ಕರ್ನಾಟಕ

karnataka

ETV Bharat / state

ಗಸ್ತಿನಲ್ಲಿದ್ದ ಹೊಯ್ಸಳ ಪೊಲೀಸ್​​ ಸಿಬ್ಬಂದಿ ಮೇಲೆ ದರ್ಪ ತೋರಿದ ಶಾಸಕ ಕುಮಾರಸ್ವಾಮಿ - ಮೂಡಿಗೆರೆ ಬಿಜೆಪಿ ಶಾಸಕ ಎಂಪಿ ಕುಮಾರಸ್ವಾಮಿ ದರ್ಪ

ನಾನು ಶಾಸಕ ಕುಮಾರಸ್ವಾಮಿ ಹತ್ತಿರ ಮಾತಾಡಿದ್ದೇನೆ. ಹೊಯ್ಸಳ ವಾಹನವನ್ನು ಇಳಿದು ಹೋಗುವ ಜಾಗಕ್ಕೆ ಅಡ್ಡಲಾಗಿ ನಿಲ್ಲಿಸಿದ್ದರು. ಹಾಗಾಗಿ, ಇವರಿಗೆ ದಾರಿ ಬಿಡಲಿಲ್ಲ. ಪೊಲೀಸರು ಪಕ್ಕದಲ್ಲಿ ಮಾತನಾಡುತ್ತಾ ನಿಂತಿದ್ದರು. ಹಾರ್ನ್ ಮಾಡಿದಾಗ ದೂರದಿಂದಲೇ ಇಳಿದು ಹೋಗುವಂತೆ ಹೇಳಿದ್ದರಂತೆ. ಅಲ್ಲಿ ಸ್ವಲ್ಪ ಮಾತಿನ ಚಕಮಕಿ ಆಗಿದೆ. ಪೊಲೀಸರಿಗೆ ಎಂಎಲ್ಎ ಅಂತಾ ಗೊತ್ತಾಗಿಲ್ಲ. ಘಟನೆ ಸಂಬಂಧ ಪೊಲೀಸ್​​ ಸಿಬ್ಬಂದಿಗೆ ಎಚ್ಚರಿಕೆ ನೀಡುವಂತೆ ಪೊಲೀಸ್ ಆಯುಕ್ತರಿಗೂ ಹೇಳಲಾಗಿದೆ..

MLA MP Kumaraswamy allegedly abused two police men at Bangalore
ಗಸ್ತಿನಲ್ಲಿದ್ದ ಹೊಯ್ಸಳ ಪೊಲೀಸ್​​ ಸಿಬ್ಬಂದಿ ಮೇಲೆ ದರ್ಪ ತೋರಿದ ಶಾಸಕ ಕುಮಾರಸ್ವಾಮಿ

By

Published : Jan 28, 2022, 4:51 PM IST

ಬೆಂಗಳೂರು :ಶಾಸಕರ ಭವನದಲ್ಲಿ ಕರ್ತವ್ಯನಿರತ ಹೊಯ್ಸಳ ಪೊಲೀಸ್ ಸಿಬ್ಬಂದಿ ಮೇಲೆ ಮೂಡಿಗೆರೆ ಬಿಜೆಪಿ ಶಾಸಕ ಎಂ ಪಿ ಕುಮಾರಸ್ವಾಮಿ ದರ್ಪ ತೋರಿರುವ ಆರೋಪ ಕೇಳಿ ಬಂದಿದೆ‌.

ಕಳೆದ ರಾತ್ರಿ 11 ಗಂಟೆ ಸುಮಾರಿಗೆ ನೈಟ್ ಬೀಟ್ ರೌಂಡ್ಸ್​​ನಲ್ಲಿದ್ದ ಹೊಯ್ಸಳ ದಳದ ಇಬ್ಬರು ಮುಖ್ಯ ಪೇದೆಗಳು, ಎಂದಿನಂತೆ ಶಾಸಕರ ಭವನದ ಪಾಯಿಂಟ್​ಗೆ ಬಂದಿದ್ದಾರೆ. ಈ ವೇಳೆ ಶಾಸಕ ಕುಮಾರಸ್ವಾಮಿ ಕಾರ್​ ಪಾರ್ಕಿಂಗ್​ ವಿಚಾರಕ್ಕೆ ಪೊಲೀಸ್​ ಸಿಬ್ಬಂದಿಗೆ ಅವಾಚ್ಯ ಶಬ್ದದಿಂದ ನಿಂದಿಸಿ ಆವಾಜ್​ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

ಘಟನೆ ನಡೆಯುತ್ತಿದ್ದಂತೆ ಪೊಲೀಸ್​ ಸಿಬ್ಬಂದಿ ಕೂಡಲೇ ಕಂಟ್ರೋಲ್ ರೂಂಗೆ ಮಾಹಿತಿ ರವಾನಿಸಿದ್ದಾರೆ. ಮಾಹಿತಿ ಲಭ್ಯವಾಗುತ್ತಿದ್ದಂತೆ ರಾತ್ರಿ ಗಸ್ತಿನಲ್ಲಿದ್ದ ಎಸಿಪಿ ಸ್ಥಳಕ್ಕಾಗಮಿಸಿ ಶಾಸಕರನ್ನು ಸಮಾಧಾನ ಪಡಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಸದ್ಯ ಘಟನೆ ಕುರಿತಂತೆ ಯಾವುದೇ ಕೇಸ್​ ದಾಖಲಾಗಿಲ್ಲ ಎಂದು ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: ಮಾಜಿ ಸಿಎಂ ಬಿಎಸ್‌ವೈ ಮೊಮ್ಮಗಳು ಸೌಂದರ್ಯ ಸಾವಿಗೆ ಡಿಪ್ರೆಷನ್‌ ಕಾರಣ?

ಪೊಲೀಸ್ ಸಿಬ್ಬಂದಿ ಜೊತೆ ವಾಗ್ವಾದ ಪ್ರಕರಣ ಸಂಬಂಧ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯಿಸಿದ್ದು, ನಾನು ಶಾಸಕ ಕುಮಾರಸ್ವಾಮಿ ಹತ್ತಿರ ಮಾತಾಡಿದ್ದೇನೆ. ಹೊಯ್ಸಳ ವಾಹನವನ್ನು ಇಳಿದು ಹೋಗುವ ಜಾಗಕ್ಕೆ ಅಡ್ಡಲಾಗಿ ನಿಲ್ಲಿಸಿದ್ದರು. ಹಾಗಾಗಿ, ಇವರಿಗೆ ದಾರಿ ಬಿಡಲಿಲ್ಲ. ಪೊಲೀಸರು ಪಕ್ಕದಲ್ಲಿ ಮಾತನಾಡುತ್ತಾ ನಿಂತಿದ್ದರು.

ಹಾರ್ನ್ ಮಾಡಿದಾಗ ದೂರದಿಂದಲೇ ಇಳಿದು ಹೋಗುವಂತೆ ಹೇಳಿದ್ದರಂತೆ. ಅಲ್ಲಿ ಸ್ವಲ್ಪ ಮಾತಿನ ಚಕಮಕಿ ಆಗಿದೆ. ಪೊಲೀಸರಿಗೆ ಎಂಎಲ್ಎ ಅಂತಾ ಗೊತ್ತಾಗಿಲ್ಲ. ಘಟನೆ ಸಂಬಂಧ ಪೊಲೀಸ್​​ ಸಿಬ್ಬಂದಿಗೆ ಎಚ್ಚರಿಕೆ ನೀಡುವಂತೆ ಪೊಲೀಸ್ ಆಯುಕ್ತರಿಗೂ ಹೇಳಲಾಗಿದೆ ಎಂದರು.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

For All Latest Updates

ABOUT THE AUTHOR

...view details