ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ನ ಕಮಲಾನಗರದಲ್ಲಿ ಕಟ್ಟಡದ ತಳಪಾಯ ಕುಸಿದಿದ್ದು, ಕಟ್ಟಡ ತೆರವಿಗೆ ಬಿಬಿಎಂಪಿ ಮುಂದಾಗಿದೆ. ಸ್ಥಳಕ್ಕೆ ಅಧಿಕಾರಿಗಳು, ಸ್ಥಳೀಯ ಶಾಸಕ ಗೋಪಾಲಯ್ಯ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಬೆಂಗಳೂರಿನಲ್ಲಿ ವಾಲಿದ ಮತ್ತೊಂದು ಕಟ್ಟಡ, ಬೇರೆ ಕಟ್ಟಡಕ್ಕೆ ಹಾನಿಯಾಗದಂತೆ ತೆರವು ಕಾರ್ಯ: ಸಚಿವ ಕೆ.ಗೋಪಾಲಯ್ಯ - ಮಹಾಲಕ್ಷ್ಮಿ ಲೇಔಟ್
ಮಹಾಲಕ್ಷ್ಮಿ ಲೇಔಟ್ನ ಕಮಲಾನಗರದಲ್ಲಿ ಕಟ್ಟಡದ ತಳಪಾಯ ಕುಸಿದ ಸ್ಥಳಕ್ಕೆ ಶಾಸಕ ಕೆ.ಗೋಪಾಲಯ್ಯ ಭೇಟಿ ನೀಡಿ ಪರಿಶೀಲಿಸಿದರು.
ಕೆ.ಗೋಪಾಲಯ್ಯ
ಈ ವೇಳೆ ಮಾತನಾಡಿದ ಸಚಿವರು, ಕಟ್ಟಡದಲ್ಲಿ ವಾಸವಾಗಿದ್ದವರನ್ನು ರಾತ್ರಿಯೇ ಸುರಕ್ಷಿತ ಜಾಗಕ್ಕೆ ರವಾನಿಸಲಾಗಿದೆ. ಈಗಾಗಲೇ ಕಟ್ಟಡ ತೆರವಿಗೆ ಯಂತ್ರಗಳು ಆಗಮಿಸಿದ್ದು, ಕಟ್ಟಡ ತೆರವು ಕಾರ್ಯಾರಂಭ ಮಾಡುತ್ತಿವೆ ಎಂದು ತಿಳಿಸಿದರು.
ಕಟ್ಟಡ ಅಪಾಯದ ಸ್ಥಿತಿಯಲ್ಲಿದೆ ಎಂದು ಬಿಬಿಎಂಪಿ ಹಿಂದೆಯೇ ನೋಟಿಸ್ ನೀಡಿತ್ತು. ಮಾಲೀಕರು ಲಕ್ಷಾಂತರ ರೂಪಾಯಿ ತೆಗೆದುಕೊಂಡು ಹೋಗಿ ಈಗ ಪತ್ತೆಯಿಲ್ಲ. ಪೊಲೀಸರು ಅವರ ಹುಡುಕಾಟದಲ್ಲಿದ್ದಾರೆ. ಪೊಲೀಸ್ ಇಲಾಖೆ ಈ ಬಗ್ಗೆ ತನಿಖೆ ಮಾಡಿ ಕ್ರಮ ಕೈಗೊಳ್ಳುತ್ತಾರೆ. ಅಕ್ಕಪಕ್ಕದ ಕಟ್ಟಡಗಳಿಗೆ ಹಾನಿ ತಡೆಯುವ ಕೆಲಸ ತಕ್ಷಣ ಆಗಬೇಕಿದೆ ಎಂದರು.
Last Updated : Oct 13, 2021, 11:23 AM IST