ಕರ್ನಾಟಕ

karnataka

ETV Bharat / state

ಶಾಸಕ ಖಾದರ್​ ಒಬ್ಬ ಹುಚ್ಚ, ದೇಶದ್ರೋಹಿ: ರೇಣುಕಾಚಾರ್ಯ ಕಿಡಿ - ಶಾಸಕ ರೇಣುಕಾಚಾರ್ಯ ಪತ್ರಿಕಾಗೋಷ್ಠಿ

ಶಾಸಕ ಯು.ಟಿ.ಖಾದರ್​ ದೇಶದ್ರೋಹಿ. ಅವರಿಂದಲೇ ಮಂಗಳೂರಿನಲ್ಲಿ ಗಲಭೆ ಹೆಚ್ಚುತ್ತಿರುವುದು. ನನ್ನ ಬಗ್ಗೆ ಮಾತನಾಡುವ ನೈತಿಕತೆ ಅವರಿಗಿಲ್ಲ. ಸದನದಲ್ಲಿ ಎಲ್ಲದಕ್ಕೂ ಉತ್ತರಿಸುತ್ತೇನೆ ಎಂದು ಏಕವಚನದಲ್ಲೇ ರೇಣುಕಾಚಾರ್ಯ ವಾಗ್ದಾಳಿ.

mla renukacharya
ಶಾಸಕ ರೇಣುಕಾಚಾರ್ಯ

By

Published : Dec 27, 2019, 5:17 PM IST

ಬೆಂಗಳೂರು:ಶಾಸಕ ಯು.ಟಿ.ಖಾದರ್ ಒಬ್ಬ ಹುಚ್ಚ, ದೇಶದ್ರೋಹಿ. ಪಾಕಿಸ್ತಾನ, ಅಫ್ಘಾನಿಸ್ತಾನಕ್ಕೆ ಹೋಗಲಿ. ಇಂತವರ ಹೇಳಿಕೆಗೆ ಸದನದಲ್ಲಿ ತಕ್ಕ ಉತ್ತರ ನೀಡುತ್ತೇನೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಕಿಡಿಕಾರಿದ್ದಾರೆ.

ಶಾಸಕ ರೇಣುಕಾಚಾರ್ಯ

ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಖಾದರ್​ಗೆ ನನ್ನ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ. ಹುಚ್ಚರ ಹೇಳಿಕೆಗೆ ತಕ್ಕ ಉತ್ತರ ಕೊಡುತ್ತೇನೆ. ಬೆಂಕಿ ಹಚ್ಚೋ ಹೇಳಿಕೆ ಬಗ್ಗೆ ಅಷ್ಟು ಸುಲಭವಾಗಿ ನಾನು ಬಿಡಲ್ಲ ಎಂದು ಏಕವಚನದಲ್ಲಿ ಶಾಸಕ ಖಾದರ್​ ವಿರುದ್ಧ ಕುಟುಕಿದ್ದಾರೆ.

ಪಶ್ಚಿಮ ಬಂಗಾಳದಲ್ಲಿನ ಗಲಭೆ, ದೊಂಬಿಯನ್ನು ನೋಡುವುದು ಬಿಟ್ಟು ಇಲ್ಲಿಗೆ ಪರಿಹಾರ ನೀಡಲು ಬಂದಿದ್ದಾರೆ. ಮೊದಲು ಅದನ್ನು ನಿಯಂತ್ರಿಸಲಿ ಎಂದು ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಗುಡುಗಿದರು.

ABOUT THE AUTHOR

...view details