ದೇವನಹಳ್ಳಿ: ಅವರು ವಿಶೇಷಚೇತನರು. ಎಲ್ಲರಂತೆ ಎಲ್ಲ ಅಂಗಾಂಗಳು ಸದೃಢವಾಗಿಲ್ಲದಿದ್ದರೂ ಯಾರಿಗೇನು ಕಡಿಮೆ ಇಲ್ಲದಂತೆ ಬದುಕುತ್ತಿದ್ದಾರೆ. ಅಂಗವೈಕಲ್ಯ ಎಂದು ಕುಗ್ಗಿ ಹೋಗುವವರಿಗೆ ಇವರೇ ನಿಜಕ್ಕೂ ಪ್ರೇರಣೆ.
ಇಂದು ವಿಶ್ವ ವಿಶೇಷಚೇತನರ ದಿನ. ಹಲವರು ತಮ್ಮ ಅಂಗವೈಕಲ್ಯವನ್ನು ದೂರಿಕೊಂಡು ನಾಲ್ಕು ಗೋಡೆಗಳ ಮಧ್ಯೆಯೇ ಜೀವನ ಕಳೆಯುತ್ತಾರೆ. ಆದರೆ, ಇವರ ಮಧ್ಯೆ ವಿಭಿನ್ನವಾಗಿ ಕಾಣುವವರು ಈ ನಮ್ಮ ಮಿಟ್ಟಿ ಕೆಫೆಯ ವಿಶೇಷಚೇತನರು. ವಿಶ್ವ ವಿಶೇಷ ಚೇತನರ ದಿನದ ಅಂಗವಾಗಿ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎರಡು ಹೊಸ ಮಿಟ್ಟಿ ಕೆಫೆಗಳು ಆರಂಭವಾಗುತ್ತಿವೆ.
ಇಲ್ಲಿ ಕಾಫಿ, ಟೀ, ಚಾಟ್ಸ್, ಬರ್ಗರ್, ಪಿಜ್ಜಾ ಸೇರಿದಂತೆ ತರಹೇವಾರಿ ತಿನಿಸುಗಳನ್ನು ತಯಾರಿ ಮಾಡುವುದರಿಂದ ಹಿಡಿದು ಸರ್ವ್ ಮಾಡುವವರು ವಿಶೇಷಚೇತನರೇ.! ಕುಕ್ಕಿಂಗ್ ಕೆಲಸನೂ ಅವರದೇ ಕ್ಯಾಷಿಯರ್ ಕೆಲಸನೂ ಅವರದೇ. ಇಂತಹ ವಿಶೇಷ ಚೇತನರಿಗೆ ಹೊಸ ಪ್ರಪಂಚವನ್ನು ಸೃಷ್ಟಿಸಿದೆ ಮಿಟ್ಟಿ ಕೆಫೆ.
ಅಂಗವೈಕಲ್ಯ ಮೆಟ್ಟಿ ನಿಂತ ಸಾಧಕರು : ವಿಶೇಷ ಚೇತನರಿಂದ ನಡೆಯುತ್ತಿದೆ ಮಿಟ್ಟಿ ಕೆಫೆ ದೇಶದಾದ್ಯಂತ 25 ಮಿಟ್ಟಿ ಕೆಫೆಗಳ ಸ್ಥಾಪನೆ: ಕೊಲ್ಕತ್ತಾ ಮೂಲದ ಅಲಿನಾ ಎಂಬ ಯುವತಿ ವಿಶೇಷಚೇತನರಿಗಾಗಿ ಈ ಮಿಟ್ಟಿ ಕೆಫೆ ಪರಿಕಲ್ಪನೆಯನ್ನು ಪ್ರಾರಂಭಿಸಿದರು. ಕಾಲೇಜು ದಿನಗಳಿಂದಲೇ ವಿಶೇಷ ಚೇತನರ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದ ಅಲಿನಾ ಇಂದು ವಿಶೇಷಚೇತನರಿಗಾಗಿ ದೆಹಲಿ, ಮುಂಬೈ, ಕೊಲ್ಕತ್ತಾ, ಬೆಂಗಳೂರು, ಹುಬ್ಬಳ್ಳಿ ಸೇರಿ ಇದುವರೆಗೂ 25 ಮಿಟ್ಟಿ ಕೆಫೆಗಳನ್ನು ಆರಂಭಿಸಿದ್ದಾರೆ. ಇಂದು ವಿಶ್ವವಿಶೇಷಚೇತನರ ದಿನದ ಅಂಗವಾಗಿ ಕೇಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎರಡು ಹೊಸ ಮಿಟ್ಟಿ ಕೆಫೆಗಳನ್ನೂ ಆರಂಭಿಸಿದ್ದಾರೆ.
ಮಿಟ್ಟಿ ಕೆಫೆಗಳಲ್ಲಿ ಕೆಲಸ ಮಾಡುವ ವಿಶೇಷ ಚೇತನರು: ದೇಶದ ನಾನಾ ಮೂಲೆಗಳಲ್ಲಿರುವ 25 ಮಿಟ್ಟಿ ಕೆಫೆಗಳಲ್ಲಿ 250ಕ್ಕೂ ಹೆಚ್ಚು ಮಂದಿ ವಿಶೇಷಚೇತನರು ಕೆಲಸ ಮಾಡುತ್ತಿದ್ದಾರೆ. ಎನ್ ಜಿ ಒ ಸಂಸ್ಥೆಗಳು, ಸ್ವಯಂಪ್ರೇರಿತ ಉದ್ಯೋಗ ಹರಸಿ ಬರುವ ವಿಶೇಷಚೇತನರು ಸೇರಿದಂತೆ ರಸ್ತೆ ಬದಿ ಅಸಹಾಯಕರಾಗಿ ಕಾಣೋ ವಿಶೇಷಚೇತನರನ್ನು ಕರೆತಂದು ಅವರಿಗೆ ಒಂದೆರೆಡು ತಿಂಗಳ ಕಾಲ ವಿಶೇಷ ತರಬೇತಿ ನೀಡಿ ಕೆಲಸ ಕೊಡಲಾಗುತ್ತದೆ.
ಪ್ರತಿ ತಿಂಗಳು ಸಂಬಳ ನೀಡಲಾಗುತ್ತದೆ. ಮನೆ, ಕೆಲಸಕ್ಕೆ ಪಿಕ್ ಅಫ್ ಅಂಡ್ ಡ್ರಾಪ್ ಸೌಲಭ್ಯಗಳು, ಸೇರಿದಂತೆ ಪ್ರಮೋಷನ್ ಗಳು ಈ ಕೆಲಸದಲ್ಲಿದೆ. ಎಲ್ಲದಕ್ಕೂ ಹೆಚ್ಚಾಗಿ ವಿಶೇಷಚೇತನರಿಗೊಂದು ವಿಶೇಷ ಗೌರವ ಸಿಗಲಿದೆ. ಇಲ್ಲಿ ವಿಶೇಷ ಚೇತನರು ಯಾರ ಹಂಗೂ ಇಲ್ಲದೆ ಸ್ವಾಭಿಮಾನಿಗಳಾಗಿ ಸಂತೋಷದ ಬದುಕು ಸಾಗಿಸುತ್ತಿದ್ದಾರೆ.
ಸಮಾಜದಲ್ಲಿ ಎಲ್ಲರಂತೆ ಬದುಕಲು ಅವಕಾಶ : ಕಣ್ಣು ಕಾಣದ, ಕಿವಿ ಕೇಳದ, ಕೈ ಕಾಲು ಇರದ, ಸಂಪೂರ್ಣವಾಗಿ ಮಾತನಾಡಲು ಆಗದ ಮಾನಸಿಕವಾಗಿ ಸದೃಢವಾಗಿರವವರನ್ನು ಕೆಲಸ ಮಾಡಲು ಸಮರ್ಥರನ್ನಾಗಿ ಮಾಡಿ ಮಿಟ್ಟಿ ಕೆಫೆಯಲ್ಲಿ ಕೆಲಸ ಮಾಡುವಂತೆ ಮಾಡಲಾಗುತ್ತಿದೆ. ಇದು ಅವರಿಗೆ ಕೆಲಸ ಕೋಡೋ ಉದ್ದೇಶ ಅಲ್ಲ.
ಅವರಿಗೊಂದು ಸಮಾಜದಲ್ಲಿ ಗೌರವ, ಎಲ್ಲರಂತೆ ಅವರನ್ನು ಸಮಾನರನ್ನಾಗಿ ಕಾಣಬೇಕು. ಅವರೂ ಕೂಡ ಸಂತೋಷದಿಂದ ಸಾರ್ಥಕತೆಯ ಜೀವನ ನಡೆಸಬೇಕು ಎನ್ನುವ ಮಹಾದಾಸೆಯಿಂದ ಇದನ್ನು ಪ್ರಾರಂಭಿಸಿದಾಗಿ ಈ ಮಿಟ್ಟಿ ಕೆಫೆ ಸಂಸ್ಥಾಪಕಿ ಅಲಿನಾ ಹೇಳುತ್ತಾರೆ. ಏನೇ ಅಗಲಿ ಎಲ್ಲವೂ ಇದ್ದು ಕೈಲಾಗದವರಂತೆ ಉದ್ಯೋಗ ಇಲ್ಲ ಎಂದು ಕೈ ಕಟ್ಟಿ ಕುಳಿತಿರೋ ಯುವ ಸಮುದಾಯ ಸಮಾಜಕ್ಕೆ ಇವರು ನಿಜಕ್ಕೂ ಸ್ಪೂರ್ತಿಯೇ ಸರಿ.
ಇದನ್ನೂ ಓದಿ :ಸೈನಿಕರೊಂದಿಗೆ ಅಮೃತ ಮಹೋತ್ಸವ ಆಚರಿಸಲು 21 ಸಾವಿರ ಕಿ.ಮೀ ಪ್ರಯಾಣಿಸಿದ ಸಿಲಿಕಾನ್ ಸಿಟಿಯ ಯುವಕ