ಕರ್ನಾಟಕ

karnataka

ETV Bharat / state

ಮಹಿಳಾ ಸಾಧಕಿಯರ ಜೊತೆ ರ‍್ಯಾಂಪ್ ಮೇಲೆ ಹೆಜ್ಜೆ ಹಾಕಿದ ಶಾಸಕಿ ಸೌಮ್ಯ ರೆಡ್ಡಿ! - ಜ್ಯುವೆಲ್ಸ್ ಆಫ್ ಇಂಡಿಯಾ 22ನೇ ಅವೃತ್ತಿ

ಮಹಿಳೆಯರಿಗಾಗಿ ಹಮ್ಮಿಕೊಳ್ಳಲಾಗಿರುವ ಜ್ಯುವೆಲ್ಸ್ ಆಫ್ ಇಂಡಿಯಾ ಆಭರಣ ಮೇಳದಲ್ಲಿ ಸಾಂಪ್ರದಾಯಿಕ ಶೈಲಿಯಿಂದ ಹಿಡಿದು ವೆಸ್ಟರ್ನ್ ಸ್ಟೈಲ್​ವರೆಗೂ ಅನೇಕ ವಿಧಗಳ ಆಭರಣಗಳು ಲಭ್ಯವಿದೆ. ಇಂದಿನಿಂದ ಮೂರು ದಿನಗಳ ಕಾಲ ಈ ಜ್ಯುವೆಲರಿ ಎಕ್ಸಿಬಿಷನ್ ಬೆಳಗ್ಗೆ 10ರಿಂದ ಸಂಜೆ 7ರವರೆಗೆ ನಡೆಯಲಿದೆ.

ಸೌಮ್ಯ ರೆಡ್ಡಿ
ಸೌಮ್ಯ ರೆಡ್ಡಿ

By

Published : Jan 22, 2021, 7:09 PM IST

ಬೆಂಗಳೂರು: ನಗರದ ಲಲಿತ್ ಅಶೋಕ ಹೋಟೆಲ್‌ನಲ್ಲಿ ಆಯೋಜಿಸಲಾಗಿದ್ದ ಜ್ಯುವೆಲ್ಸ್ ಆಫ್ ಇಂಡಿಯಾ 22ನೇ ಅವೃತ್ತಿಯಲ್ಲಿ ಅತಿಥಿಯಾಗಿ ಆಗಮಿಸಿದ್ದ ಶಾಸಕಿ ಸೌಮ್ಯ ರೆಡ್ಡಿ, ಮಾಡೆಲ್‌ಗಳ‌ ಜೊತೆ ಹೆಜ್ಜೆ ಹಾಕಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಈ ಎಕ್ಸಿಬಿಷನ್‌ನ ವಿಶೇಷ ಅಂದ್ರೆ ಇಂದು ನಡೆದ ಫ್ಯಾಶನ್ ಶೋ, ಅದ್ರಲ್ಲೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕಿಯರು ರ‍್ಯಾಂಪ್ ವಾಕ್ ಮಾಡಿದ್ದು ಹೆಮ್ಮೆಯ ಸಂಗತಿ. ಮಹಿಳಾ ಸಾಧಕಿಯರನ್ನು ನೋಡೋದೆ ಒಂದು ಖುಷಿ ಎಂದು ಹೇಳಿದರು.

ಮಹಿಳಾ ಸಾಧಕಿಯರೊಂದಿಗೆ ರ‍್ಯಾಂಪ್ ವಾಕ್​ ಮಾಡಿದ ಶಾಸಕಿ ಸೌಮ್ಯ ರೆಡ್ಡಿ

ಮಹಿಳೆಯರಿಗಾಗಿಯೇ ಈ ಆಭರಣ ಮೇಳವನ್ನು ಹಮ್ಮಿಕೊಳ್ಳಲಾಗಿದ್ದು, ಇಲ್ಲಿ ಸಾಂಪ್ರದಾಯಿಕ ಶೈಲಿಯಿಂದ ಹಿಡಿದು ವೆಸ್ಟರ್ನ್ ಸ್ಟೈಲ್​ವರೆಗೂ ಅನೇಕ ವಿಧಗಳ ಆಭರಣಗಳು ಲಭ್ಯವಿದೆ. ಈಗಿನ ಟ್ರೆಂಡ್ ಆಗಿರುವ ಟೆಂಪಲ್ ಜ್ಯೂವೆಲರಿ, ಜೇಮ್ ಸ್ಟೋನ್ ಜ್ಯುವೆಲರಿ, ಕುಂದನ್, ಅಂಟಿಕ್, ಅನ್ ಕಟ್ ಸ್ಟೋನ್ ಸೆಟ್ ಮತ್ತು ಪರ್ಲ್ಸ್ ಜ್ಯುವೆಲರಿಗಳು ಕೂಡ ಇಲ್ಲಿ ದೊರೆಯುತ್ತವೆ. ಅಷ್ಟೇ ಅಲ್ಲದೆ ರಾಜಸ್ತಾನಿ ಸ್ಟೈಲ್ ಆಭರಣಗಳು, ಜೈಪುರ ಡಿಸೈನ್ಸ್ ಹಾಗೂ ಹೊಸದಾಗಿ ಎಂಟ್ರಿ ಕೊಟ್ಟಿರೋ 3ಡಿ ಸ್ಟೈಲ್ ಕಲೆಕ್ಷನ್​ಗಳು ಹೆಂಗಳೆಯರನ್ನು ಕ್ಲೀನ್ ಬೋಲ್ಡ್ ಮಾಡಿದವು.

ಚಾಲೆಂಜಿಂಗ್ ಸ್ಟಾರ್ ದರ್ಶನ್​ ಪತ್ನಿ ವಿಜಯಲಕ್ಷ್ಮಿ, ನಟಿ ಸ್ಫೂರ್ತಿ ವಿಶ್ವಾಸ್ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇಂದಿನಿಂದ ಮೂರು ದಿನಗಳ ಕಾಲ ಈ ಜ್ಯುವೆಲರಿ ಎಕ್ಸಿಬಿಷನ್ ಬೆಳಗ್ಗೆ 10ರಿಂದ ಸಂಜೆ 7ರವರೆಗೆ ನಡೆಯಲಿದೆ.

ABOUT THE AUTHOR

...view details