ಬೆಂಗಳೂರು:ಸದನದಲ್ಲಿ ಕೋಲಾರದ ಶಾಸಕರಾದ ಶ್ರೀನಿವಾಸ್‌ಗೌಡರು ಯಲಹಂಕ ಶಾಸಕ ವಿಶ್ವನಾಥ್ ಮತ್ತು ಡಾ. ಅಶ್ವತ್ ನಾರಾಯಣ್ ವಿರುದ್ಧ ಗಂಭೀರ ಆರೋಪ ಮಾಡಿದ್ದು,ಈ ಆರೋಪಕ್ಕೆ ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್ ಪ್ರತಿಕ್ರಿಯೆ ಸ್ಪಷ್ಟೀಕರಣ ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶ್ರೀನಿವಾಸ್‌ಗೌಡರು ನಮ್ಮ ಮೇಲೆ ಗಂಭೀರ ಆರೋಪ ಮಾಡಿದ್ದು, ಶಾಸಕರು ಇಲ್ಲೇ ಇದ್ದಾರೆ ಎಂದು ಆಡಳಿತ ಪಕ್ಷದಿಂದ ಸ್ಪಷ್ಟೀಕರಣ ನೀಡಬೇಕು ಎಂದರು. ಆದರೆ, ಕಾರ್ಯ ಕಲಾಪ ಡೈವರ್ಟ್ ಆಗುತ್ತೆ ಎಂದು ನಾವು ಏನನ್ನೂ ಮಾತನಾಡಲಿಲ್ಲ. ಅವರು ಈ ಹಿಂದೆನೇ ನಮ್ಮ ಮೇಲೆ ಆರೋಪವನ್ನು ಮಾಡಿದ್ರು. ಈ ಬಗ್ಗೆ ಎಸಿಬಿಯಲ್ಲಿ ದೂರು ದಾಖಲಾಗಿತ್ತು. ವಿಚಾರಣೆಗೆ ಕರೆದಾಗ ನಾನು ಸುಳ್ಳು ಹೇಳಿಕೆ ನೀಡಿದ್ದೇನೆ ಎಂದು ಎಸಿಬಿ ಮುಂದೇನೆ ತಪ್ಪನ್ನು ಒಪ್ಪಿಕೊಂಡಿದ್ದರು. ಸರ್ಕಾರ ಗೊಂದಲದಲ್ಲಿ ಇರುವುದರಿಂದ ಆ ಹೇಳಿಕೆಗಳ ಮುಖಾಂತರ ಮೈಂಡ್ ಡೈವೋರ್ಟ್ ಮಾಡಲು ಮಾತನಾಡಿದ್ದೆ ಎಂದು ಕೇಸ್ ಕ್ಲೋಸ್ ಮಾಡಿಕೊಂಡು ಬಂದಿದ್ದಾರೆ ಎಂದರು.