ಬೆಂಗಳೂರು : ಫ್ಯಾಷನ್ ಶೋ ಅಂದ್ರೆ ಅಲ್ಲಿ ಮಾಡೆಲ್‌ಗಳು ಅಂದವಾಗಿರುವ ಬಣ್ಣ ಬಣ್ಣದ ಉಡುಪುಗಳನ್ನ ಧರಿಸಿ ರ್ಯಾಂಪ್ ಮೇಲೆ ಬೆಕ್ಕಿನ ನಡಿಗೆಯಲ್ಲಿ ನಡೆದುಕೊಂಡು ಬರುತ್ತಾರೆ. ಇಂತದ ಫ್ಯಾಶನ್ ಶೋಗಳು ಬೆಂಗಳೂರೆಂಬ ಮಾಯಾನಗರಿಯಲ್ಲಿ ಲೆಕ್ಕವಿಲ್ಲದಷ್ಟು ನಡೆಯುತ್ತವೆ. ಆದ್ರೆ ಕಳೆದ ವರ್ಷ ಇಡೀ ವಿಶ್ವಕ್ಕೆ ವಕ್ಕರಿಸಿದ ಕೋವಿಡ್‌ನಿಂದಾಗಿ ಇಂಹತ ಕಾರ್ಯಕ್ರಮಗಳು ರದ್ದಾಗಿವೆ. ಇದರಿಂದಾಗಿ ಅದೇಷ್ಟೊ ಮಂದಿ ಪ್ರಸಿದ್ಧ ಮಾಡೆಲ್‌ಗಳಾಗಬೇಕೆಂಬ ಕನಸು ಇನ್ನು ನನಸಾಗಿಯೇ ಇಲ್ಲ.
ಇನ್ನು ಮಾಡೆಲ್‌ಗಳಾಗಬೇಕೆಂದು ಕನಸು ಕಂಡು ಅವಕಾಶಕ್ಕಾಗಿ ಕಾಯುತ್ತಿದ್ದವರಿಗೆ ಲಿವಾ ಮಿಸ್ ದೀವಾ 2021 ಅಂತರಾಷ್ಟ್ರೀಯ ಫ್ಯಾಷನ್ ಶೋನಲ್ಲಿ ಪಾಲ್ಗೊಳ್ಳಲು ಸುವರ್ಣಾವಕಾಶ ನೀಡುತ್ತಿದ್ದೆ. ಹೌದು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಲಿವಾ ಮಿಸ್ ದೀವಾ ಫ್ಯಾಷನ್ ಶೋ ತಮ್ಮ 9ನೇ ಆವೃತ್ತಿ ಆರಂಭಿಸುತ್ತಿದೆ. ಈ ಫ್ಯಾಶನ್ ಶೋನಲ್ಲಿ ಭಾಗವಗಿಸಲು ಭಾರತಾದ್ಯಾಂತ ಮಹಿಳೆಯರಿಗೆ ಅವಕಾಶ ನೀಡಿದೆ.
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತೆ. ನಂತರ 4 ಸುತ್ತುಗಳಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಈ 4 ಸುತ್ತುಗಳಾದ ನಂತರ ಒಟ್ಟು 20 ಅವಿವಾಹಿತ ಮಹಿಳೆಯರನ್ನ ಫೈನಲಿಸ್ಟ್‌ಗಳನ್ನಾಗಿ ಮುಂದಿನ ಹಂತಕ್ಕೆ ಆಯ್ಕೆ ಮಾಡಲಾಗುತ್ತೆ. ಆನಂತರ ಈ 20 ಮಹಿಳೆಯರನ್ನ ಮುಂಬೈಗೆ ಕರೆದುಕೊಂಡು ಹೋಗಿ ಅಲ್ಲಿ ಫಿನಾಲೆ ಸ್ಪರ್ಧೆಗೆ ಭಾಗವಹಿಸಲು ಅವಕಾಶ ನೀಡಲಾಗುತ್ತೆ.
ಈ 20 ಮಹಿಳೆಯರಿಗೆ ಫೈನಲ್ ರೌಂಡ್‌ನಲ್ಲಿ ಭಾಗವಹಿಸಲು ಏನೆಲ್ಲ ತಯಾರಿ ನಡೆಸಬೇಕೊ ಎಲ್ಲಾ ರೀತಿಯ ತರಬೇತಿ ನೀಡಲಾಗುತ್ತೆ. ಆಂದ್ರೆ, ರ್ಯಾಂಪ್ ವಾಕ್, ಜಡ್ಜ್‌ಗಳ ಪ್ರಶ್ನೆಗೆ ಹೇಗೆ ಉತ್ತರಿಸಬೇಕು, ಮೇಕಪ್ ಬಗ್ಗೆ ಅರಿವು ಮೂಡಿಸುವುದು, ಹೀಗೆ ನಾನಾ ರೀತಿಯ ತರಬೇತಿಯನ್ನ 20 ಜನ ಮಹಿಳಾ ಫೈನಲಿಸ್ಟ್‌ಗಳು ಪಡೆಯುತ್ತಾರೆ.