ಬೆಂಗಳೂರು: ಹಲವರು ತಮ್ಮ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕೊರೊನಾ ತಪಾಸಣೆಗೆ ಒಳಪಟ್ಟಿದ್ದು, ಫಲಿತಾಂಶ ನೆಗೆಟಿವ್ ಬಂದಿದೆ ಎಂದು ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ.
ಕೊರೊನಾ ತಪಾಸಣೆಯಲ್ಲಿ ಪಾಸಾದ್ರು ಶಾಸಕ ಜಮೀರ್ ಅಹಮದ್ ಖಾನ್.. - MLA Jameer Ahmed Khan
ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ಕೊರೋನಾ ತಪಾಸಣೆಗೆ ಒಳಪಟ್ಟಿದ್ದು, ಫಲಿತಾಂಶ ನೆಗೆಟಿವ್ ಬಂದಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಕಳೆದ ಕೆಲವು ದಿನಗಳಿಂದ ನಾನು ಸಾಕಷ್ಟು ಸಂಚಾರ ಮಾಡಿದ್ದೇನೆ, ಜನರ ಒಡನಾಟದಲ್ಲಿದ್ದೇನೆ. ಮೊನ್ನೆ ಅಗತ್ಯ ಮುಂಜಾಗ್ರತೆಯೊಂದಿಗೆ ಕೊರೊನಾದಿಂದ ಸಾವಿಗೀಡಾದ ಮಹಿಳೆಯ ಅಂತ್ಯ ಸಂಸ್ಕಾರದಲ್ಲೂ ಭಾಗವಹಿಸಿದ್ದೆ. ಕೊರೊನಾವೆಂಬ ಮಾರಕ ಕಾಯಿಲೆ ಯಾರಿಗೆ ಬೇಕಾದರೂ ಹಬ್ಬುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಜನರ ಕಷ್ಟಕ್ಕೆ ಸ್ಪಂದಿಸುವುದಷ್ಟೇ ಅಲ್ಲ, ನನ್ನಿಂದ ಇತರರಿಗೆ ಬೇರೆ ಯಾವ ರೀತಿಯ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಸ್ವತಃ ನಾನೇ ಕೊರೊನಾ ಪರೀಕ್ಷೆ ಮಾಡಿಸಿಕೊಂಡಿದ್ದು, ವರದಿಯಲ್ಲಿ ನೆಗೆಟಿವ್ ಬಂದಿದೆ. ಇದರಿಂದ ಕಷ್ಟದಲ್ಲಿರುವ ಜನರಿಗೆ ಇನ್ನಷ್ಟು ಸಹಾಯ ಮಾಡಲು ನನಗೆ ಬಲ ಬಂದಿದೆ ಎಂದು ಟ್ವೀಟ್ ಮಾಡಿದ್ದಾರೆ.
ಚಾಮರಾಜಪೇಟೆ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಪಾದರಾಯನಪುರ, ಬಾಪೂಜಿನಗರ ಹಾಗೂ ಟಿಪ್ಪು ನಗರಗಳಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಿದ್ದ ಕಾರಣ ಸೀಲ್ಡೌನ್ ವ್ಯಾಪ್ತಿಗೆ ಒಳಪಟ್ಟಿದ್ದು, ಕಳೆದ ವಾರ ದೊಡ್ಡಮಟ್ಟದ ಗಲಾಟೆ ಗದ್ದಲಕ್ಕೆ ಕಾರಣವಾಗಿತ್ತು. ಈ ಎಲ್ಲಾ ಸಂದರ್ಭಗಳಲ್ಲಿ ಕ್ಷೇತ್ರ ವ್ಯಾಪ್ತಿಯಲ್ಲಿ ಹಾಗೂ ಕೊರೋನಾ ಪೀಡಿತ ಪ್ರದೇಶಗಳಲ್ಲಿ ಓಡಾಡಿದ್ದ ಹಿನ್ನೆಲೆ ಇವರಿಗೂ ಸೋಂಕು ತಗುಲಿದೆ ಎಂದು ಕೆಲವರು ಆರೋಪಿಸಿದ್ದರು. ಈ ಹಿನ್ನೆಲೆ ವೈಯಕ್ತಿಕವಾಗಿಯೂ ಆತಂಕಕ್ಕೆ ಒಳಗಾಗಿದ್ದ ಜಮೀರ್ ಅಹಮದ್ ತಪಾಸಣೆಗೆ ಒಳಪಟ್ಟು ಇದೀಗ ನಿರಾಳರಾಗಿದ್ದಾರೆ.