ಕರ್ನಾಟಕ

karnataka

ETV Bharat / state

ಸಚಿವ ಸ್ಥಾನ ಕೈತಪ್ಪುವ ಆತಂಕ: ಕಲ್ಲಡ್ಕ ಪ್ರಭಾಕರ್ ಭೇಟಿಯಾದ ಕೆ.ಎಸ್.ಈಶ್ವರಪ್ಪ - ಬೊಮ್ಮಾಯಿ ಸಂಪುಟ

ಸಿಎಂ ಬೊಮ್ಮಾಯಿಯ ನೂತನ ಸಂಪುಟದಲ್ಲಿ ಯಾರಿಗೆಲ್ಲ ಸ್ಥಾನಸಿಗಲಿದೆ ಎಂಬುದು ಇಂದಿಗೂ ಗೌಪ್ಯವಾಗಿದೆ. ಸದ್ಯ ದೆಹಲಿಯಲ್ಲಿ ಕೆಲ ಶಾಸಕರು ಮಂತ್ರಿಗಿರಿಗಾಗಿ ಲಾಬಿ ನಡೆಸುತ್ತಿದ್ದರೆ, ಇತ್ತ ಈಶ್ವರಪ್ಪ ಆರ್​ಎಸ್​ಎಸ್​​ ಮುಖಂಡ ಕಲಡ್ಕ ಪ್ರಭಾಕರ್ ಭಟ್ ಭೇಟಿಯಾಗಿದ್ದಾರೆ.

mla-ks-eshwarappa-meets-rss-leader-kaladka-parabhakar-batt
ಕಲ್ಲಡ್ಕ ಪ್ರಭಾಕರ್ ಭೇಟಿಯಾದ ಕೆ.ಎಸ್.ಈಶ್ವರಪ್ಪ

By

Published : Jul 31, 2021, 1:09 PM IST

ಬೆಂಗಳೂರು: ಸಿಎಂ ಬೊಮ್ಮಾಯಿ ನೇತೃತ್ವದ ಸಂಪುಟದಲ್ಲಿ ಸಚಿವ ಸ್ಥಾನ‌ ಕೈತಪ್ಪುವ ಭೀತಿಯಲ್ಲಿರುವ ಕೆ.ಎಸ್.ಈಶ್ವರಪ್ಪ ತಮ್ಮ‌ ನಿವಾಸದಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ ಜೊತೆ ಚರ್ಚೆ ನಡೆಸಿರುವುದು ಕುತೂಹಲ ಕೆರಳಿಸಿದೆ. ನೂತನ‌ ಸಂಪುಟ ರಚನೆ ವೇಳೆ ಹಿರಿಯ ಮಂತ್ರಿಗಳಿಗೆ ಸಚಿವ ಸ್ಥಾನ ಕೈತಪ್ಪುವ ಮಾತುಗಳು ಕೇಳಿ ಬರುತ್ತಿದೆ. ಈ ಹಿನ್ನೆಲೆ ಶಾಸಕ ಕೆ.ಎಸ್.ಈಶ್ವರಪ್ಪ ಸಚಿವ ಸ್ಥಾನಕ್ಕಾಗಿ ತೆರೆಮರೆಯಲ್ಲಿ ಲಾಬಿ ನಡೆಸುತ್ತಿದ್ದಾರೆ ಎನ್ನಲಾಗಿದೆ.‌

ಕಲ್ಲಡ್ಕ ಪ್ರಭಾಕರ್ ಭೇಟಿಯಾದ ಕೆ.ಎಸ್.ಈಶ್ವರಪ್ಪ

ಇಂದು ತಮ್ಮ ಸರ್ಕಾರಿ ನಿವಾಸದಲ್ಲಿ ಸಂಘ‌ ಪರಿವಾರದ ಪ್ರಮುಖ ಕಲ್ಲಡ್ಕ ಪ್ರಭಾಕರ್ ಭಟ್ ಅವರನ್ನು ಭೇಟಿಯಾಗಿರುವುದು ಕುತೂಹಲ ಮೂಡಿಸಿದೆ. ನಿನ್ನೆ ಸಂಜೆ ಸ್ಪೀಕರ್ ಕಾಗೇರಿ ನಿವಾಸದಲ್ಲಿ ಗುಪ್ತ ಸಭೆ ನಡೆಸಿದ್ದ ಅವರು, ಇಂದು ಕಲ್ಲಡ್ಕ ಪ್ರಭಾಕರ್ ಭಟ್ ಅವರ ಜತೆ ಚರ್ಚೆ ನಡೆಸಿದ್ದಾರೆ.

ಈ ಬಾರಿ ಸಿಎಂ ಬೊಮ್ಮಾಯಿ ಸಂಪುಟದಲ್ಲಿ ಹಿರಿಯ ಶಾಸಕರ ಬದಲಿಗೆ ಕಿರಿಯರಿಗೆ, ಹೊಸಬರಿಗೆ ಅವಕಾಶ ನೀಡುವ ಸಾಧ್ಯತೆ ಹೆಚ್ಚಿದೆ ಎಂಬ ಮಾತುಗಳು ಬಲವಾಗಿ ‌ಕೇಳಿ ಬರುತ್ತಿದೆ. ಈ ಮಧ್ಯೆ ಹಿರಿಯ ಶಾಸಕರು ಸಂಪುಟದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಲಾಬಿ ನಡೆಸುತ್ತಿದ್ದಾರೆ.

ಓದಿ:ನಿರ್ಮಲಾ ಸೀತಾರಾಮನ್ ಭೇಟಿಯಾದ ಸಿಎಂ ಬೊಮ್ಮಾಯಿ: GST ಪರಿಹಾರ ಬಿಡುಗಡೆಗೆ ಮನವಿ

ABOUT THE AUTHOR

...view details