ಕರ್ನಾಟಕ

karnataka

ETV Bharat / state

ಇಂದು ಯಡಿಯೂರಪ್ಪಾಜಿ ಜೊತೆ ನನ್ನ ಪಯಣದ ಅತ್ಯಂತ ಬೇಸರದ ದಿನ: ರೇಣುಕಾಚಾರ್ಯ - ಬಿಎಸ್​ವೈ ಬಗ್ಗೆ ಭಾವನಾತ್ಮಕ ಟ್ವೀಟ್ ಮಾಡಿದ ರೇಣುಕಾಚಾರ್ಯ

ಯಡಿಯೂರಪ್ಪ ಜೊತೆಗಿನ ಹಳೆಯ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ರೇಣುಕಾಚಾರ್ಯ ತಮ್ಮ ದುಃಖವನ್ನು ಟ್ವೀಟ್ ಮೂಲಕ ವ್ಯಕ್ತಪಡಿಸಿದ್ದಾರೆ.

ರೇಣುಕಾಚಾರ್ಯ ಭಾವನಾತ್ಮಕ ಟ್ವೀಟ್
ರೇಣುಕಾಚಾರ್ಯ ಭಾವನಾತ್ಮಕ ಟ್ವೀಟ್

By

Published : Jul 26, 2021, 8:55 PM IST

ಬೆಂಗಳೂರು: ನಾಯಕತ್ವ ಬದಲಾವಣೆ ಕುರಿತು ಹೇಳಿಕೆ ನೀಡುತ್ತಿದ್ದವರ ವಿರುದ್ಧ ಕೆಂಡಕಾರುತ್ತಿದ್ದ ಶಾಸಕ ರೇಣುಕಾಚಾರ್ಯ ಇಂದು ಅದೇ ಸನ್ನಿವೇಶವನ್ನು ನೋಡಿ ದುಃಖಿಸಬೇಕಾಯುತು.

ನನ್ನ ರಾಜಕೀಯ ಜೀವನದಲ್ಲಿ ಇದು ಅತ್ಯಂತ ಬೇಸರದ ದಿನವಾಗಿದೆ ಎಂದು ಭಾವನಾತ್ಮಕವಾಗಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು, ವಿಧಾನಸೌಧದಿಂದ ರಾಜಭವನದವರೆಗೂ ಯಡಿಯೂರಪ್ಪ ಜೊತೆಯಲ್ಲಿಯೇ ಇದ್ದು, ನಾಯಕನ ಪರ ನಿಷ್ಠೆ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡುತ್ತಿದ್ದಂತೆ 'ಬಿಎಸ್​​ವೈ ಮಾನಸಪುತ್ರ' ಎಂದೇ ಕರೆಸಿಕೊಳ್ಳುವ ಶಾಸಕ ಎಂ.ಪಿ ರೇಣುಕಾಚಾರ್ಯ ಭಾವನಾತ್ಮಕವಾಗಿ ಟ್ವೀಟ್ ಮಾಡಿದ್ದಾರೆ. ಈ ಮೂಲಕ ಮನದಾಳದ ಬೇಸರವನ್ನು ಸಾಮಾಜಿಕ ಜಾಲತಾಣದ ಮೂಲಕ ವ್ಯಕ್ತಪಡಿಸಿದ್ದಾರೆ.

ದಶಕಗಳ ನಿಮ್ಮ(BSY)ಸಂಘಟನೆ ಮತ್ತು ರಾಜಕೀಯ ಸೇವೆ ಲಕ್ಷಾಂತರ ಕಾರ್ಯಕರ್ತರು ಮತ್ತು ಅನೇಕ ನಾಯಕರನ್ನು ಸೃಷ್ಟಿಸಿದೆ. ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ನಿಮ್ಮ ಕೊಡುಗೆ ಅಪಾರ. ಮುಂದೆಯೂ ನಿಮ್ಮ ಮಾರ್ಗದರ್ಶನ ನಮಗೆಲ್ಲರಿಗೂ ಇರಲೇಬೇಕು. ನನ್ನ ರಾಜಕೀಯ ಜೀವನದ ಆದಿಯಿಂದ ಇಂದಿನವರೆಗೆ ಯಡಿಯೂರಪ್ಪಾಜಿ ಜೊತೆಯ ನನ್ನ ಪಯಣದ ಅತ್ಯಂತ ಬೇಸರದ ದಿನ ಇಂದು ಎಂದು ರೇಣುಕಾಚಾರ್ಯ ತಿಳಿಸಿದ್ದಾರೆ.

ಇದನ್ನೂ ಓದಿ : 2 ವರ್ಷ ಅಧಿಕಾರ ಸಿಕ್ಕರೂ ಅಡಿಗಡಿಗೂ ಅಡ್ಡಿಗಳು.. ಅಗ್ನಿ'ಪಥ'ದೊಳಗೂ ಅರಳಿದ ಆಶಾವಾದಿ 'ಶಿಕಾರಿ'ಯೂರಪ್ವ..

ಯಡಿಯೂರಪ್ಪ ಬಿಜೆಪಿ‌ ತೊರೆದು ಕೆಜೆಪಿ ಪಕ್ಷ ಕಟ್ಟಿದಾಗ ಬಿಎಸ್​​ವೈ ನಂಬಿ ಅವರ ಹಿಂದೆ ಹೋದವರಲ್ಲಿ ರೇಣುಕಾಚಾರ್ಯ ಕೂಡ ಒಬ್ಬರು. ಕೆಜೆಪಿಯಿಂದ ಸ್ಪರ್ಧಿಸಿ ಸೋತರೂ ಧೃತಿಗೆಡದೆ ನಾಯಕನನ್ನು ನಂಬಿ ಅವರ ಜೊತೆಯಲ್ಲಿಯೇ ಎಲ್ಲ ರಾಜಕೀಯ ನಿರ್ಧಾರಗಳಲ್ಲಿ ಜೊತೆಯಾಗಿ ನಿಂತು, ಯಡಿಯೂರಪ್ಪ ಜೊತೆಯಲ್ಲಿಯೇ ಬಿಜೆಪಿ ಸೇರಿದರು. ನಂತರ ಶಾಸಕರೂ ಆದ ರೇಣುಕಾಚಾರ್ಯ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರೂ ಅವಕಾಶ ಕೈತಪ್ಪಿದಾಗ ನಿಷ್ಠೆ ಬದಲಿಸದೆ ಸಿಎಂ ರಾಜಕೀಯ ಕಾರ್ಯದರ್ಶಿ ಜವಾಬ್ದಾರಿ ನಿರ್ವಹಿಸಿಕೊಂಡು ಬಂದಿದ್ದಾರೆ.

ಯಡಿಯೂರಪ್ಪ ವಿರುದ್ಧ ಪಕ್ಷದಲ್ಲಿ ಅಸಮಾಧಾನ ಎದ್ದಾಗ, ನಾಯಕತ್ವ ಬದಲಾವಣೆ ವಿಷಯ ಬಂದಾಗ ಬಹಿರಂಗವಾಗಿಯೇ ವಾಗ್ದಾಳಿ ನಡೆಸಿ ಯಡಿಯೂರಪ್ಪ ಪರ ಭರ್ಜರಿ ಬ್ಯಾಟಿಂಗ್ ಮಾಡಿದ್ದ ರೇಣುಕಾಚಾರ್ಯಗೆ ಇಂದಿನ ನಾಯಕತ್ವ ಬದಲಾವಣೆ ಸನ್ನಿವೇಶ ದುಃಖ ತರಿಸಿದೆ. ಬೇಸರ ಮೂಡಿಸಿದೆ. ಅದನ್ನು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಳ್ಳುವ ಮೂಲಕ ಹೇಳಿಕೊಂಡಿದ್ದಾರೆ.

ABOUT THE AUTHOR

...view details