ಕರ್ನಾಟಕ

karnataka

ETV Bharat / state

ಕಾಂಗ್ರೆಸ್​ ಹಾಲು, ಬಿಜೆಪಿ ಕಾಫಿಪುಡಿ, ಜೆಡಿಎಸ್​ ಸಕ್ಕರೆ.. ಬಿಎಸ್​ವೈ ಎಲ್ಲವನ್ನೂ ಸೇರಿಸಿ ಕಾಫಿಮಾಡಿದ್ದಾರೆ: ಎಂ ಕೃಷ್ಣಪ್ಪ - yashavantapura by election campaign update

ಕಾಂಗ್ರೆಸ್​ನಲ್ಲಿದ್ದು ಬಿಜೆಪಿಗೆ ಬಂದ ಎಸ್​.ಟಿ.ಸೋಮಶೇಖರ್ ಅವರು ನಮ್ಮ ಪಕ್ಷಕ್ಕೆ ಬಂದು ಒಳ್ಳೆಯ ಕೆಲಸ ಮಾಡಿದ್ದಾರೆ. ಇಲ್ಲಿ ಹಾಲು , ಸಕ್ಕರೆ ಕಾಫಿಪುಡಿಯಂತೆ ಬೆರೆತಿದ್ದಾರೆ. ಯಡಿಯೂರಪ್ಪ ಕಾಫಿ ಮಾಡಿದ್ದಾರೆ ಎಂದು ಹೇಳಿದ್ದಾರೆ.

bng
ಯಶವಂತಪುರ ಉಪಚುನಾವಣಾ ಪ್ರಚಾರದ ವೇಳೆ ಶಾಸಕ ಎಂ.ಕೃಷ್ಣಪ್ಪ ಮಾತನಾಡಿದರು.

By

Published : Nov 30, 2019, 1:33 PM IST

ಬೆಂಗಳೂರು:ಎಸ್.ಟಿ.ಸೋಮಶೇಖರ್ ನೇತೃತ್ವದ ಕಾಂಗ್ರೆಸ್ ಕಾರ್ಯಕರ್ತರು ಹಾಲು ಇದ್ದಂತೆ, ಬಿಜೆಪಿ ಕಾರ್ಯಕರ್ತರು ಕಾಫಿಪುಡಿ ಹಾಗೂ ಜೆಡಿಎಸ್​ನಿಂದ ಬಂದವರು ಸಕ್ಕರೆ ಇದ್ದಂತೆ. ಈ‌ಮೂರನ್ನು ಸೇರಿಸಿ ಯಡಿಯೂರಪ್ಪ ಕಾಫಿ ಮಾಡಿದ್ದಾರೆ. ಎಲ್ಲವೂ ಒಂದಕ್ಕೊಂದು ಬೆರೆತು ಹೋಗಿದೆ. ಈಗ ಅದನ್ನು ಯಾವುದೇ ಕಾರಣಕ್ಕೂ ಬೇರೆ ಬೇರೆ ಮಾಡಲು ಸಾಧ್ಯವಿಲ್ಲ ಎಂದು ಬಿಜೆಪಿ ಶಾಸಕ ಎಂ.ಕೃಷ್ಣಪ್ಪ ಯಶವಂತಪುರ ಪ್ರಚಾರದ ವೇಳೆ ಹೇಳಿದರು.

ಯಶವಂತಪುರ ಉಪಚುನಾವಣಾ ಪ್ರಚಾರದ ವೇಳೆ ಶಾಸಕ ಎಂ.ಕೃಷ್ಣಪ್ಪ ಮಾತನಾಡಿದರು.

ಸಿದ್ದರಾಮಯ್ಯ ವಿರುದ್ಧ ಶಾಸಕ ಎಂ.ಕೃಷ್ಣಪ್ಪ ವಾಗ್ದಾಳಿ ನಡೆಸಿ, ಬಿಜೆಪಿ ಸರ್ಕಾರವನ್ನು ಗಟ್ಟಿ ಮಾಡಲು ಸ್ವತಾಃ ಸಿದ್ದರಾಮಯ್ಯ ಪ್ರಯತ್ನಿಸುತ್ತಿದ್ದಾರೆ. ಯಡಿಯೂರಪ್ಪ ಸಿಎಂ ಆಗಿರಲಿ ನಾನು ಪ್ರತಿಪಕ್ಷ ನಾಯಕನ ಸ್ಥಾನದಲ್ಲಿ ಗಟ್ಟಿಯಾಗಿರ್ತೀನಿ ಎಂದು ಸಿದ್ದರಾಮಯ್ಯ ಹೊರಟಿದ್ದಾರೆ. ಇನ್ನು ಜೆಡಿಎಸ್​ನವರಿಗೆ ಚುನಾವಣೆ ಬಂದ್ರೆ ಮಾತ್ರ ಕಣ್ಣೀರು ಬರುತ್ತದೆ. ಜನ ಎಷ್ಟೇ ಕಷ್ಟ ಪಡುತ್ತಿದ್ದರೂ ಅವರು ಕಣ್ಣೀರು ಹಾಕಲ್ಲ ಎಂದು ಹೇಳಿದರು.

ABOUT THE AUTHOR

...view details