ಕರ್ನಾಟಕ

karnataka

ETV Bharat / state

ವೈದ್ಯರ ಮುಷ್ಕರಕ್ಕೆ ಬೆಂಗಳೂರಲ್ಲಿ ಮಿಶ್ರ ಪ್ರತಿಕ್ರಿಯೆ - ನ್ಯಾಷನಲ್​ ಮೆಡಿಕಲ್​ ಕಮಿಷನ್​ ಮಸೂದೆ

ಭಾರತೀಯ ವೈದ್ಯಕೀಯ ಸಂಘ ಇಂದು ಕರೆ ನೀಡಿದ್ದ ಬಂದ್​​ಗೆ ಬೆಂಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಿಮ್ಸ್, ಎಂ.ಎಸ್.​ ರಾಮಯ್ಯ, ಫೋಟಿಸ್​, ಅಪೋಲೊ ಆಸ್ಪತ್ರೆ ಸೇರಿದಂತೆ ಕೊಲಂಬಿಯಾ ಏಷ್ಯಾ, ಪೀಪಲ್ ಟ್ರೀ​ ಆಸ್ಪತ್ರೆಯಲ್ಲಿ ಎಂದಿನಂತೆ ಒಪಿಡಿ ತೆರೆದಿತ್ತು.

ಕೆಲಸಕ್ಕೆ ಹಾಜರ್ ಆದ ವೈದ್ಯರು

By

Published : Jul 31, 2019, 6:16 PM IST

ಬೆಂಗಳೂರು:ಕೇಂದ್ರ ಸರ್ಕಾರದ ನ್ಯಾಷನಲ್​ ಮೆಡಿಕಲ್​ ಕಮಿಷನ್​ ಮಸೂದೆಗೆ ವೈದ್ಯಕೀಯ ವಲಯದಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರದ ಗಮನ ಸೆಳೆಯಲು ಭಾರತೀಯ ವೈದ್ಯಕೀಯ ಸಂಘ ಇಂದು ರಾಷ್ಟ್ರವ್ಯಾಪಿ ಹೊರರೋಗಿಗಳ ಸೇವೆ ಸ್ಥಗಿತಗೊಳಿಸಿ ಮುಷ್ಕರಕ್ಕೆ ಕರೆ ನೀಡಿತ್ತು. ಆದರೆ ಈ ಮುಷ್ಕರಕ್ಕೆ ಬೆಂಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕೆಲವು ಕಡೆ ಆಸ್ಪತ್ರೆಗಳಲ್ಲಿ ವೈದ್ಯರು ಎಂದಿನಂತೆ ಕೆಲಸಕ್ಕೆ ಹಾಜರ್​ ಆಗಿದ್ದರು. ಕಿಮ್ಸ್, ಎಂ.ಎಸ್.​ ರಾಮಯ್ಯ, ಫೋಟಿಸ್​, ಅಪೋಲೊ ಆಸ್ಪತ್ರೆ ಸೇರಿದಂತೆ ಕೊಲಂಬಿಯಾ ಏಷ್ಯಾ, ಪೀಪಲ್ ಟ್ರೀ​ ಆಸ್ಪತ್ರೆಯಲ್ಲಿ ಎಂದಿನಂತೆ ಒಪಿಡಿ ತೆರೆದಿತ್ತು. ಎನ್​​ಎಂಸಿ ಮಸೂದೆಯ ಸಂಬಂಧ ಸಾಕಷ್ಟು ಸಲ ವೈದ್ಯರು ಪ್ರತಿಭಟನೆ ನಡೆಸಿದ್ದರು. ಆದರೆ ಈ ಸಲವೂ ಅಂದುಕೊಂಡಂತೆ ಪ್ರತಿಕ್ರಿಯೆಗೆ ಸರಿಯಾದ ಬೆಂಬಲ ಸಿಗದೇ ಇರೋದು ಕಂಡು ಬಂದಿದೆ.‌

ವೈದ್ಯರ ಮುಷ್ಕರಕ್ಕೆ ಸಿಲಿಕಾನ್​​ ಸಿಟಿಯಲ್ಲಿ ಮಿಶ್ರ ಪ್ರತಿಕ್ರಿಯೆ

ಸತತ ಎರಡು ವರ್ಷಗಳಿಂದ ಈ ಕಾಯ್ದೆಯನ್ನು ವಿರೋಧಿಸುತ್ತ ಬಂದಿದ್ದೇವೆ. ದೆಹಲಿಯಲ್ಲಿ ಸಾಕಷ್ಟು ಸಲ ಸಭೆಗಳು ನಡೆದು, ಕಾಯ್ದೆಯಲ್ಲಿರುವ ನ್ಯೂನ್ಯತೆಗಳ ಬಗ್ಗೆ ಚರ್ಚೆ ನಡೆಸಿದರೂ ಯಾವುದೇ ಉಪಯೋಗವಾಗಿಲ್ಲ ಅಂತ ಐಎಂಎ ಸೆಕ್ರೆಟರಿ ಡಾ. ಶ್ರೀನಿವಾಸ್ ತಿಳಿಸಿದರು.

ABOUT THE AUTHOR

...view details