ಕರ್ನಾಟಕ

karnataka

ETV Bharat / state

ಹೈಕಮಾಂಡ್ ಕಪಿಮುಷ್ಠಿಯಲ್ಲಿ ಆಳ್ವಿಕೆ ನಡೆಸಿದ್ದು ಮನಮೋಹನ್ ಸಿಂಗ್: ಸಿದ್ದರಾಮಯ್ಯಗೆ ರೇಣುಕಾಚಾರ್ಯ ಟಾಂಗ್

ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಸಿದ್ದರಾಮಯ್ಯ ಹೇಳಿಕೆ - ಪ್ರತಿಪಕ್ಷ ನಾಯಕನ ವಿರುದ್ಧ ಕಿಡಿಕಾರಿದ ರೇಣುಕಾಚಾರ್ಯ - ಕಾಂಗ್ರೆಸ್​​ನಲ್ಲಿ ದುರ್ಬಲ ನಾಯಕತ್ವ ಎಂದು ಟೀಕೆ

mla-renukacharya-slams-siddaramaiah
ಹೈಕಮಾಂಡ್ ಕಪಿಮುಷ್ಟಿಯಲ್ಲಿ ಆಳ್ವಿಕೆ ನಡೆಸಿದ್ದು ಮನಮೋಹನ್ ಸಿಂಗ್: ಸಿದ್ದರಾಮಯ್ಯಗೆ ರೇಣುಕಾಚಾರ್ಯ ಟಾಂಗ್

By

Published : Jan 4, 2023, 6:11 PM IST

ಹೈಕಮಾಂಡ್ ಕಪಿಮುಷ್ಟಿಯಲ್ಲಿ ಆಳ್ವಿಕೆ ನಡೆಸಿದ್ದು ಮನಮೋಹನ್ ಸಿಂಗ್: ಸಿದ್ದರಾಮಯ್ಯಗೆ ರೇಣುಕಾಚಾರ್ಯ ಟಾಂಗ್

ಬೆಂಗಳೂರು : ಹೈಕಮಾಂಡ್ ಕಪಿಮುಷ್ಠಿಯಲ್ಲಿ 10 ವರ್ಷಗಳ ಆಳ್ವಿಕೆ ನಡೆಸಿದ್ದು ಮನಮೋಹನ್ ಸಿಂಗ್. ನಾವಿಕನೇ ಇಲ್ಲದ ಪಕ್ಷದ ನಾಯಕರಾಗಿರುವ ನೀವು ನಮ್ಮ ಮುಖ್ಯಮಂತ್ರಿ ವಿರುದ್ಧ ನೀಡಿದ ಹೇಳಿಕೆ ನೀಡಿರುವುದು ನಿಮ್ಮ ಪಕ್ಷದ ಸಂಸ್ಕೃತಿ ತೋರಿಸುತ್ತದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಸಿಎಂ ರಾಜಕೀಯ ಕಾರ್ಯದರರ್ಶಿಯೂ ಆಗಿರುವ ಹೊನ್ನಾಳಿ ಶಾಸಕ ಎಂ.ಪಿ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.

ವಿಧಾನಸೌಧದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಒಂದು ಬಾರಿ ಮುಖ್ಯಮಂತ್ರಿ ಆಗಿದ್ದು, ಹಿರಿಯ ರಾಜಕಾರಣಿಯಾಗಿದ್ದಾರೆ. ಇವರು ಸಿಎಂ ಬಸವರಾಜ ಬೊಮ್ಮಾಯಿ ಹಾಗು ಪ್ರಧಾನಿ ಮೋದಿಯವರ ಕುರಿತು ಹಲವು ಬಾರಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮನಮೋಹನ್ ಸಿಂಗ್ 10 ವರ್ಷ ಪ್ರಧಾನಿ ಆಗಿದ್ದರು. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಕಂಡರೆ ಅವರು ಹೆದರುತ್ತಿದ್ದರು. ಮನಮೋಹನ್ ಸಿಂಗ್ ಹೈಕಮಾಂಡ್ ಕಪಿ ಮುಷ್ಠಿಯಲ್ಲಿದ್ದರು. ಮನಮೋಹನ್ ಸಿಂಗ್ ಅವರಿಗೆ ಅವಮಾನ ಮಾಡಿದ್ದು ನಿಮ್ಮ ಪಕ್ಷ. ನಿಮ್ಮ ಹಾಗೆ ಹೆದರಿ ಕುಳಿತಿರಲಿಲ್ಲ ಎಂದು ತಿರುಗೇಟು ನೀಡಿದರು.

ಕಾಂಗ್ರೆಸ್​ನಲ್ಲಿ ದುರ್ಬಲ ಹೈಕಮಾಂಡ್​ : ಕಾಂಗ್ರೆಸ್‌ನಲ್ಲಿ ದುರ್ಬಲ ಹೈಕಮಾಂಡ್ ಇದೆ. ನಿಮ್ಮ ಪಕ್ಷಕ್ಕೆ ನಾವಿಕನೇ ಇಲ್ಲ. ಸಿದ್ದರಾಮಯ್ಯ ಅವರೇ ನೀವು ಏನು ಬೇಕಾದರೂ ಹೇಳಿಕೆ ಕೊಡಿ. ಅದು ನಿಮ್ಮ ಸಂಸ್ಕೃತಿ ತೋರಿಸುತ್ತದೆ. ನಮ್ಮ ಮುಖ್ಯಮಂತ್ರಿ ವಿರುದ್ಧ ನಾಯಿ ಮರಿ ಎಂದು ಬಳಸುತ್ತೀರಾ. ನಿಮ್ಮ ಪಕ್ಷಕ್ಕೆ ದೇಶದಲ್ಲಿ, ರಾಜ್ಯದಲ್ಲಿಯೂ ನಾಯಕತ್ವ ಇಲ್ಲ. ಮತ್ತೊಮ್ಮೆ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದ್ದೀರಾ? ನಿಮ್ಮದು ಯಾವ ರೀತಿಯ ಸಂಸ್ಕೃತಿ ಎಂಬುದು ನಮಗೆ ಗೊತ್ತಿದೆ ಎಂದು ತಿರುಗೇಟು ನೀಡಿದರು.

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಚಿಲುಮೆ ಸಂಸ್ಥೆ ಬಗ್ಗೆ ಮಾತನಾಡುತ್ತಾರೆ. ಆದರೆ ಚಿಲುಮೆ ನಿಮ್ಮ ಕಾಲದ ಸಂಸ್ಥೆ. ಕಾಂಗ್ರೆಸ್‌ಗೆ ಅಧಿಕಾರ ಕೊಟ್ಟರೆ ರಾಜ್ಯ ರೌಡಿಗಳ ರಾಜ್ಯ ಆಗಲಿದೆ. ಬಿಜೆಪಿ ಸನಾತನ ಹಿಂದುತ್ವವನ್ನು ಅಳವಡಿಸಿಕೊಂಡಿದೆ. ನೀವು ಒಂದು ಕಡೆ ರೌಡಿಗಳ ರೀತಿ ಆಡುತ್ತೀರಿ, ಜೊತೆಗೆ ಭಯೋತ್ಪಾದನೆಯನ್ನು ಬೆಂಬಲಿಸುತ್ತೀರಿ. ಇದು ಇದು ನಿಮ್ಮ ಘನತೆಗೆ ಶೋಭೆ ತರಲ್ಲ ಎಂದು ರೇಣುಕಾಚಾರ್ಯ ಹರಿಹಾಯ್ದರು.

ನಳಿನ್​ ಕುಮಾರ್​ ಹೇಳಿಕೆ ಸಮರ್ಥಿಸಿಕೊಂಡ ರೇಣುಕಾಚಾರ್ಯ: ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡ ಶಾಸಕ ರೇಣುಕಾಚಾರ್ಯ, ಹೌದು ಲವ್ ಜಿಹಾದ್ ನಮ್ಮ ಅಜೆಂಡಾ. ಕೇಂದ್ರ ಸರ್ಕಾರ ತ್ರಿವಳಿ ತಲಾಖ್​ ವಿಚಾರವಾಗಿ ಮುಸ್ಲಿಂ ಹೆಣ್ಣು ಮಕ್ಕಳಿಗೆ ನ್ಯಾಯ ಸಿಗುವಂತೆ ಮಾಡಿದೆ. ತ್ರಿವಳಿ ತಲಾಖ್​ ನಿಂದ ಮುಸ್ಲಿಂ ಹೆಣ್ಣು ಮಕ್ಕಳಿಗೆ ಅವಮಾನ ಆಗುತ್ತಿತ್ತು. ಮೂರು ಬಾರಿ ತಲಾಖ್​ ಹೇಳಿದ್ರೆ ಆ ಮಹಿಳೆಯರ ಭವಿಷ್ಯ ಮುಗಿದು ಹೋಗುತ್ತಿತ್ತು. ನಿಮ್ಮ ಮನೆಯಲ್ಲಿ ಹೆಣ್ಣು ಮಕ್ಕಳನ್ನು ಯಾವ ತರ ಗೌರವಿಸುತ್ತೀರೋ, ಅದೇ ರೀತಿ ದೇಶದಲ್ಲಿ, ರಾಜ್ಯದಲ್ಲಿ ಮಹಿಳೆಯರನ್ನು ಗೌರವಿಸಿದ ಪಕ್ಷ ಬಿಜೆಪಿ. ಮಹಿಳೆಯರಿಗೆ ನ್ಯಾಯ ಸಿಗಬೇಕು. ಪಕ್ಷದ ಅಜೆಂಡಾ ಬಗ್ಗೆ ರಾಜ್ಯಾಧ್ಯಕ್ಷರು ಸರಿಯಾಗಿ ಹೇಳಿದ್ದಾರೆ. ಲವ್ ಜಿಹಾದ್‌ನಿಂದ ನಮ್ಮ ಹೆಣ್ಣು ಮಕ್ಕಳು ಹೊರಗೆ ಬರಬೇಕು ಎಂದರು.

ಜೊತೆಗೆ ಸರ್ಕಾರ ಅಭಿವೃದ್ಧಿ ಮಾಡುತ್ತಿದೆ. ಅದಕ್ಕೆ ಪೂರಕವಾಗಿ ಹಣ ಬಿಡುಗಡೆ ಮಾಡುತ್ತಿದೆ. ನೀರಾವರಿ, ಆರೋಗ್ಯ ಎಲ್ಲ ವಿಚಾರವಾಗಿ ಅಭಿವೃದ್ಧಿ ಕೆಲಸ ಆಗುತ್ತಿದೆ. ಲವ್ ಜಿಹಾದ್‌ನಿಂದ ನಮ್ಮ ಹಿಂದು ಹೆಣ್ಣು ಮಕ್ಕಳು ಹಾಳಾಗಬಾರದು.? ಅದಕ್ಕೆ ಅವಕಾಶ ಕೊಡಲ್ಲ ಎಂದು ರೇಣುಕಾಚಾರ್ಯ ಹೇಳಿದರು.

ಇದನ್ನೂ ಓದಿ :ನಾಯಿ ನಿಯತ್ತಿನ ಪ್ರಾಣಿ, ನಾನು ಜನರಿಗೆ ನಿಯತ್ತಿನಿಂದ ಕೆಲಸ ಮಾಡುತ್ತಿರುವೆ: ಸಿದ್ದರಾಮಯ್ಯಗೆ ಸಿಎಂ ತಿರುಗೇಟು

ABOUT THE AUTHOR

...view details