ಬೆಂಗಳೂರು:ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆಗೆ ಬೆಂಕಿಬಿದ್ದ ಪ್ರಕರಣ ಸಂಬಂಧಪಟ್ಟಂತೆ ಸಿಸಿಬಿ ಅಧಿಕಾರಿಗಳು ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದು, ಈ ಬಗ್ಗೆ ಅಖಂಡ ಶ್ರೀನಿವಾಸ ಮೂರ್ತಿ ಪ್ರತಿಕ್ರಿಯೆ ನೀಡಿದ್ದಾರೆ.
ನಾನು ಶಾಸಕನಾದ ಮೇಲೆ ಯಾವುದೇ ಗಲಾಟೆ ಇರ್ಲಿಲ್ಲ, ಯಾರೋ ಬೇಕಂತ ಕಿಡಿಗೇಡಿಗಳು ಮಾಡಿರೋ ಕೆಲಸ ಅನ್ಕೊಂಡಿದ್ದೆ. ನಾನು ನಮ್ಮ ಕಾರ್ಪೊರೇಟರ್ಗಳು ಹಾಗೂ ಕಾರ್ಯಕರ್ತರ ಜೊತೆ ಅಣ್ಣ ತಮ್ಮಂದಿರಂತೆ ಕೆಲಸ ಮಾಡ್ಕೊಂಡಿದ್ದೆ. ಮಾಜಿ ಮೇಯರ್ ಸಂಪತ್ ಅವರಿಗೆ ನನ್ನ ಮೇಲೆ ಏನೇ ದ್ವೇಷ ಇದ್ರು ನಮ್ಮ ಪಕ್ಷದ ಮುಖಂಡರಾದ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್, ಜಮೀರ್ ಬಳಿ ಹೇಳಬೇಕಿತ್ತು. ಆದರೆ ಈ ರೀತಿ ಗಲಭೆ ಮಾಡುವ ಅವಶ್ಯಕತೆ ಇರಲಿಲ್ಲ ಎಂದು ಅಖಂಡ ಶ್ರೀನಿವಾಸ ಮೂರ್ತಿ ಹೇಳಿದರು.