ಕರ್ನಾಟಕ

karnataka

ETV Bharat / state

ಲೋಕಾ ಪೊಲೀಸರ ಮುಂದೆ ಇಂದು ಮತ್ತೆ ವಿಚಾರಣೆಗೆ ಹಾಜರಾದ ಮಾಡಾಳ್ ವಿರುಪಾಕ್ಷಪ್ಪ.. - ಮೇಲ್ಮನವಿ ಅರ್ಜಿ ಸಲ್ಲಿಸಲು ಸಿದ್ದತೆ

ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆಗೆ (ಕೆಎಸ್ ಡಿಎಲ್) ರಾಸಾಯನಿಕ ಖರೀದಿ ಟೆಂಡರ್ ಪ್ರಕ್ರಿಯೆಯಲ್ಲಿ ಲಂಚ ಆರೋಪ - ಶಾಸಕ ಮಾಡಾಳ್ ವಿರುಪಾಕ್ಷಪ್ಪ ಅವರನ್ನು ನಿನ್ನೆ ನಾಲ್ಕು ಗಂಟೆ ಕಾಲ ಲೋಕಾ ಪೊಲೀಸರ ವಿಚಾರಣೆ. ಇಂದು ಮತ್ತೆ ಬ್ರೋಕರ್​ಗಳ ಮುಖಾಮುಖಿಯಲ್ಲಿ ವಿಚಾರಣೆ.

Modal Virupakshappa attended the inquiry
ವಿಚಾರಣೆಗೆ ಹಾಜರಾದ ಮಾಡಾಳ್ ವಿರುಪಾಕ್ಷಪ್ಪ

By

Published : Mar 10, 2023, 3:38 PM IST

ಬೆಂಗಳೂರು: ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆಗೆ (ಕೆಎಸ್ ಡಿಎಲ್) ರಾಸಾಯನಿಕ ಖರೀದಿ ಟೆಂಡರ್ ಪ್ರಕ್ರಿಯೆಯಲ್ಲಿ ಲಂಚ ಪಡೆದ ಆರೋಪದ ಸಂಬಂಧ ಶಾಸಕ ಮಾಡಾಳ್ ವಿರುಪಾಕ್ಷಪ್ಪ ನಿನ್ನೆ ನಾಲ್ಕು ಗಂಟೆಗಳ ಕಾಲ ಲೋಕಾಯುಕ್ತ ಪೊಲೀಸರ ವಿಚಾರಣೆ ಎದುರಿಸಿದ್ದರು. ಇಂದು ಮತ್ತೆ ಚೆನ್ನಗಿರಿ ಕ್ಷೇತ್ರದ ಶಾಸಕ ಮಾಡಾಳ್ ವಿರುಪಾಕ್ಷಪ್ಪ ವಿಚಾರಣೆಗೆ ಹಾಜರಾಗಿದ್ದಾರೆ.

ನಿನ್ನೆ ನಾಲ್ಕು ಗಂಟೆಗಳ ಕಾಲ ಸುದೀರ್ಘ ವಿಚಾರಣೆ ನಡೆಸಿದ ಪೊಲೀಸರು ಇಂದು ಮಧ್ಯಾಹ್ನ 2 ಗಂಟೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು.‌ ಅದರಂತೆ ಇಂದು ಲೋಕಾ ಪೊಲೀಸರ ಮುಂದೆ ಹಾಜರಾಗಿದ್ದರು. ಕೆಎಸ್ ಡಿಎಲ್ ಅಧ್ಯಕ್ಷ ಆದಾಗಿನಿಂದ ಈ ವರೆಗೂ ಟೆಂಡರ್ ಪ್ರಕ್ರಿಯೆಯಲ್ಲಿ ಏನಾದರೂ ಲೋಪವಾಗಿದೆಯಾ ?, ಯಾವ ಮೊತ್ತಕ್ಕೆ ಟೆಂಡರ್ ನೀಡಿರುವುದು ? ಯಾರೆಲ್ಲಾ ಪಡೆದಿದ್ದಾರೆ ಎಂಬುದರ ಬಗ್ಗೆ ವಿರೂಪಾಕ್ಷಪ್ಪ ಅವರನ್ನು ಪ್ರಶ್ನಿಸಿದ್ದು ಇದಕ್ಕೆ ಸಕರಾತ್ಮಕವಾಗಿ ಸ್ಪಂದಿಸಿಲ್ಲ ಎನ್ನಲಾಗಿದೆ.

ಏಜೆಂಟರು ಹಾಗೂ ಮಧ್ಯವರ್ತಿಗಳ ಹೆಸರು ಹೇಳಿ ಪ್ರಶ್ನಿಸಿದರೂ ನನಗೆ ಯಾರು ಅಂತಾ ಗೊತ್ತಿಲ್ಲ ಎಂದು ಎಂದು ಹೇಳಿಕೆ ನೀಡಿದ್ದರು. ಈ ಸಂಬಂಧ ಖಚಿತಪಡಿಸಿಕೊಳ್ಳಲು ಬ್ರೋಕರ್ ಗಳಿಗೂ ನೋಟಿಸ್ ಜಾರಿ ಮಾಡಲಾಗಿದೆ. ಇಂದು‌ ಪರಸ್ಪರ ಅವರನ್ನು ಮುಖಾಮುಖಿ ಮಾಡಿಸಿ ಮಾಡಾಳ್ ವಿರುಪಾಕ್ಷಪ್ಪರಿಗೆ ವಿಚಾರಣೆ ನಡೆಸಲು ಪೊಲೀಸರು ಸಿದ್ಧತೆ ನಡೆಸುತ್ತಿದ್ದಾರೆ.

ಲೋಕಾಯುಕ್ತರಿಂದ ಮೇಲ್ಮನವಿಗೆ ಸಿದ್ಧತೆ:ನಿರೀಕ್ಷಣಾ ಜಾಮೀನು ರದ್ದುಗಳಿಸುವಂತೆ ಕೋರಿ ಲೋಕಾಯುಕ್ತ ಪೊಲೀಸರು ಸುಪ್ರೀಕೋರ್ಟ್​ನಲ್ಲಿ‌ ಮೇಲ್ಮನವಿ ಅರ್ಜಿ ಸಲ್ಲಿಸಲು ಸಿದ್ದತೆ ನಡೆಸಿದ್ದಾರೆ. ಇದಕ್ಕೆ ಪೂರಕ ದಾಖಲಾತಿಗಳ ಸತ್ಯಾಸತ್ಯತೆ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಲಂಚ ಪ್ರಕರಣ ಸಂಬಂಧ ಮಾಡಾಳ್ ವಿರೂಪಾಕ್ಷಪ್ಪ ಅವರ ಪಾತ್ರದ ಬಗ್ಗೆ ಇದುವರೆಗೂ ನಡೆಸಿದ್ದಾರೆ ಎನ್ನಲಾದ ಅವ್ಯವಹಾರ ಸಂಬಂಧಿಸಿದಂತೆ ವ್ಯಕ್ತಿಗಳನ್ನು ಕರೆಯಿಸಿ ವಿಚಾರಣೆ ನಡೆಸಲು ಪೊಲೀಸರು ತಯಾರಿ ನಡೆಸುತ್ತಿದ್ದಾರೆ‌. ವಿಚಾರಣೆಗೆ ಅನುಗುಣಾವಾಗಿ ಸಮಗ್ರ ದಾಖಲಾತಿ ಒದಗಿಸುವಂತೆ ಪೊಲೀಸರು ತಾಕೀತು ಹಿನ್ನೆಲೆ ತನಿಖಾಧಿಕಾರಿ ಮುಂದೆ ಹಾಜರಾಗಿದ್ದಾರೆ.

ನಿನ್ನೆ ನಾಲ್ಕು ಗಂಟೆ ಕಾಲ ವಿಚಾರಣೆ:ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆಗೆ (ಕೆಎಸ್ ಡಿಎಲ್) ರಾಸಾಯನಿಕ ಖರೀದಿ ಟೆಂಡರ್ ಪ್ರಕ್ರಿಯೆಯಲ್ಲಿ ಲಂಚ ಪಡೆದ ಆರೋಪದ ಸಂಬಂಧ ನಿನ್ನೆ ನಾಲ್ಕು ಗಂಟೆಗಳ ಕಾಲ ಲೋಕಾಯುಕ್ತ ಪೊಲೀಸರ ವಿಚಾರಣೆ ಎದುರಿಸಿದ್ದರು.

ಲೋಕಾಯುಕ್ತ ಕಚೇರಿಗೆ ಹಾಜರಾಗಿ ನಂತರ ಮಾತನಾಡಿದ ಅವರು, ನಾನು ಲೋಕಾಯುಕ್ತ ಅಧಿಕಾರಿಗಳು ಕೇಳಿರುವ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ. ಆದರೆ, ತನಿಖೆಯ ವೇಳೆ ನಡೆದಿರುವ ವಿಚಾರವನ್ನು ನಾವು ಬಹಿರಂಗಪಡಿಸುವಂತಿಲ್ಲ ಎಂದರು. ಈ ವೇಳೆ ನೀವು ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೊಂದಿಷ್ಟು ಆರೋಪಗಳನ್ನು ಮಾಡಿದ್ರಿ, ನನ್ನ ಬಗ್ಗೆ ಯಾರೋ ಷಡ್ಯಂತ್ರಗಳನ್ನು ಮಾಡಿದ್ದಾರೆ ಎಂದಿದ್ರಿ, ಈ ಬಗ್ಗೆ ಏನ್​ ಹೇಳುತ್ತೀರಿ ಎಂಬ ಮಾಧ್ಯಮದವರ ಪ್ರಶ್ನೆಗೆ, ನಾನು ಆ ಬಗ್ಗೆ ಈಗ ಏನೂ ಹೇಳುವುದಿಲ್ಲ ಎಂದು ಹೇಳಿದ್ದರು.
ಇದನ್ನೂ ಓದಿ:ಲಂಚಕ್ಕೆ ಬೇಡಿಕೆ ಇಟ್ಟ ಅಧಿಕಾರಿಗಳಿಗೆ ಎತ್ತು ಕೊಡಲು ಮುಂದಾದ ರೈತ! ಅನ್ನದಾತನ ಅಸಹಾಯಕತೆ!

ABOUT THE AUTHOR

...view details