ಕರ್ನಾಟಕ

karnataka

ಅರುಣ್​ ಸಿಂಗ್​ ಭೇಟಿಗೆ ಆಗಮಿಸದ ಶಾಸಕ ಅರವಿಂದ್​ ಬೆಲ್ಲದ್​: ಮುಂದಿನ ಭೇಟಿ ಅವಕಾಶ ದಿಲ್ಲಿಯಲ್ಲೇ!

By

Published : Jun 17, 2021, 6:47 PM IST

ಅರುಣ್ ಸಿಂಗ್ ನಾಳೆಯೂ ಬೆಂಗಳೂರಿನಲ್ಲಿಯೇ ಇರಲಿದ್ದಾರೆ. ಆದರೆ ಯಾವುದೇ ಶಾಸಕರನ್ನು ಭೇಟಿಯಾಗುವ ಕಾರ್ಯಕ್ರಮ ಇಲ್ಲ. ಈ ಹಿನ್ನೆಲೆ ರಾಜ್ಯದಲ್ಲಿ ಅರುಣ್ ಸಿಂಗ್​ರನ್ನು ಭೇಟಿಯಾಗುವ ಅವಕಾಶದಿಂದ ಬೆಲ್ಲದ್​ ವಂಚಿತರಾಗಿದ್ದಾರೆ. ಇದೀಗ ಅವರು ಏನೇ ಮಾತುಕತೆ ನಡೆಸಬೇಕಿದ್ದರೂ, ತಮ್ಮ ಅಹವಾಲು ಸಲ್ಲಿಕೆ ಮಾಡಬೇಕಿದ್ದರೆ ದಿಲ್ಲಿಗೆ ತೆರಳಬೇಕಾಗಿದೆ. ಅರುಣ್ ಸಿಂಗ್ ಅವರ ಭೇಟಿಗೆ ಕಾಲಾವಕಾಶ ಪಡೆದು ಅವರು ಮುಂದಿನ ನಡೆ ಇಡಬೇಕಾಗಿದೆ.

MLA Arvind Bellada and Arun Singh
ಶಾಸಕ ಅರವಿಂದ ಬೆಲ್ಲದ ಹಾಗೂ ಅರುಣ್ ಸಿಂಗ್​

ಬೆಂಗಳೂರು: ಸಿಎಂ ವಿರುದ್ಧ ಮುನಿಸಿಕೊಂಡಿರುವ ರೆಬೆಲ್​ ಶಾಸಕ ಅರವಿಂದ್​ ಬೆಲ್ಲದ್​ ತಮಗೆ ನೀಡಿದ ಸಮಯದಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ರನ್ನು ಭೇಟಿ ಆಗದ ಹಿನ್ನೆಲೆ ಮುಂದಿನ ಮಾತುಕತೆಗೆ ದಿಲ್ಲಿಗೆ ತೆರಳುವ ಅನಿವಾರ್ಯತೆ ಎದುರಾಗಿದೆ.

ಬೆಂಗಳೂರಿನ ಮಲ್ಲೇಶ್ವರ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಇಂದು ಶಾಸಕರ ಜತೆ ಪ್ರತ್ಯೇಕವಾಗಿ ಸಮಾಲೋಚನೆ ನಡೆಸಿದ್ದಾರೆ. ನಿಗದಿಯಂತೆ ಬೆಲ್ಲದ್​ ಸಂಜೆ 4:30 ಕ್ಕೆ ಭೇಟಿಗೆ ಕಾಲಾವಕಾಶ ನೀಡಲಾಗಿತ್ತು. 1 ಗಂಟೆ ಹೆಚ್ಚುವರಿಯಾಗಿ ಕಾದ ನಂತರವೂ ಅವರು ಬಾರದ ಹಿನ್ನೆಲೆ, ಇವರು ತಮ್ಮ ಅಭಿಪ್ರಾಯ ತಿಳಿಸುವ ಅವಕಾಶ ಕೈತಪ್ಪಿದೆ.

ಅರುಣ್ ಸಿಂಗ್ ನಾಳೆಯೂ ಬೆಂಗಳೂರಿನಲ್ಲಿಯೇ ಇರಲಿದ್ದಾರೆ. ಆದರೆ ಯಾವುದೇ ಶಾಸಕರನ್ನು ಭೇಟಿಯಾಗುವ ಕಾರ್ಯಕ್ರಮ ಇಲ್ಲ. ಈ ಹಿನ್ನೆಲೆ ರಾಜ್ಯದಲ್ಲಿ ಅರುಣ್ ಸಿಂಗ್​ರನ್ನು ಭೇಟಿಯಾಗುವ ಅವಕಾಶದಿಂದ ಬೆಲ್ಲದ್​ ವಂಚಿತರಾಗಿದ್ದಾರೆ. ಇದೀಗ ಅವರು ಏನೇ ಮಾತುಕತೆ ನಡೆಸಬೇಕಿದ್ದರೂ, ತಮ್ಮ ಅಹವಾಲು ಸಲ್ಲಿಕೆ ಮಾಡಬೇಕಿದ್ದರೆ ದಿಲ್ಲಿಗೆ ತೆರಳಬೇಕಾಗಿದೆ. ಅರುಣ್ ಸಿಂಗ್ ಅವರ ಭೇಟಿಗೆ ಕಾಲಾವಕಾಶ ಪಡೆದು ಅವರು ಮುಂದಿನ ನಡೆ ಇಡಬೇಕಾಗಿದೆ.

ಅರುಣ್ ಸಿಂಗ್ ಪ್ರತ್ಯೇಕವಾಗಿ ಸಮಾಲೋಚನೆ: ಇಂದು ರಾಜ್ಯ ಬಿಜೆಪಿ ಕಚೇರಿಯಲ್ಲಿ 40ಕ್ಕೂ ಹೆಚ್ಚು ಸದಸ್ಯರು ಬಂದು ತಮ್ಮ ಮಾಹಿತಿ ಒದಗಿಸುವಂತೆ ಕಾಲಾವಕಾಶ ನೀಡಲಾಗಿತ್ತು. ಬಹುತೇಕ ಎಲ್ಲಾ ಸದಸ್ಯರು ಆಗಮಿಸಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಯಡಿಯೂರಪ್ಪ ನಾಯಕತ್ವ ಮುಂದುವರಿಯಬೇಕೇ ಎಂಬ ವಿಚಾರವೂ ಸೇರಿದಂತೆ ವಿವಿಧ ವಿಚಾರಗಳನ್ನು ಮುಂದಿಟ್ಟುಕೊಂಡು ಶಾಸಕರ ಜೊತೆ ಅರುಣ್ ಸಿಂಗ್ ಪ್ರತ್ಯೇಕವಾಗಿ ಸಮಾಲೋಚನೆ ನಡೆಸಿದ್ದಾರೆ.

ಯಡಿಯೂರಪ್ಪ ವಿರುದ್ಧ ಮುನಿಸಿಕೊಂಡಿರುವ ಸಚಿವ ಸಿಪಿ ಯೋಗೀಶ್ವರ್, ವಿಧಾನಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಅವರು, ತಮ್ಮ ಅಭಿಪ್ರಾಯವನ್ನು ಬೆಳಗ್ಗೆಯೇ ತಿಳಿಸಿ ತೆರಳಿದ್ದಾರೆ. ಆದರೆ ಅರವಿಂದ್​ ಬೆಲ್ಲದ್​ ಮಾತ್ರ ಆಗಮಿಸಲಿಲ್ಲ. ಬದಲಾಗಿ ಕುಮಾರಕೃಪ ಅತಿಥಿಗೃಹದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ, ತಮ್ಮ ದೂರವಾಣಿ ಟ್ಯಾಪ್​ ಆಗಿದೆ ಎಂಬ ಗಂಭೀರ ಆರೋಪವನ್ನು ಸಹ ಮಾಡಿದ್ದಾರೆ. ವಿವಿಧ ವಿಚಾರಗಳ ಪ್ರಸ್ತಾಪ ಆಗಬಹುದು ಎಂಬ ಕಾರಣಕ್ಕೆ ಅವರು ಬಿಜೆಪಿ ಕಚೇರಿಯಲ್ಲಿ ಮುಖ ಮಾಡಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಯತ್ನಾಳ್​ಗೆ ಕರೆ ಇಲ್ಲ : ಇಂದಿನ ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಲು ಆಹ್ವಾನಿತರಾದ ಬಿಜೆಪಿ ಸದಸ್ಯರಲ್ಲಿ ಯಡಿಯೂರಪ್ಪ ವಿರುದ್ಧ ಮುನಿಸಿಕೊಂಡಿರುವ ಪ್ರಮುಖ ನಾಯಕ ಬಸನಗೌಡ ಪಾಟೀಲ್ ಯತ್ನಾಳ್​ಗೆ ಅವಕಾಶ ನೀಡಿರಲಿಲ್ಲ. ಯಡಿಯೂರಪ್ಪ ವಿರೋಧಿ ಬಣದಲ್ಲಿ ಗುರುತಿಸಿಕೊಂಡ ಪ್ರಮುಖ ನಾಲ್ವರಲ್ಲಿ ಕೇವಲ ಮೂವರಿಗೆ ಆಗಮಿಸಲು ಅವಕಾಶ ನೀಡಲಾಗಿತ್ತು. ಯತ್ನಾಳ್​ಗೆ ಈಗಾಗಲೇ ಪಕ್ಷದಿಂದ ನೋಟಿಸ್ ಜಾರಿಗೊಳಿಸಲಾಗಿದ್ದು, ಅವರು ಇದಕ್ಕೆ ಉತ್ತರಿಸುವವರೆಗೂ ಯಾವುದೇ ಪ್ರಮುಖ ವಿಚಾರಗಳ ಚರ್ಚೆಗೆ ಅವರನ್ನು ಆಹ್ವಾನಿಸುವ ಸಾಧ್ಯತೆ ಕಡಿಮೆ ಇದೆ.

ಹೆಚ್​ ವಿಶ್ವನಾಥ್ ಹಾಗೂ ಯೋಗೀಶ್ವರ್ ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದರೆ, ಶಾಸಕ ಬೆಲ್ಲದ್​ ಮಾತ್ರ ಆಗಮಿಸದೆ ಪಕ್ಷದ ಕಚೇರಿಯಿಂದ ದೂರವೇ ಉಳಿದಿದ್ದಾರೆ. ಈಗಾಗಲೇ ಮೂರು ದಿನಗಳ ಹಿಂದೆ ದಿಲ್ಲಿಗೆ ತೆರಳಿದ್ದ ಅವರು ಅವರನ್ನು ಭೇಟಿಯಾಗಿ ಒಂದಿಷ್ಟು ಮಾಹಿತಿ ನೀಡಿ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಆಗಮಿಸಿಲ್ಲ ಎಂದು ಹೇಳಲಾಗುತ್ತಿದೆ. ತಮ್ಮ ಅಹವಾಲು ಸಲ್ಲಿಕೆಗೆ ಅವರು ದಿಲ್ಲಿಗೆ ತೆರಳುತ್ತಾರೆ ಅಥವಾ ಇಷ್ಟಕ್ಕೆ ತಟಸ್ಥವಾಗಿ ಉಳಿಯುತ್ತಾರಾ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.

ಓದಿ:ಹೊಸನಗರದಲ್ಲಿ ದಾಖಲೆಯ 320 ಮಿ.ಮೀ ಮಳೆ: ಜೋಗದಲ್ಲಿ ಧುಮ್ಮಿಕ್ಕುತ್ತಿದ್ದಾಳೆ ಶರಾವತಿ

ABOUT THE AUTHOR

...view details