ಬೆಂಗಳೂರು:ದಿ.ನಟ ಪುನೀತ್ ರಾಜ್ಕುಮಾರ್ ಮನೆಗೆ ಶಾಸಕ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ಪತ್ನಿ ಹಾಗೂ ಮಕ್ಕಳ ಜೊತೆ ಭೇಟಿ ನೀಡಿ ಅಪ್ಪು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಬಳಿಕ ಮಾತನಾಡಿದ ಅವರು, ಡಾ.ರಾಜ್ಕುಮಾರ್ ಅವರಿಗೆ 'ಭಾರತ ರತ್ನ' ಹಾಗೂ ಅವರ ಮಗ ಪುನೀತ್ ರಾಜ್ಕುಮಾರ್ ಅವರಿಗೆ 'ಪದ್ಮಶ್ರೀ' ಪುರಸ್ಕಾರ ನೀಡುವಂತೆ ಪ್ರಧಾನಿಗೆ ಪತ್ರದ ಮುಖೇನ ಮನವಿ ಮಾಡಲಾಗುವುದು ಎಂದರು.
ಪುನೀತ್ ನೋಡಿಕೊಳ್ಳುತ್ತಿದ್ದ ಅನಾಥಮಕ್ಕಳ 'ಶಕ್ತಿಧಾಮ' ಸಂಸ್ಥೆಗೆ ಪ್ರತಿವರ್ಷ ಕೈಲಾದ ಸಹಾಯ ಮಾಡುತ್ತೇನೆ. ಇತರ ರಾಜಕೀಯ ವ್ಯಕ್ತಿಗಳೂ ನೆರವಾಗಬೇಕೆಂದು ಮನವಿ ಮಾಡುತ್ತೇನೆ. ಅವರ ಒಳ್ಳೆಯ ಕೆಲಸಕ್ಕೆ ಕೈಜೋಡಿಸುತ್ತೇನೆ. ಅವರು ಯಾವುದೇ ನೆರವು ಕೇಳಲಿಲ್ಲ. ಆದರೂ ಅವರ ಕೆಲಸ ನಮಗೆ ಸ್ಫೂರ್ತಿ ಎಂದರು.
ನಾಳೆ ಸಂಜೆ ಹೊನ್ನಾಳಿಯಲ್ಲಿ ಪುನೀತ್ ಅವರಿಗೆ ನುಡಿನಮನ ಹಾಗೂ ಹಾಡಿನ ಕಾರ್ಯಕ್ರಮ ಆಯೋಜಿಸಲಾಗಿದೆ. ಅಲ್ಲಿ ನೇತ್ರದಾನದ ಬಗ್ಗೆ ಅರಿವು ಮೂಡಿಸಲಾಗುವುದು, ನೇತ್ರದಾನಕ್ಕೆ ಜನರಿಂದ ಜಾಗೃತಿ ಅಭಿಯಾನ ಮಾಡಿಸಲಾಗುವುದು ಎಂದರು. ಈ ಹಿಂದೆಯೇ ಹೊನ್ನಾಳಿಗೆ ಪುನೀತ್ ಅವರನ್ನು ಕರೆಸುತ್ತೇನೆ ಎಂದು ಜನರಿಗೆ ಆಶ್ವಾಸನೆ ನೀಡಿದ್ದೆ. ಆದರೆ ಈಗ ಸಾಧ್ಯವಾಗುತ್ತಿಲ್ಲ. ಹೀಗಾಗಿ ನುಡಿನಮನ ಕಾರ್ಯಕ್ರಮ ಏರ್ಪಡಿಸಲಾಗುವುದು ಎಂದರು.
ಸಚಿವ ಅನುರಾಗ್ ಠಾಕೂರ್ ಅವರಿಗೆ ಶಾಸಕ ರೇಣುಕಾಚಾರ್ಯ ಪತ್ರ ಇದನ್ನೂ ಓದಿ:ಪುನೀತ್ ಸರ್ಗೆ ಶೀಘ್ರ ಮರಣೋತ್ತರ ಪದ್ಮಶ್ರೀ ಪ್ರಶಸ್ತಿ ಕೊಡಲಿ: ನಟ ಪ್ರೇಮ್