ಬೆಂಗಳೂರು: ಪ್ರೀತಿಸಿ ಮದುವೆಯಾಗಿದ್ದ ದಂಪತಿ ನಡುವಿನ ಮುನಿಸಿಗೆ ಇಬ್ಬರು ಮಕ್ಕಳು ಅನಾಥರಾಗಿ, ಎರಡು ವರ್ಷದ ಬಳಿಕ ಅತ್ತಿಬೆಲೆ ಪೊಲೀಸರ ಶ್ರಮದಿಂದ ಮತ್ತೆ ತಾಯಿ ಮಡಿಲು ಸೇರಿರುವ ಘಟನೆ ನಡೆದಿದೆ.
ಗಂಡ ಹೆಂಡತಿ ಜಗಳವಾಡಿಕೊಂಡು, ಇಬ್ಬರು ಮಕ್ಕಳನ್ನು ಬಿಟ್ಟು ಪರಾರಿಯಾದ ತಂದೆ ಎರಡು ವರ್ಷದ ಬಳಿಕ ತಮ್ಮ ಮಗನನ್ನು ಹುಡುಕಿಕೊಡುವಂತೆ ಅತ್ತಿಬೆಲೆ ಪೊಲೀಸರ ಮೊರೆ ಹೋಗಿದ್ದರು. ಈ ಬಗ್ಗೆ ತನಿಖೆ ಕೈಗೊಂಡ ಅತ್ತಿಬೆಲೆ ಇನ್ಸ್ ಪೆಕ್ಟರ್ ಕೆ ವಿಶ್ವನಾಥ್ ತಂಡ ಮಗುವನ್ನು ಪತ್ತೆ ಮಾಡಿದ್ದಾರೆ.
ಹಿನ್ನೆಲೆ:2012ರಲ್ಲಿ ಮಮತಾರನ್ನು ಪ್ರೀತಿಸಿ ಮದುವೆಯಾಗಿದ್ದ ಬಾಲಮಣಿಗೆ ಇಬ್ಬರು ಮಕ್ಕಳಿದ್ದರು. ಒಂದು ಹೆಣ್ಣುಮಗು ಸ್ವಲ್ಪ ವಿಕಲಾಂಗತೆಯಿಂದ ಕೂಡಿದ್ದು, ಗಂಡು ಮಗು ಆರೋಗ್ಯವಾಗಿತ್ತು. ಬೆಂಗಳೂರಿನ ಜಯನಗರದಲ್ಲಿ ವಾಸವಿದ್ದ ದಂಪತಿ ನಡುವೆ 2018ರಲ್ಲಿ ಜಗಳವಾಗಿದ್ದು, ಈ ಸಂದರ್ಭದಲ್ಲಿ ಮಕ್ಕಳನ್ನು ತಾಯಿ ಬಳಿಯೇ ಬಿಟ್ಟು ಬಾಲಮಣಿ ನಾಪತ್ತೆಯಾಗಿದ್ದರು.