ಬೆಂಗಳೂರು:ರಾಜ್ಯದಲ್ಲಿ ಪಕ್ಷ ಹಾಗೂ ಸರ್ಕಾರದಲ್ಲಿ ಶೀಘ್ರದಲ್ಲೆ ಸಣ್ಣಪುಟ್ಟ ರಿಪೇರಿ ಕಾರ್ಯ ನಡೆಯಲಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ನಾಯಕತ್ವ ಗಟ್ಟಿಗೊಳಿಸುವುದನ್ನು ಹೈಕಮಾಂಡ್ ತೀರ್ಮಾನಿಸಲಿದೆ. ಕೆಲವೊಂದು ರಿಪೇರಿ ಆಗಬೇಕಾಗಿದೆ. ಪಕ್ಷ ಸಂಘಟನೆ ಸೇರಿದಂತೆ ಕೆಲ ರಿಪೇರಿ ಆಗಬೇಕಾಗಿದೆ ಎಂದು ಅವರು ನುಡಿದರು.
ಸಚಿವ ನಿರಾಣಿ ದೆಹಲಿ ಪ್ರವಾಸ ಹೋಗಿರುವ ವಿಚಾರ ಕುರಿತು ಪ್ರತಿಕ್ರಿಯಿಸಿ, ಅವರು ಹೋಗ್ತಾರೆ, ಬರುತ್ತಾರೆ. ಆದರೆ ಹೈಕಮಾಂಡ್ ನಾಯಕರು ಮೊದಲೇ ಇವರ ಎಲ್ಲಾ ಜಾತಕಗಳನ್ನು ತರಿಸಿಕೊಂಡಿರುತ್ತಾರೆ. ಸುಮ್ನೆ ಹೋಗಿ ಗಿಫ್ಟ್ ಕೊಟ್ಟು ಬರಬೇಕು. ವರಿಷ್ಠರಿಗೆ ಎಲ್ಲಾ ಗೊತ್ತಿರುತ್ತದೆ ಎಂದರು.