ಮುದ್ದೇಬಿಹಾಳ (ವಿಜಯಪುರ): ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಬಿ ಎಸ್ ಯಡಿಯೂರಪ್ಪನವರನ್ನು ಮುದ್ದೇಬಿಹಾಳ ಮತಕ್ಷೇತ್ರದ ಶಾಸಕ ಎ ಎಸ್ ಪಾಟೀಲ್ ನಡಹಳ್ಳಿ ಇಂದು ಬೆಂಗಳೂರಿನಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು.
ಹಂಗಾಮಿ ಸಿಎಂ ಬಿಎಸ್ವೈ ಭೇಟಿಯಾದ ಶಾಸಕ ನಡಹಳ್ಳಿ - ಸಚಿವ ಸ್ಥಾನಕ್ಕೆ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಹೆಸರು
ಜಿಲ್ಲೆಯಲ್ಲಿ ಮೂವರು ಶಾಸಕರಿದ್ದು, ಅದರಲ್ಲಿ ಬಸನಗೌಡ ಪಾಟೀಲ ಯತ್ನಾಳ್ ಬಿಟ್ಟರೆ ಬಿಜೆಪಿಯಲ್ಲಿ ಉನ್ನತಮಟ್ಟದ ಸಂಪರ್ಕ, ಪ್ರಭಾವ ಇಟ್ಟುಕೊಂಡಿರುವವರಲ್ಲಿ ನಡಹಳ್ಳಿ ಕೂಡ ಒಬ್ಬರಾಗಿದ್ದಾರೆ. ಮುಂಬರುವ ಮಂತ್ರಿ ಮಂಡಲದಲ್ಲಿ ಸಚಿವ ಸ್ಥಾನಕ್ಕೆ ಅವರನ್ನು ಪರಿಗಣಿಸಿದರೂ ಅಚ್ಚರಿಯಿಲ್ಲ..
ಪ್ರಸಕ್ತ ರಾಜ್ಯ ರಾಜಕೀಯದಲ್ಲಿ ನಡೆದಿರುವ ಬೆಳವಣಿಗೆ ಬಗ್ಗೆ ಇನ್ನಿತರ ನಾಯಕರೊಂದಿಗೆ ಶಾಸಕ ನಡಹಳ್ಳಿ ಕೂಡ ಹಂಗಾಮಿ ಸಿಎಂ ಆಗಿರುವ ಯಡಿಯೂರಪ್ಪನವರ ಜೊತೆಗೆ ಚರ್ಚೆ ನಡೆಸಿದ್ದಾರೆ.
ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಅವರ ಹೆಸರು ಕೂಡ ಸಚಿವ ಸ್ಥಾನಕ್ಕೆ ಕೇಳಿ ಬಂದಿದೆ. ವಿಜಯಪುರ ಜಿಲ್ಲೆಯಲ್ಲಿ ಮೂವರು ಶಾಸಕರಿದ್ದು, ಅದರಲ್ಲಿ ಬಸನಗೌಡ ಪಾಟೀಲ ಯತ್ನಾಳ್ ಬಿಟ್ಟರೆ ಬಿಜೆಪಿಯಲ್ಲಿ ಉನ್ನತಮಟ್ಟದ ಸಂಪರ್ಕ, ಪ್ರಭಾವ ಇಟ್ಟುಕೊಂಡಿರುವವರಲ್ಲಿ ನಡಹಳ್ಳಿ ಕೂಡ ಒಬ್ಬರಾಗಿದ್ದಾರೆ. ಮುಂಬರುವ ಮಂತ್ರಿ ಮಂಡಲದಲ್ಲಿ ಸಚಿವ ಸ್ಥಾನಕ್ಕೆ ಅವರನ್ನು ಪರಿಗಣಿಸಿದರೂ ಅಚ್ಚರಿಯಿಲ್ಲ ಎಂಬ ಮಾತು ಕೇಳಿ ಬಂದಿವೆ.