ಬೆಂಗಳೂರು:ಆರ್ಥಿಕ ಸುಧಾರಣೆಯಲ್ಲಿ ರಾಜ್ಯ ಮುಂದಿದೆ. ಗುಜರಾತ್ ಪ್ರಥಮ ಸ್ಥಾನದಲ್ಲಿದ್ದು, ನಾವು ದ್ವಿತೀಯ ಸ್ಥಾನದಲ್ಲಿದ್ದೇವೆ ಎಂದು ಬಿಜೆಪಿ ಶಾಸಕ ಕುಮಾರ್ ಬಂಗಾರಪ್ಪ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬರಬೇಕಾದ ನಾಲ್ಕನೇ ಕ್ವಾರ್ಟರ್ನಲ್ಲಿ ರಾಜ್ಯದ ಸುಧಾರಣೆ ಇದೆ. ಜಿಎಸ್ಟಿ ಪರಿಹಾರ ಬಂದರೆ ಮತ್ತಷ್ಟು ಸುಧಾರಣೆ ಕಾಣುತ್ತೇವೆ ಎಂದರು. ಕೇಂದ್ರದಿಂದ 7694 ಕೋಟಿ ರೂ. ಜಿಎಸ್ಟಿ ಹಣ ರಿಲೀಸ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಪ್ರಸ್ತುತ 7600 ಕೋಟಿ ರೂ.ನಷ್ಟು ಜಿಎಸ್ಟಿ ಹಣ ಬಂದಿದೆ. ನಮಗೆ GSTಯ ಶೇ. 15ರಷ್ಟು ಫಂಡ್ ಬರಬೇಕು. ಕೆಲವು ಕಮಾಡಿಟೀಸ್ನಲ್ಲಿ ಬರಬೇಕಿತ್ತು. ಸೆಸ್ ಹಾಕುವ ಸ್ವಾತಂತ್ರ್ಯವನ್ನು ನಾವು ಕಳೆದುಕೊಂಡಿದ್ದೇವೆ. ಆದರೂ ಈಗ ಕೇಂದ್ರದಿಂದ ಬಂದಿದೆ. ಉಳಿದ ಏಳು ಸಾವಿರ ಕೋಟಿ ರೂ. ರೀಫಂಡ್ ಮಾಡಬೇಕು. ಆಗ ಸ್ವಲ್ಪಮಟ್ಟಿಗೆ ಉಸಿರಾಟ ಸಾಧ್ಯವಾಗುತ್ತದೆ ಎಂದು ಹೇಳಿದರು.