ಬೆಂಗಳೂರು:ಕೊನೆಗೂ ಮತ್ತೋರ್ವ ಅತೃಪ್ತ ಶಾಸಕ ಮಹೇಶ್ ಕುಮಟಳ್ಳಿ ಬೆಂಗಳೂರಿಗೆ ಆಗಮಿಸಿದ್ದಾರೆ.
ಶಾಸಕರ ಭವನದಲ್ಲಿರುವ ತಮ್ಮ ಕೊಠಡಿಯಲ್ಲಿ ಪ್ರತ್ಯಕ್ಷವಾಗಿರುವ ಮಹೇಶ್ ಕುಮಟಳ್ಳಿ, ನಿನ್ನೆ ರಮೇಶ್ ಜಾರಕಿಹೊಳಿ ಜೊತೆಗೇ ಮುಂಬೈನಿಂದ ಆಗಮಿಸಿದ್ದಾರೆ. ಇದೇ ವೇಳೆ ಮಾತನಾಡಿದ ಅವರು, ನನಗೆ ಅಸಮಾಧಾನ ಇತ್ತು. ಅದು ವಿಕೋಪಕ್ಕೆ ಹೋಯಿತು. ಇವತ್ತು ನಾಯಕರ ಜೊತೆ ಮಾತನಾಡುತ್ತೇನೆ ಎಂದು ತಿಳಿಸಿದರು.
ರಮೇಶ್ ಜಾರಕಿಹೊಳಿ ನನ್ನನ್ನು ನಿರ್ಬಂಧಿಸಿರಲಿಲ್ಲ. ಸ್ಪೀಕರ್, ಸಿದ್ದರಾಮಯ್ಯ ಎಲ್ಲರನ್ನು ಭೇಟಿಮಾಡುತ್ತೇನೆ. ಕಲಾಪದಲ್ಲೂ ಪಾಲ್ಗೊಳ್ಳುತ್ತೇನೆ. ನಾನು ಪಕ್ಷದಲ್ಲೇ ಇರ್ತೇನೆ ಎಂದು ಸ್ಪಷ್ಟಪಡಿಸಿದರು.
ಇನ್ನು ಅಪ್ಪ- ಮಕ್ಕಳ ಜಗಳದಲ್ಲಿ ಕೂಸು ಬಡವಾಯ್ತು ಅನ್ನುವ ಸ್ಥಿತಿ ನಮ್ಮದಾಗಿದೆ. ಪಕ್ಷದಲ್ಲಿ ನಾಯಕರ ನಡುವಿನ ಜಗಳದಲ್ಲಿ ನಾವು ಬಡವಾದ್ವಿ ಎಂದು ರಮೇಶ್ ಜಾರಕಿಹೊಳಿ ವಿರುದ್ಧ ಮಹೇಶ್ ಕುಮಟಳ್ಳಿ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು.
ನನ್ನ ಆರೋಗ್ಯ ಸರಿ ಇರಲಿಲ್ಲ. ಹಾಗಾಗಿ ಕಲಾಪಕ್ಕೆ, ಸಿಎಲ್ಪಿ ಸಭೆಗೆ ಬರಲಾಗಿರಲಿಲ್ಲ. ಬಿಜೆಪಿ ಸಂಪರ್ಕದಲ್ಲಿ ನಾನಿಲ್ಲ. ಯಾವ ಅತೃಪ್ತರ ಜೊತೆಯೂ ನಾನಿರಲಿಲ್ಲ ಎಂದು ಮಹೇಶ್ ಕುಮಟಳ್ಳಿ ಸ್ಪಷ್ಟಪಡಿಸಿದರು.