ಕರ್ನಾಟಕ

karnataka

ETV Bharat / state

ಶಾಸಕ ಪ್ರೀತಂ ಗೌಡರಿಗೆ ಸಿಎಂ ಬಸವರಾಜ ಬೊಮ್ಮಾಯಿ ಬುದ್ಧಿವಾದ.!? - MLA Preetham Gowda meets CM Basavaraja Bommai in Vidhanasoudha

ಸಚಿವ ಆರ್​.ಅಶೋಕ್ ಮುಂದೆ ಖಾರವಾಗಿ ಮಾತನಾಡಿರುವ ಸಿಎಂ ಬೊಮ್ಮಾಯಿ, ಮಾಜಿ ಪ್ರಧಾನಿ ಎಂಬ ಕಾರಣಕ್ಕೆ ದೇವೇಗೌಡರನ್ನು ಭೇಟಿಯಾಗಿದ್ದು, ಅದನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ಅಪಾರ್ಥ ಕಲ್ಪಿಸುವುದು ಸರಿಯಲ್ಲ ಎಂದು ಶಾಸಕ ಪ್ರೀತಂಗೌಡ ಅವರಿಗೆ ಬುದ್ಧಿವಾದ ಹೇಳಿದ್ದಾರೆ ಎನ್ನಲಾಗ್ತಿದೆ.

MLA Preetham Gowda meets CM Basavaraja Bommai
ಶಾಸಕ ಪ್ರೀತಂಗೌಡರಿಗೆ ಸಿಎಂ ಬಸವರಾಜ ಬೊಮ್ಮಾಯಿ ಬುದ್ಧಿವಾದ

By

Published : Aug 10, 2021, 5:55 PM IST

Updated : Aug 10, 2021, 6:41 PM IST

ಬೆಂಗಳೂರು:ವಿಧಾನಸೌಧದ ಸಿಎಂ ಕಚೇರಿಯಲ್ಲಿ ಇಂದು ತನ್ನನ್ನು ಭೇಟಿ ಮಾಡಿದ ಶಾಸಕ ಪ್ರೀತಂ ಗೌಡ ಅವರಿಗೆ ಸಿಎಂ ಬಸವರಾಜ ಬೊಮ್ಮಾಯಿ ಬುದ್ಧಿವಾದ ಹೇಳಿದ್ದಾರೆ ಎಂದು ಹೇಳಲಾಗ್ತಿದೆ.

ಸಿಎಂ ಬಸವರಾಜ ಬೊಮ್ಮಾಯಿ ಭೇಟಿಯಾದ ಶಾಸಕ ಪ್ರೀತಂ ಗೌಡ

ಸಚಿವ ಆರ್.ಅಶೋಕ್ ಸಲಹೆಯಂತೆ ಇಂದು ವಿಧಾನಸೌಧಕ್ಕೆ ಆಗಮಿಸಿದ ಶಾಸಕ ಪ್ರೀತಂಗೌಡ, ಸಿಎಂ ಕಚೇರಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಕೆಲಹೊತ್ತು ಚರ್ಚೆ ನಡೆಸಿದರು.

ಸಚಿವ ಆರ್​.ಅಶೋಕ್ ಮುಂದೆ ಖಾರವಾಗಿ ಮಾತನಾಡಿರುವ ಸಿಎಂ, ಮಾಜಿ ಪ್ರಧಾನಿ ಎಂಬ ಕಾರಣಕ್ಕೆ ದೇವೇಗೌಡರನ್ನು ಭೇಟಿಯಾಗಿದ್ದು, ಅದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಅಪಾರ್ಥ ಕಲ್ಪಿಸುವುದು ಸರಿಯಲ್ಲ.‌ ನನ್ನ ನಡೆ ಬಗ್ಗೆಯೇ ಅನುಮಾನ ಪಡುತ್ತೀರಾ? ನಿಮಗೆ ಅನುಮಾನಗಳಿದ್ದರೆ ನೇರವಾಗಿ ನನ್ನ ಬಳಿಗೆ ಬನ್ನಿ. ಮೊದಲು ಮಾಧ್ಯಮಗಳ ಮುಂದೆ ಹೋಗುವುದನ್ನು ನಿಲ್ಲಿಸಿ, ದೇವೇಗೌಡರ ಬಗ್ಗೆ ಗೊಂದಲ ಮೂಡಿಸಬೇಡಿ ಎಂದು ಹೇಳಿದ್ದಾರೆ ಎನ್ನಲಾಗ್ತಿದೆ.

ನೀವು ಇನ್ನೂ ಮೊದಲ ಬಾರಿ ಶಾಸಕರಾಗಿದ್ದೀರಿ. ನಿಮ್ಮ ಮುಂದಿನ ರಾಜಕೀಯ ಭವಿಷ್ಯದ ಬಗ್ಗೆ ಯೋಚಿಸಿ. ನಿಮ್ಮ ಕ್ಷೇತ್ರದಲ್ಲಿ ಸಮಸ್ಯೆಗಳಿದ್ದರೆ ನನ್ನ ಬಳಿ ತನ್ನಿ. ಕ್ಷೇತ್ರದ ಕೆಲಸಗಳನ್ನ ಮಾಡಿಕೊಡೋಣ. ಇನ್ಮುಂದೆ ಈ ರೀತಿ ಮಾತುಗಳನ್ನು ಆಡಬೇಡಿ ಎಂದು ಪ್ರೀತಂ ಗೌಡ ಅವರಿಗೆ ಸಿಎಂ ಬೊಮ್ಮಾಯಿ ಕಿವಿಮಾತು ಹೇಳಿದ್ದಾರೆ ಎಂದು ತಿಳಿದು ಬಂದಿದೆ.

ಓದಿ:ನಾವು JDS ಜೊತೆ ಗುದ್ದಾಡಿ ಪಕ್ಷ ಕಟ್ಟೋದು, ಇನ್ನೊಬ್ರು ಅಡ್ಜಸ್ಟ್​ಮೆಂಟ್​ ರಾಜಕಾರಣ ಮಾಡೋದಾ..ಸಿಎಂ ವಿರುದ್ಧ ಶಾಸಕ ಪ್ರೀತಂ ಗೌಡ ಕೆಂಡ!!

Last Updated : Aug 10, 2021, 6:41 PM IST

For All Latest Updates

TAGGED:

ABOUT THE AUTHOR

...view details