ಕರ್ನಾಟಕ

karnataka

ETV Bharat / state

ಕೊನೆಗೂ ಪತ್ತೆಯಾಯ್ತು ಭಾರಿ ಬೆಲೆಯ ಶ್ವಾನ... ಮಾಲೀಕನ ಮನೆ ಸೇರಿದ್ದು ಹೇಗೆ? - Crore Value Missing dong found in Bengaluru

ಎಲ್ಲೆಡೆ ಸುದ್ದಿಯಾಗಿದ್ದ ಬೆಂಗಳೂರಿನ ಎಂಟು ಕೋಟಿ ಮೌಲ್ಯದ ಶ್ವಾನ ನಾಪತ್ತೆ ಪ್ರಕರಣ ಕೊನೆಗೂ ಸುಖಾಂತ್ಯ ಕಂಡಿದೆ. ಶ್ವಾನವನ್ನು ಪತ್ತೆ ಹಚ್ಚಿರುವ ಹನುಮಂತ ನಗರ ಪೊಲೀಸರು ಮಾಲೀಕನ ಕೈಗೆ ಅದನ್ನು ಒಪ್ಪಿಸಿದ್ದಾರೆ.

Missing dog found in Bengaluru
ಪತ್ತೆಯಾದ ಶ್ವಾನ

By

Published : Dec 23, 2019, 12:45 PM IST

Updated : Dec 23, 2019, 9:43 PM IST

ಬೆಂಗಳೂರು:ಎಲ್ಲೆಡೆ ಸುದ್ದಿಯಾಗಿದ್ದ ಎಂಟು ಕೋಟಿ ಮೌಲ್ಯದ ಶ್ವಾನ ನಾಪತ್ತೆ ಪ್ರಕರಣ ಕೊನೆಗೂ ಸುಖಾಂತ್ಯ ಕಂಡಿದ್ದು, ಶ್ವಾನವನ್ನು ಪತ್ತೆ ಹಚ್ಚಿರುವ ಹನುಮಂತ ನಗರ ಪೊಲೀಸರು ಮಾಲೀಕನ ಕೈಗೆ ಅದನ್ನು ಒಪ್ಪಿಸಿದ್ದಾರೆ.

ಶ್ರೀನಗರದ ನಿವಾಸಿ ಸತೀಶ್​ ಎಂಬುವರ 8 ಕೋಟಿ ಮೌಲ್ಯದ್ದು ಎನ್ನಲಾಗಿರುವ ಅಪರೂಪದ ಅಲಸ್ಕಾನ್ ಮಾಲಾಮೂಟ್ ತಳಿಯ ಶ್ವಾನ ಡಿ.12ರಂದು ಮನೆಯಲ್ಲಿ ಕಟ್ಟಿ ಹಾಕಿದ್ದ ಸ್ಥಳದಿಂದಲೇ ನಾಪತ್ತೆಯಾಗಿತ್ತು. ಈ ಬಗ್ಗೆ ಶ್ವಾನದ ಮಾಲೀಕ ಸತೀಶ್​ ಅವರು ಹನುಮಂತ ನಗರ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದರು. ಅಲ್ಲದೆ ಶ್ವಾನವನ್ನು ಹುಡುಕಿ ಕೊಟ್ಟವರಿಗೆ ಒಂದು ಲಕ್ಷ ಬಹುಮಾನವನ್ನು ಸಹ ಘೋಷಿಸಿದ್ದರು.

ಶ್ವಾನ ನಾಪತ್ತೆ ಬಗ್ಗೆ ದೂರಿನ ಪ್ರತಿ

ಇದನ್ನೂ ಓದಿ: ಕೋಟಿ ಬೆಲೆಬಾಳುವ ಈ ಶ್ವಾನ ಕಾಣೆ: ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಸದ್ಯ ಶ್ವಾನವನ್ನು ಹನುಮಂತ ನಗರ ಪೊಲೀಸರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದು, ಮಾಲೀಕನ ಕೈಗೆ ತಲುಪಿಸಿದ್ದಾರೆ. ಕೋಟಿ ಬೆಲೆ ಬಾಳುವ ಶ್ವಾನವನ್ನು ಸತೀಶ್​ ಪರಿಚಯಸ್ಥ ಆಟೋ ಚಾಲಕನೋರ್ವ ಅಪಹರಿಸಿರುವ ಸಂಶಯವಿದೆ ಎನ್ನಲಾಗಿದೆ. ಆ ಆಟೋ ಚಾಲಕನಿಗಾಗಿ ಪೊಲೀಸರು ಶೋಧ ಮುಂದುವರೆಸಿದ್ದಾರೆ. ಸದ್ಯ ಶ್ವಾನದ ನಾಪತ್ತೆ ಪ್ರಕರಣ ಸುಖಾಂತ್ಯ ಕಂಡಿದೆ.

Last Updated : Dec 23, 2019, 9:43 PM IST

For All Latest Updates

ABOUT THE AUTHOR

...view details