ಕರ್ನಾಟಕ

karnataka

ETV Bharat / state

'ನೀವೇ 100 ಕೋಟಿ ರೂ. ವೈಯಕ್ತಿಕವಾಗಿ ಘೋಷಿಸಿ ಯೇಸು ಪುತ್ರ ಡಿಕೆಶಿ'- ರೇಣುಕಾಚಾರ್ಯ ವ್ಯಂಗ್ಯ - ರೇಣುಕಾಚಾರ್ಯ ವರ್ಸಸ್ ಡಿಕೆ ಶಿವಕುಮಾರ್

ರಾಮನಗರದಲ್ಲಿ ಎತ್ತರದ ಏಕಶಿಲಾ ಯೇಸು ಪ್ರತಿಮೆಯ ಶಿಲಾನ್ಯಾಸಕ್ಕೆ ಸ್ವಂತ ಹಣ ನೀಡುತ್ತೀರ. ಕಾಂಗ್ರೆಸ್ ಅಧ್ಯಕ್ಷರಾಗಬೇಕೆಂದು ಸೋನಿಯಾ ಗಾಂಧಿ ಅವರನ್ನು ಮೆಚ್ಚಿಸಲು ಕ್ರಿಶ್ಚಿಯನ್ ಮಿಷನರಿಗಳಿಗೆ ಸ್ವಂತ ಹಣ ನೀಡುತ್ತೀರ. ಈಗ ರಾಜ್ಯದ ಜನರ ಹಿತದೃಷ್ಟಿಯಿಂದ ನೀವೇ ₹ 100 ಕೋಟಿ ವೈಯಕ್ತಿಕವಾಗಿ ಘೋಷಿಸಿ ಯೇಸುಪುತ್ರ ಡಿಕೆ ಶಿವಕುಮಾರ್ ಎಂದು ರೇಣುಕಾಚಾರ್ಯ ಟ್ವೀಟ್ ಮಾಡಿದ್ದಾರೆ.

ರೇಣುಕಾಚಾರ್ಯ
ರೇಣುಕಾಚಾರ್ಯ

By

Published : May 15, 2021, 2:57 AM IST

ಬೆಂಗಳೂರು:ಪಕ್ಷದ ಶಾಸಕರು ಮತ್ತು ಸಂಸದರ‌ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ತಲಾ ₹ 1 ಕೋಟಿ ಸೇರಿದಂತೆ ₹ 100 ಕೋಟಿ ಕೋವಿಡ್ ಲಸಿಕೆ ನೀಡುವ ಕಾಂಗ್ರೆಸ್ ಪ್ರಸ್ತಾಪಕ್ಕೆ ಶಾಸಕ ಎಂಪಿ ರೇಣುಕಾಚಾರ್ಯ ವ್ಯಂಗ್ಯವಾಡಿದ್ದಾರೆ.

ರಾಮನಗರದಲ್ಲಿ ಎತ್ತರದ ಏಕಶಿಲಾ ಯೇಸು ಪ್ರತಿಮೆಯ ಶಿಲಾನ್ಯಾಸಕ್ಕೆ ಸ್ವಂತ ಹಣ ನೀಡುತ್ತೀರ. ಕಾಂಗ್ರೆಸ್ ಅಧ್ಯಕ್ಷರಾಗಬೇಕೆಂದು ಸೋನಿಯಾ ಗಾಂಧಿ ಅವರನ್ನು ಮೆಚ್ಚಿಸಲು ಕ್ರಿಶ್ಚಿಯನ್ ಮಿಷನರಿಗಳಿಗೆ ಸ್ವಂತ ಹಣ ನೀಡುತ್ತೀರ. ಈಗ ರಾಜ್ಯದ ಜನರ ಹಿತದೃಷ್ಟಿಯಿಂದ ನೀವೇ ₹ 100 ಕೋಟಿ ವೈಯಕ್ತಿಕವಾಗಿ ಘೋಷಿಸಿ ಯೇಸುಪುತ್ರ ಡಿಕೆ ಶಿವಕುಮಾರ್ ಎಂದು ಟ್ವೀಟ್ ಮಾಡಿದ್ದಾರೆ.

ಪಕ್ಷದ ಶಾಸಕರು ಮತ್ತು ಸಂಸದರ‌ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ತಲಾ 1 ಕೋಟಿ ರೂ. ಸೇರಿ 100 ಕೋಟಿ ರೂ.ಯನ್ನು ಕೋವಿಡ್ ಲಸಿಕೆ ಖರೀದಿಗಾಗಿ ಸರ್ಕಾರಕ್ಕೆ ಒಪ್ಪಿಸಲು ಕಾಂಗ್ರೆಸ್ ನಿರ್ಧರಿಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಶುಕ್ರವಾರ ತಿಳಿಸಿದ್ದರು.

ಮತ್ತೊಂದು ಟ್ವೀಟ್​​ನಲ್ಲಿ, 'ಕಾನ್'ಗ್ರೇಸ್ ಪಕ್ಷದ ಅಧ್ಯಕ್ಷರು ಯೇಸುಪುತ್ರ ಡಿಕೆ ಶಿವಕುಮಾರ್ ಅವರೇ ಸರ್ಕಾರದ ಹಣವನ್ನ ಸರ್ಕಾರಕ್ಕೆ ನೀಡುವುದಲ್ಲ. ಕಾಂಗ್ರೆಸ್ ಮುಖಂಡರಿಗೆ ನಿಜವಾಗಲೂ ಹೃದಯ ಶ್ರೀಮಂತಿಕೆ ಇದ್ದರೆ ತಮ್ಮ ಸ್ವಂತ ಜೀಬಿನ ಹಣದಿಂದ ಒಬ್ಬೊಬ್ಬರು ಹತ್ತು ಕೋಟಿ ಘೋಷಿಸಲಿ. ಕಾಂಗ್ರೆಸ್ ಮುಖಂಡರು ಕೆಲವೊಮ್ಮೆ ಬದುಕಿದ್ದೀವಿ ಎಂದು ಈ ರೀತಿ ಹೇಳಿಕೆ ನೀಡಿ ತೋರಿಸುತ್ತಾರೆ ಎಂದು ಬರೆದಿದ್ದಾರೆ.

ABOUT THE AUTHOR

...view details