ಕರ್ನಾಟಕ

karnataka

ಜಾತಿ ನಿಂದನೆ ಕೇಸ್ ಬಗ್ಗೆ ಸದನದಲ್ಲಿ ಪ್ರಸ್ತಾಪ ಮಾಡಿದ ಶಾಸಕ ಸಂಗಮೇಶ್

By

Published : Mar 22, 2021, 7:28 PM IST

ಆಟದಲ್ಲಿ ಯಾವುದೇ ಧರ್ಮ ತರಬಾರದು. ಕೆಲ ಕಿಡಿಗೇಡಿಗಳು ಮಧ್ಯ ಪ್ರವೇಶ ಮಾಡಿದರು. ಜೈ ಶ್ರೀರಾಮ್ ಅಂತಾ ಘೋಷಣೆ ಕೂಗಿದ್ರು. ನಾನೂ ಸಹ ರಾಮನ ಭಕ್ತನೇ, ಇಲ್ಲಿ ಬೇಡ ಎಂದು ತಿಳಿ ಹೇಳಿದೆ..

ಶಾಸಕ ಸಂಗಮೇಶ್
ಶಾಸಕ ಸಂಗಮೇಶ್

ಬೆಂಗಳೂರು :ಭದ್ರಾವತಿಯ ಕಬಡ್ಡಿ ಪಂದ್ಯಾವಳಿ ಘರ್ಷಣೆ ಹಾಗೂ ಶಾಸಕರ ವಿರುದ್ಧ ಜಾತಿ ನಿಂದನೆ ಕೇಸ್ ದಾಖಲಿಸಿರುವ ಕುರಿತು ಕಾಂಗ್ರೆಸ್ ಶಾಸಕ ಬಿ ಕೆ ಸಂಗಮೇಶ್ ವಿಧಾನಸಭೆಯಲ್ಲಿ ಇಂದು ವಿಷಯ ಪ್ರಸ್ತಾಪಿಸಿದರು.

ಜಾತಿ ನಿಂದನೆ ಕುರಿತಂತೆ ಕಾಂಗ್ರೆಸ್ ಶಾಸಕ ಬಿ ಕೆ ಸಂಗಮೇಶ್ ಮಾತು..

ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಸುಳ್ಳು ಕೇಸ್ ಹಾಕಿರುವುದನ್ನು ವಾಪಸ್ ಪಡೆಯಲು ಒತ್ತಾಯಿಸಿದರು. ಕಬಡ್ಡಿ ಪಂದ್ಯದಲ್ಲಿ‌ ಧರ್ಮ ಉಲ್ಲೇಖ ಮಾಡಲಾಗಿದೆ. ಆಟದಲ್ಲಿ ಯಾವುದೇ ಧರ್ಮವನ್ನು ತರಬಾರದು. ಕೆಲ ಕಿಡಿಗೇಡಿಗಳು ಮಧ್ಯ ಪ್ರವೇಶ ಮಾಡಿದರು. ಜೈ ಶ್ರೀರಾಮ್ ಅಂತಾ ಘೋಷಣೆ ಕೂಗಿದ್ರು. ನಾನು ಸಹ ರಾಮನ ಭಕ್ತನೇ, ಇಲ್ಲಿ ಬೇಡ ಎಂದು ತಿಳಿಹೇಳಿದೆ. ಆದರೆ, ಅಲ್ಲಿ ಅವರು ಘರ್ಷಣೆಯನ್ನು ಮಾಡಿದ್ರು.

ಓದಿ:ವಿಧಾನಸಭೆಯಲ್ಲಿ ಸಿಡಿದ ಸಿಡಿ: ಆರು ಸಚಿವರ ವಿರುದ್ಧ ಸಿದ್ದು ಮಾತಿನ ಬಾಣ, ಕಂಗಾಲಾದ ಆಡಳಿತ ಪಕ್ಷ

ನಮ್ಮ ಮೇಲೆ ಜಾತಿ ನಿಂದನೆ ಕೇಸ್ ಹಾಕಿದ್ದಾರೆ ಎಂದು ಸಂಗಮೇಶ್ ಸದನದಲ್ಲಿ ಪ್ರಸ್ತಾಪ ಮಾಡಿದರು. ನಂತರ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ಈ ಬಗ್ಗೆ ಅಧಿಕಾರಿಗಳಿಂದ ಸಂಪೂರ್ಣ ವರದಿ ತರಿಸಿಕೊಂಡು ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.

ABOUT THE AUTHOR

...view details