ಬೆಂಗಳೂರು:ಮಿಟಗಾನಹಳ್ಳಿ ಕ್ವಾರಿಯ ವೈಜ್ಞಾನಿಕ ನಿರ್ವಹಣೆಗೆ ಬಿಬಿಎಂಪಿ ಅಂತಿಮಗೊಳಿಸಿದ್ದ ಗುತ್ತಿಗೆ ರದ್ದು ಮಾಡುವಂತೆ ನಗರಾಭಿವೃದ್ಧಿ ಇಲಾಖೆ ಆದೇಶಿಸಿತ್ತು. ಆದರೆ, ಈ ಬಗ್ಗೆ ಪತ್ರ ಬರೆಯಲಾಗಿದೆ. ಅಲ್ಲದೇ ಏಕಾಏಕಿ ಗುತ್ತಿಗೆ ರದ್ದುಪಡಿಸಿರುವುದು ಸರಿಯಲ್ಲ ಎಂದು ಬಿಬಿಎಂಪಿ ಆಯುಕ್ತ ಬಿ ಹೆಚ್ ಅನಿಲ್ ಕುಮಾರ್ ತಿಳಿಸಿದರು.
ಮಿಟಗಾನಹಳ್ಳಿ ಟೆಂಡರ್ಗೆ ಗ್ರೀನ್ ಸಿಗ್ನಲ್ ಸಿಗದಿದ್ರೆ ಬಿಗಡಾಯಿಸಲಿದೆ ಕಸ ಸಮಸ್ಯೆ!! - ಮಿಟಗಾನಹಳ್ಳಿ
ಮಹಾನಗರ ಪಾಲಿಕೆ ಗೊರಾಂಟ್ಲಾ ಜಿಯೋಸಿಂಥೆಟಿಕ್ಸ್ ಪ್ರೈ.ಲಿ ನ ಪ್ರವೀಣ್ ಕುಮಾರ್ ಎಂಬ ಗುತ್ತಿಗೆದಾರನಿಗೆ ಟೆಂಡರ್ ಅಂತಿಮಗೊಳಿಸಿತ್ತು. ಆದರೆ, ಸರಿಯಾದ ದಾಖಲೆಗಳಿಲ್ಲ ಎಂಬ ಕಾರಣಕ್ಕೆ ನಗರಾಭಿವೃದ್ಧಿ ಇಲಾಖೆ ಟೆಂಡರ್‌ನ ರದ್ದುಪಡಿಸಿದೆ.

ಮಹಾನಗರ ಪಾಲಿಕೆ ಗೊರಾಂಟ್ಲಾ ಜಿಯೋಸಿಂಥೆಟಿಕ್ಸ್ ಪ್ರೈ.ಲಿ ನ ಪ್ರವೀಣ್‌ಕುಮಾರ್ ಎಂಬ ಗುತ್ತಿಗೆದಾರನಿಗೆ ಟೆಂಡರ್ ಅಂತಿಮಗೊಳಿಸಿತ್ತು. ಆದರೆ, ಸರಿಯಾದ ದಾಖಲೆಗಳಿಲ್ಲ ಎಂಬ ಕಾರಣಕ್ಕೆ ನಗರಾಭಿವೃದ್ಧಿ ಇಲಾಖೆ ಟೆಂಡರ್‌ನ ರದ್ದುಪಡಿಸಿದೆ. ನಗರದ ಕಸ ವಿಲೇವಾರಿಗೆ ಬೇರೆ ಅವಕಾಶವಿಲ್ಲ. ಅಲ್ಲದೇ ಹೊಸ ಟೆಂಡರ್ಗೆ ಕಾಲಾವಕಾಶವೂ ಇಲ್ಲ. ಕಸದ ವಿಲೇವಾರಿ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಬಗ್ಗೆ ಇಲಾಖೆಯ ಗಮನಕ್ಕೆ ತರಲಾಗುವುದು ಎಂದರು.
ಮಿಟಗಾನಹಳ್ಳಿ ಬಳಿಯ ತಾತ್ಕಾಲಿಕ ಕ್ವಾರಿಯೂ ಶೇ. 50ರಷ್ಟು ಭರ್ತಿಯಾಗಿದೆ. ಹೀಗಾಗಿ ಹೊಸ ಟೆಂಡರ್ ಸಿದ್ದಪಡಿಸಿದ್ದು ನಗರಾಭಿವೃದ್ಧಿ ಇಲಾಖೆ ಗ್ರೀನ್ ಸಿಗ್ನಲ್ ನೀಡದೇ ಇದ್ದರೆ ನಗರದ ತ್ಯಾಜ್ಯ ಸಮಸ್ಯೆ ಬಿಗಡಾಯಿಸಲಿದೆ ಎಂದರು.