ಕರ್ನಾಟಕ

karnataka

ETV Bharat / state

ಸಮಾಜ ವಿಭಜನೆ ಮಾಡುತ್ತಿರುವುದು ಕಾಂಗ್ರೆಸ್ : ಕೈ ನಾಯಕರಿಗೆ ಸಿಟಿ ರವಿ ತಿರುಗೇಟು - ಬೆಂಗಳೂರಿನಲ್ಲಿ ಕಾಂಗ್ರೆಸ್ ನಾಯಕರ ವಿರುದ್ಧ ಸಿ ಟಿ ರವಿ ಹೇಳಿಕೆ

ಮೋದಿ ನಮ್ಮ ಪಕ್ಷದ ಅಗ್ರಗಣ್ಯರು. ಅವರನ್ನು ಬೆಳೆಸಿದ ಕೀರ್ತಿ ಬಿಜೆಪಿಯದ್ದಾಗಿದೆ. ಪ್ರಜಾಪ್ರಭುತ್ವದಲ್ಲಿ ನಂಬಿಕೆ, ಸರ್ವಧರ್ಮ ಸಮನ್ವಯ, ನಿಷ್ಟೆಯಿಂದ ಕೆಲಸ ಮಾಡಿಕೊಂಡು ಬಂದಿದೆ. ಆಂತರಿಕ ಪ್ರಜಾಪ್ರಭುತ್ವ ಹೊಂದಿರುವ ಪಕ್ಷವಾಗಿದೆ, ಆದರೂ ಚುನಾಯಿತ ಪಕ್ಷವನ್ನು ಕಾಂಗ್ರೆಸ್ ಟೀಕಿಸುತ್ತಿದೆ. ಆಂತರಿಕ ಪ್ರಜಾಪ್ರಭುತ್ವ ಇಲ್ಲ ಅಂತಾ ಆರೋಪಿಸುತ್ತಿದೆ..

ಕೈ ನಾಯಕರಿಗೆ ಸಿಟಿ ರವಿ ತಿರುಗೇಟು
ಕೈ ನಾಯಕರಿಗೆ ಸಿಟಿ ರವಿ ತಿರುಗೇಟು

By

Published : Apr 6, 2022, 12:26 PM IST

ಬೆಂಗಳೂರು :ಮತ ಬ್ಯಾಂಕಿ​ಗಾಗಿ ಸಮಾಜ ಒಡೆಯುವ ಕೆಲಸ ಮಾಡಿದ್ದು ಕಾಂಗ್ರೆಸ್. ಶಾದಿಭಾಗ್ಯ ಯೋಜನೆ ತಂದು ಸಮಾಜ ಒಡೆದಿದ್ದು ಸಿದ್ದರಾಮಯ್ಯ ಎಂದು ಕಾಂಗ್ರೆಸ್ ನಾಯಕರಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ತಿರುಗೇಟು ನೀಡಿದ್ದಾರೆ. ಈ ಕುರಿತು ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಕೋರ್ಟ್ ಆದೇಶಗಳ ಪಾಲನೆ ಆಗಲಿ : ಧ್ವನಿವರ್ಧಕಗಳ ಶಬ್ಧದ ಪ್ರಮಾಣ ಬಗ್ಗೆ ಕೋರ್ಟ್ ಆದೇಶಗಳಿವೆ. ಕೋರ್ಟ್ ಆದೇಶಗಳನ್ನು ಎಲ್ಲರೂ ಪಾಲಿಸಲಿ. ನಾವು ನ್ಯಾಯಾಲಯದ ಪರ, ಪರಿಸರ ಇಲಾಖೆಯ ಪರ. ನಾನು ಈ ವಿಷಯದಲ್ಲಿ ಮಸೀದಿ ವಿರುದ್ಧವಾಗಲಿ, ದೇವಸ್ಥಾನಗಳ ಪರವಾಗಲಿ ಇಲ್ಲ. ಆದರೆ, ಹೈಕೋರ್ಟ್ ಆದೇಶಗಳ ಪಾಲನೆ ಆಗಲಿ.

ಟೀಕೆ ಮಾಡುವ ಇತರೆ ಪಕ್ಷಗಳು ಕೋರ್ಟ್ ಆದೇಶದ ಪರ ಇದ್ದಾರೋ?, ಅಥವಾ ಒಂದು ಸಮುದಾಯದ ಪರ ಇದ್ದಾರೋ ಹೇಳಲಿ. ನ್ಯಾಯಾಲಯದ ತೀರ್ಪುನ್ನು ವಿರೋಧ ಮಾಡಬಾರದು. ಈ ಮೂಲಕ ಮತಾಂಧತೆಯ ಭೂತ ಯಾರಿಗೆ ಹೊಕ್ಕಿದೆ ಎಂದು ಗೊತ್ತಾಗುತ್ತದೆ ಎಂದು ತಿರುಗೇಟು ನೀಡಿದರು.

ಸಮಾಜ ಒಡೆಯುವ ಕೆಲಸ ಮಾಡಿದ್ದು ಕಾಂಗ್ರೆಸ್ : ಹಿಜಾಬ್ ಬಗ್ಗೆ ಧನಿ ಎತ್ತುವವರಿಗೆ ಪಾಠ ಹೇಳಬೇಕಿತ್ತು. ನಾವಂತೂ ಸಮವಸ್ತ್ರದ ಪರ ನಿಂತಿದ್ದೇವೆ. ಮತಬ್ಯಾಂಕಿಗೆ ಆಕರ್ಷಿತರಾಗಿರೋರು ಕಾಂಗ್ರೆಸ್‌ನವರು. ನಮಗೆ ಜಾತಿ ಒಡೆಯುವ ಅವಶ್ಯಕತೆ ಇಲ್ಲ. ಅವರು ಪ್ರಮಾಣಿಕವಾಗಿ ಇದ್ದರೆ, ಹಿಜಾಬ್ ಸಂಘರ್ಷಕ್ಕೆ ಕಾನೂನಿನ ನೆರವು ಒದಗಿಸಿದ್ದವರು ಯಾರು ಅಂತಾ ಹೇಳಲಿ.

ಎಲ್ಲ ವಕೀಲರು ಕಾಂಗ್ರೆಸ್ ಬೆಂಬಲಿತರೇ ಇದ್ದರು, ಕಾಂಗ್ರೆಸ್ ನಿಲುವು ಯಾವ ಕಡೆ..? ನಮ್ಮ ನಿಲುವು ಸಮವಸ್ತ್ರದ ಕಡೆ, ಕಾಂಗ್ರೆಸ್​ನ ನಿಲುವು ಸ್ಪಷ್ಟ ಪಡಿಸಲಿ. ಮತ ಬ್ಯಾಂಕಿಗಾಗಿ ಸಮಾಜ ಒಡೆಯುವ ಕೆಲಸ ಮಾಡಿದ್ದು ಕಾಂಗ್ರೆಸ್. ಶಾದಿಭಾಗ್ಯ ಯೋಜನೆ ತಂದು ಸಮಾಜ ಒಡೆದಿದ್ದು ಸಿದ್ದರಾಮಯ್ಯ ಎಂದು ಟೀಕಿಸಿದರು.

ಬಿಜೆಪಿ ಸಂಸ್ಥಾಪನಾ ದಿನ ಆಚರಣೆ :ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಬಿಜೆಪಿ ಸಂಸ್ಥಾಪನಾ ದಿನಾಚರಣೆ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಸಿ ಟಿ ರವಿ, 43ನೇ ಸಂಸ್ಥಾಪನಾ ಆಚರಣೆ ಮಾಡುತ್ತಿದ್ದೇವೆ. 1951ರಲ್ಲಿ ರಾಷ್ಟ್ರಹಿತಕ್ಕೆ ಒಂದು ಪಕ್ಷ ಅವಶ್ಯಕತೆ ಇದೆ ಎಂದು, 10 ಜನ ಸ್ವಯಂಸೇವಕರು ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ನೇತೃತ್ವದಲ್ಲಿ ಪಕ್ಷ ಪ್ರಾರಂಭ ಮಾಡಿದರು.

ಅಂದು ಅವರನ್ನು ಬಿಟ್ಟು ಬೇರೆ ಯಾರಿಗೂ ಪ್ರಭಾವ ಬೀರುವ ಸಾಮರ್ಥ್ಯ ಇರಲಿಲ್ಲ. ಇವತ್ತು ಜಗತ್ತಿನಲ್ಲಿ 18 ಕೋಟಿ ಸದಸ್ಯತ್ವ ಹೊಂದಿರುವ ಅತಿ ಹೆಚ್ಚು ಎಂಎಲ್ಎ, ಎಂಪಿ, ದಲಿತ ಶಾಸಕರು, ಹಿಂದುಳಿದ ಶಾಸಕರು ಇದ್ದಾರೆ. ಜಗತ್ತಿನ ಅತ್ಯಂತ ಜನಪ್ರಿಯ ನಾಯಕತ್ವವನ್ನು ಹೊಂದಿದ ಪಕ್ಷವಾಗಿದೆ ಎಂದರು.

ಸರ್ವವ್ಯಾಪಿ, ಸರ್ವಸ್ಪರ್ಶಿ ಸರ್ಕಾರ ನಮ್ಮದು : ಮೋದಿ ನಮ್ಮ ಪಕ್ಷದ ಅಗ್ರಗಣ್ಯರು. ಅವರನ್ನು ಬೆಳೆಸಿದ ಕೀರ್ತಿ ಬಿಜೆಪಿಯದ್ದಾಗಿದೆ. ಪ್ರಜಾಪ್ರಭುತ್ವದಲ್ಲಿ ನಂಬಿಕೆ, ಸರ್ವಧರ್ಮ ಸಮನ್ವಯ, ನಿಷ್ಟೆಯಿಂದ ಕೆಲಸ ಮಾಡಿಕೊಂಡು ಬಂದಿದೆ. ಆಂತರಿಕ ಪ್ರಜಾಪ್ರಭುತ್ವ ಹೊಂದಿರುವ ಪಕ್ಷವಾಗಿದೆ, ಆದರೂ ಚುನಾಯಿತ ಪಕ್ಷವನ್ನು ಕಾಂಗ್ರೆಸ್ ಟೀಕಿಸುತ್ತಿದೆ. ಆಂತರಿಕ ಪ್ರಜಾಪ್ರಭುತ್ವ ಇಲ್ಲ ಅಂತಾ ಆರೋಪಿಸುತ್ತಿದೆ.

10 ಲಕ್ಷಕ್ಕೂ ಹೆಚ್ಚು ಜನ ತಮ್ಮ ಮನೆಯ ಮೇಲೆ ಬಿಜೆಪಿ ಧ್ವಜ ಹಾರಿಸುತ್ತಾರೆ. ಶೋಭಾಯಾತ್ರೆ ಮಾಡುತ್ತಾರೆ. ಮೋದಿ ಅವರ ಭಾಷಣವನ್ನು ಕೇಳುವ ಮೂಲಕ ಸಂಸ್ಥಾಪನಾ ದಿನ ಆಚರಣೆ ಮಾಡುತ್ತೇವೆ. ಸರ್ವವ್ಯಾಪಿ, ಸರ್ವಸ್ಪರ್ಶಿ ಸರ್ಕಾರ ನಮ್ಮದು. ದೇಶ ಮೊದಲು ಎಂಬುದು ನಮ್ಮ ಕೆಲಸ. ಸಾವಿರಾರು ಜನ ಸಮರ್ಪಿಸಿಕೊಂಡು ಕೆಲಸ ಮಾಡುತ್ತಿದ್ದಾರೆ‌, ಎಲ್ಲರಿಗೂ ಅನಂತ ನಮನಗಳು ಹಾಗೂ ಬಿಜೆಪಿ ಸಂಸ್ಥಾಪನಾ ದಿನದ ಶುಭಾಶಯಗಳು ಎಂದರು.

ABOUT THE AUTHOR

...view details