ಕರ್ನಾಟಕ

karnataka

ETV Bharat / state

ರಾಜ್ಯಕ್ಕೆ ಯಾರೇ ಸಚಿವರಾದರೂ ಜನರಿಗೆ ಪ್ರಯೋಜನವಿಲ್ಲ: ರಾಮಲಿಂಗಾರೆಡ್ಡಿ - ಕೆ.ಆರ್.ಪುರ ಸುದ್ದಿ

ಅಧಿಕಾರಕ್ಕಾಗಿ ಬಣ್ಣಬಣ್ಣದ ಮಾತುಗಳು ಆಡಿ ಅಧಿಕಾರ ಬಂದ ನಂತರ ಜನರ ಬಗ್ಗೆ ಕಾಳಜಿ ಇಲ್ಲ. ಸರ್ಕಾರ ಎರಡನೇ ಅಲೆ ನಿಭಾಯಿಸುವಲ್ಲಿ ವಿಫಲವಾಗಿರುವುದನ್ನು ಕಂಡಿದ್ದೇವೆ‌. ಈ ಸಾವುನೋವುಗಳಿಗೆ ಸರ್ಕಾರ ನೇರ ಹೊಣೆಯಾಗಿದೆ ಎಂದು ಶಾಸಕ ರಾಮಲಿಂಗಾರೆಡ್ಡಿ ಹೇಳಿದರು.

ramalinga-reddy
ಶಾಸಕ ರಾಮಲಿಂಗಾರೆಡ್ಡಿ

By

Published : Aug 5, 2021, 9:09 AM IST

ಕೆ.ಆರ್.ಪುರ:ಬಿಜೆಪಿ ಪಕ್ಷ ಕೊರೊನಾ ಮೂರನೇ ಅಲೆಯ ಬಗ್ಗೆ ಎಚ್ಚರವಿಲ್ಲದೆ ಅಧಿಕಾರಕ್ಕಾಗಿ ಕಿತ್ತಾಟ ನಡೆಸಿದೆ. ರಾಜ್ಯಕ್ಕೆ ಯಾರೇ ಸಚಿವರಾದರೂ ಜನರಿಗೆ ಪ್ರಯೋಜನವಿಲ್ಲ ಎಂದು ಶಾಸಕ ರಾಮಲಿಂಗಾರೆಡ್ಡಿ ಹೇಳಿದರು.

ಶಾಸಕ ರಾಮಲಿಂಗಾರೆಡ್ಡಿ

ಕೆ.ಆರ್ ಪುರದ ರಾಮಮೂರ್ತಿ ನಗರದಲ್ಲಿ ಬ್ಲಾಕ್ ಕಾಂಗ್ರೆಸ್ ಪಕ್ಷದ ವತಿಯಿಂದ ವಾರ್ಡ್ ಅಧ್ಯಕ್ಷ ಕಲ್ಕೆರೆ ಸುನಿಲ್ ಕುಮಾರ್ ಅವರ ನೇತೃತ್ವದಲ್ಲಿ ಅಭಯಹಸ್ತ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ರಾಮಮೂರ್ತಿನಗರ ವ್ಯಾಪ್ತಿಯಲ್ಲಿ ಕೊರೊನಾದಿಂದ ತೊಂದರೆಯಲ್ಲಿರುವ 500ಕ್ಕೂ ಬಡಜನರಿಗೆ ಆಹಾರ ಧಾನ್ಯಗಳ ಕಿಟ್ ಹಾಗೂ 50 ಆಟೋ ಚಾಲಕರಿಗೆ ಸಮವಸ್ತ್ರ, 20 ಕ್ಕೂ ಹೆಚ್ಚು ಮಡಿವಾಳ ಸಮಾಜದವರಿಗೆ ಇಸ್ತ್ರಿ ಪೆಟ್ಟಿಗೆಗಳನ್ನು ವಿತರಿಸಲಾಯಿತು.

ನಂತರ ಮಾತನಾಡಿದ ಅವರು, ಅಧಿಕಾರಕ್ಕಾಗಿ ಬಣ್ಣಬಣ್ಣದ ಮಾತುಗಳು ಆಡಿ ಅಧಿಕಾರ ಬಂದ ನಂತರ ಜನರ ಬಗ್ಗೆ ಕಾಳಜಿ ಇಲ್ಲ. ಸರ್ಕಾರ ಎರಡನೇ ಅಲೆ ನಿಭಾಯಿಸುವಲ್ಲಿ ವಿಫಲವಾಗಿರುವುದನ್ನು ಕಂಡಿದ್ದೇವೆ‌. ಈ ಸಾವುನೋವುಗಳಿಗೆ ಸರ್ಕಾರ ನೇರ ಹೊಣೆಯಾಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ಕೊರೊನಾ ನಿಯಂತ್ರಿಸಲು ಸಂಪೂರ್ಣ ವಿಫಲವಾಗಿದೆ ಎಂದರು.

ಸಂಪುಟ ವಿಸ್ತರಣೆ ಮಾಡುವಲ್ಲಿ ಕಾಲಹರಣ ಮಾಡುತ್ತಿದ್ದಾರೆ. ಸಚಿವ‌ ಸಂಪುಟ ರಚನೆ‌ ಆದರೂ ಸಹ ಖಾತೆಗಾಗಿ ಬಡೆದಾಡಿಕೊಳ್ಳುತ್ತಿದ್ದಾರೆ. ಜನರ ಸಮಸ್ಯೆ ‌ಬಗ್ಗೆ ಬಿಜೆಪಿಗೆ ಯೋಚನೆ ಇಲ್ಲ. ಒಂದು ಕಡೆ ಜನ ಪ್ರವಾಹದಿಂದ ತತ್ತರಿಸಿದ್ದಾರೆ. ಮತ್ತೊಂದು ಕಡೆ ಕೊರೊನಾ ಮೂರನೆ ಅಲೆ ಬರುತ್ತಿದೆ. ಆದರೆ ಇದಾವವುದಕ್ಕೂ ಈ ಸರ್ಕಾರ ತಲೆಕೊಡಿಸಿಕೊಂಡಿಲ್ಲ ಎಂದರು.

ABOUT THE AUTHOR

...view details