ಕರ್ನಾಟಕ

karnataka

ETV Bharat / state

ಸಚಿವ ಸ್ಥಾನಕ್ಕೆ 'ಕತ್ತಿ' ಪಟ್ಟು: ಬೆಳ್ಳಂಬೆಳಗ್ಗೆ ಸಿಎಂ ನಿವಾಸಕ್ಕೆ ಭೇಟಿ - mla umesh katti visits to cm residency

ಸಚಿವ ಸ್ಥಾನದ ಆಕಾಂಕ್ಷಿಯಾಗಿರುವ ಶಾಸಕ ಉಮೇಶ್​​ ಕತ್ತಿ ಪದೇ ಪದೆ ಸಿಎಂ ಯಡಿಯೂರಪ್ಪನವರನ್ನು ಭೇಟಿ ಮಾಡ್ತಿದ್ದಾರೆ.

cm
ಸಚಿವ ಸ್ಥಾನಕ್ಕೆ ಉಮೇಶ್ ಕತ್ತಿ ಪಟ್ಟು

By

Published : Dec 13, 2019, 10:06 AM IST

ಬೆಂಗಳೂರು:ಸಚಿವ ಸ್ಥಾನ ಬೇಕೇಬೇಕು ಎಂದು ಶಾಸಕ ಉಮೇಶ್ ಕತ್ತಿ ಪಟ್ಟು ಹಿಡಿದಿದ್ದಾರೆ ಎನ್ನಲಾಗುತ್ತಿದೆ. ಹಾಗಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಡಾಲರ್ಸ್ ಕಾಲೋನಿಯ ಧವಳಗಿರಿ ನಿವಾಸಕ್ಕೆ ಇಂದು ಬೆಳಿಗ್ಗೆ 2 ಬಾರಿ ಭೇಟಿ ನೀಡಿ ಸಿಎಂ ಜೊತೆ ಮಾತನಾಡಿದ್ದಾರೆ ಎಂದು ತಿಳಿದು ಬಂದಿದೆ.

ಸಿಎಂ ನಿವಾಸ, ವಿಧಾನಸೌಧ ಎಲ್ಲೆಂದರಲ್ಲಿ ಸಿಎಂ ಭೇಟಿ ಮಾಡುತ್ತಿರುವ ಕತ್ತಿ, ಫಲಿತಾಂಶದ ಬಳಿಕ ನಿತ್ಯ ಎರಡು ಮೂರು ಬಾರಿ ಸಿಎಂ ಭೇಟಿ ಮಾಡುತ್ತಿದ್ದಾರೆ. ಇವತ್ತೂ ಸಹ ಬೆಳ್ಳಂಬೆಳಗ್ಗೆ ಎರಡು ಸಲ ಸಿಎಂ ನಿವಾಸಕ್ಕೆ ಉಮೇಶ್ ಕತ್ತಿ ಬಂದು ಹೋಗಿದ್ದಾರೆ. ಉಪ ಚುನಾವಣೆಗೂ ಮುನ್ನ ಕಾಣಿಸಿಕೊಳ್ಳದ ಶಾಸಕ, ಈಗ ನಿತ್ಯ ಸಿಎಂ ಎದುರು ಪ್ರತ್ಯಕ್ಷರಾಗಿ ಸಚಿವ ಸ್ಥಾನಕ್ಕೆ ಒತ್ತಡ ಹೇರುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಸಚಿವ ಸ್ಥಾನಕ್ಕೆ ಉಮೇಶ್ ಕತ್ತಿ ಪಟ್ಟು

ಒಟ್ಟಾರೆಯಾಗಿ ಅನರ್ಹರ ಗೆಲುವಿನ ನಂತರ ಬಿಎಸ್​ವೈ ನಿಟ್ಟುಸಿರು ಬಿಡುತ್ತಿರುವಾಗ ಈಗ ಮುಖ್ಯಮಂತ್ರಿಗಳಿಗೆ ಉಮೇಶ್​​ ಕತ್ತಿ ತಲೆನೋವಾಗ್ತಾರಾ ಅನ್ನೋ ಪ್ರಶ್ನೆ ಮೂಡಿದೆ.

ABOUT THE AUTHOR

...view details