದಲ್ಲ ಒಂದು ರೀತಿಯ ರಾಜಕೀಯ ಜಂಜಾಟದಲ್ಲಿ ಮುಳುಗಿರ್ತಾರೆ. ಅದರೀವತ್ತು ದೊಡ್ಡಬಳ್ಳಾಪುರ ಶಾಸಕ ಟಿ. ವೆಂಕಟರಮಣಯ್ಯ ಮಾತ್ರ ರಾಜಕೀಯ ಬೆಳವಣಿಗೆಗೆ ಕಿವಿಗೊಡದೆ ಭಾರತ- ಆಸ್ಟ್ರೇಲಿಯಾ ಕ್ರಿಕೆಟ್ ಪಂದ್ಯ ವೀಕ್ಷಿಸಿದರು.
ರಾಜಕೀಯ ಜಂಜಾಟಕ್ಕೆ ಬ್ರೇಕ್... ಇಂಡೋ-ಆಸಿಸ್ ಪಂದ್ಯ ವೀಕ್ಷಿಸಿದ ಶಾಸಕ - BJP
ದೊಡ್ಡಬಳ್ಳಾಪುರ ಶಾಸಕ ಟಿ. ವೆಂಕಟರಮಣಯ್ಯ ಇಂದು ರಾಜಕೀಯ ಜಂಜಾಟ ಮರೆತು ಬಿಂದಾಸ್ ಆಗಿ ಕ್ರಿಕೆಟ್ ಪಂದ್ಯ ವೀಕ್ಷಿಸಿದರು.
ಕೆಟ್ ಪಂದ್ಯ ವೀಕ್ಷಿಸಿದ ದೊಡ್ಡಬಳ್ಳಾಪುರ ಶಾಸಕ ಟಿ. ವೆಂಕಟರಮಣಯ್ಯ
ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ವಿಶ್ವಕಪ್ ಪಂದ್ಯಾವಳಿಯ ಭಾರತ ಮತ್ತು ಆಸ್ಟ್ರೇಲಿಯಾ ಪಂದ್ಯದಲ್ಲಿನ ಭಾರತೀಯ ಆಟಗಾರರ ಅದ್ಭುತ ಬ್ಯಾಟಿಂಗ್ಗೆ ಮನಸೋತ ಶಾಸಕ ಟಿ. ವೆಂಕಟರಮಣಯ್ಯ ಕೊಂಚ ಬಿಡುವು ಮಾಡ್ಕೊಂಡು ಕುಟುಂಬದ ಜೊತೆ ಕ್ರಿಕೆಟ್ ಪಂದ್ಯ ವೀಕ್ಷಿಸಿದರು.