ಬೆಂಗಳೂರು: ಮೀಸಲಾತಿ ಹೆಚ್ಚಿಸಿರುವುದರಲ್ಲಿ ಕಾಂಗ್ರೆಸ್ ಪಾತ್ರ ಏನಿಲ್ಲ. ಅದರ ಕ್ರೆಡಿಟ್ ಬಿಜೆಪಿ ಸರ್ಕಾರಕ್ಕೆ ಸೇರುತ್ತದೆ ಎಂದು ಶಾಸಕ ರಾಜೂ ಗೌಡ ತಿಳಿಸಿದರು.
ವಿಧಾನಸೌಧದಲ್ಲಿ ಮೀಸಲಾತಿ ಕ್ರೆಡಿಟ್ ವಾರ್ ವಿಚಾರವಾಗಿ ಮಾತನಾಡಿದ ಅವರು, ಮೀಸಲಾತಿ ಹೆಚ್ಚಳ ಯಾರ ಕಾಲದಲ್ಲಿ ಆಗಿದೆ, ಯಾರು ಮಾಡಿದ್ದಾರೆ ಎಂದು ಎಲ್ಲರಿಗೂ ಗೊತ್ತು. ಕಾಂಗ್ರೆಸ್ ನವರಿಗೆ ನೇರ ಪ್ರಶ್ನೆ ಮಾಡುತ್ತೇನೆ. ನಾಯಕ ಜನಾಂಗದವರನ್ನ ಯಾರು ಎಸ್ಟಿಗೆ ಸೇರಿಸಿದ್ರು. STಗೆ ಸೇರಿಸುವಲ್ಲೂ ಅವರ ಪಾತ್ರ ಇಲ್ಲ, ಮೀಸಲಾತಿ ಹೆಚ್ಚಳದಲ್ಲೂ ಅವರ ಪಾತ್ರ ಇಲ್ಲ. ನಾಗಮೋಹನ್ ವರದಿ ಮೇರೆಗೆ ಮೀಸಲಾತಿ ಕೊಟ್ಟಿದ್ದಾರೆ ಬೊಮ್ಮಾಯಿ ಅವರು. ಏನೂ ಇಲ್ಲದೇ ಕ್ರೆಡಿಟ್ ತೆಗೆದುಕೊಳ್ಳಲು ಹೊಗೋದ್ರಲ್ಲಿ ಏನಿದೆ ಎಂದರು.
ಕಾಂಗ್ರೆಸ್ ಸಲಹೆ ತೆಗೆದುಕೊಂಡ ನಂತರವೇ ಈ ಮೀಸಲಾತಿ ಹೆಚ್ಚಳ ಮಾಡಿದ್ದೇವೆ. ಸರ್ವಪಕ್ಷಗಳ ಸಭೆಯಲ್ಲಿ ಸತೀಶ್ ಜಾರಕಿಹೊಳಿ ಒಳ್ಳೆಯ ಕೆಲಸ ಮಾಡಿದ್ದಿರಾ? ಅಂತ ಹೇಳಿದ್ರೆ, ನಂತರ ಹೊರಗಡೆ ಬಂದು ಜನರಿಗೆ ಮುಖ ತೋರಿಸಲು ಆಗದೇ, ಟೀಕಿಸಿ ಮಾತನಾಡಿದ್ರೆ ಹೇಗೆ?. ರಾಜಕೀಯ ಚಪಲಕ್ಕಾಗಿ ಮಾತನಾಡಬಾರದು ಎಂದು ತಿರುಗೇಟು ನೀಡಿದರು.
ಶಾಸಕ ರಾಜೂ ಗೌಡ ಅವರು ಮಾತನಾಡಿದರು ಮೀಸಲಾತಿಯಲ್ಲಿ ಜಾತಿಗಳನ್ನು ಹೆಚ್ಚಿಸುತ್ತಾ ಹೋದ್ರು, ಹೊರತು ಮೀಸಲಾತಿ ಹೆಚ್ಚಳ ಮಾಡಲಿಲ್ಲ. ನಾವು ಎಂತಹ ಸಮಾಜದಿಂದ ಬಂದವರು ಎಂದರೆ ದ್ರೋಣಾಚಾರ್ಯ ವಿದ್ಯೆ ಕಲಿಸದೇ ಹೆಬ್ಬೆರಳು ಕೊಟ್ಟವರು. ಅಂತಹದರಲ್ಲಿ ಈ ಮೀಸಲಾತಿ ಕೊಟ್ಟವರಿಗೆ ನಾವು ಕ್ರೆಡಿಟ್ ಕೊಡಬಾರದಾ?.
ನಾನು ರಾಮುಲಣ್ಣ ಅಣ್ಣತಮ್ಮಂದಿರು:ನಾವು ಕ್ರೆಡಿಟ್ ತೆಗೆದುಕೊಳ್ಳಲು ಯಾವುದೇ ಪ್ರಯತ್ನ ಮಾಡುತ್ತಿಲ್ಲ. ನಾನು ರಾಮುಲು ಅಣ್ಣ ತಮ್ಮಂದಿರು. ನನ್ನ ಮತ್ತು ರಾಮುಲು ಅಣ್ಣನ ನಡುವೆ ಭಿನ್ನಾಭಿಪ್ರಾಯ ಇದ್ದಿದ್ದು ನಿಜ. ಕೆಲವೊಂದು ಬಾರಿ ಭಿನ್ನಾಭಿಪ್ರಾಯ ಬಂದಿರುವುದು ನಿಜ. ಅದು ಸರಿಹೋಗಿದೆ. ಇಲ್ಲಿ ಹೊಗಳಿ ಬೆನ್ನಿಗೆ ಹಿಂದೆ ಚೂರಿ ಹಾಕುವ ಕೆಲಸ ನಾನು ಮಾಡುವುದಿಲ್ಲ ಎಂದರು.
ನಮ್ಮ ನಡುವೆ ವಿಡಿಯೋ ಎಡಿಟ್ ಮಾಡಿ ತಂದು ಹಾಕುವ ಕೆಲಸ ಮಾಡಿದ್ರು. ನಾನು ಸ್ವಾಮೀಜಿ ಅವರ ಹೋರಾಟ ಓಪನ್ ಆಗಿ ಸಪೋರ್ಟ್ ಮಾಡಿದ್ದೇವೆ. ಬೇರೆಯವರ ಬಗ್ಗೆ ನಾನು ಮಾತನಾಡುವುದಿಲ್ಲ. ಅವರು ಈ ವಿಚಾರವಾಗಿ ರಾಜೀನಾಮೆ ಕೇಳಿದ್ರು ಕೋಡುತ್ತಿದ್ವಿ. ಎಲ್ಲ ಸ್ವಾಮೀಜಿ, ಬೊಮ್ಮಾಯಿ ಮತ್ತು ನಮ್ಮ ಸಮಾಜಕ್ಕೆ ಕ್ರೆಡಿಟ್ ಬರುತ್ತದೆ. ನಾಗಮೋಹನ್ ದಾಸ್ ಅವರು ಕೂಡ ಫೋನ್ ಮಾಡಿ ಒಳ್ಳೆಯ ಕೆಲಸ ಮಾಡಿದ್ರಿ ಎಂದು ಹೇಳಿದ್ದಾರೆ ಎಂದು ಹೇಳಿದರು.
ಓದಿ:ದಲಿತ ಕುಟುಂಬದ ಮೇಲೆ ದೌರ್ಜನ್ಯ ಪ್ರಕರಣ: ಕುಟುಂಬಸ್ಥರಿಗೆ ರಾಹುಲ್ ಗಾಂಧಿ ಸಾಂತ್ವನ