ಬೆಂಗಳೂರು:ಹಣ ನೀಡದಿದ್ದರೆ ಪತ್ನಿ ಜತೆಗಿನ ಖಾಸಗಿ ವಿಡಿಯೋ ಲೀಕ್ ಮಾಡುವುದಾಗಿ ಅಪರಿಚಿತನೊಬ್ಬ ಬ್ಲಾಕ್ಮೇಲ್ ಮಾಡುತ್ತಿದ್ದಾನೆಂದು ವ್ಯಕ್ತಿಯೊಬ್ಬರು ಕಲಾಸಿಪಾಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ತನ್ನ ಪತ್ನಿ ಜೊತೆಗಿನ ಖಾಸಗಿ ಕ್ಷಣದ ವಿಡಿಯೋ ಮಾಡಿದ ಪತಿ: ಈಗ ಅದೇ ತಂದಿದೆ ಫಜೀತಿ! - undefined
ಆಗಂತುಕನೊಬ್ಬ ಕರೆ ಮಾಡಿ 3 ಲಕ್ಷ ರೂ. ನೀಡದಿದ್ದರೆ ನೀನು ನಿನ್ನ ಪತ್ನಿ ಜತೆ ಇರುವ ಖಾಸಗಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡುವುದಾಗಿ ಬ್ಲಾಕ್ಮೇಲ್ ಮಾಡುತ್ತಿದ್ದಾನೆಂದು ವ್ಯಕ್ತಿಯೊಬ್ಬರು ಆರೋಪಿಸಿದ್ದಾರೆ.
blakmail
ಆಗಂತುಕನೊಬ್ಬ ಕರೆ ಮಾಡಿ 3 ಲಕ್ಷ ರೂ. ನೀಡದಿದ್ದರೆ ನೀನು ನಿನ್ನ ಪತ್ನಿ ಜತೆ ಇರುವ ಖಾಸಗಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡುವುದಾಗಿ ಬ್ಲಾಕ್ಮೇಲ್ ಮಾಡುತ್ತಿದ್ದಾನೆಂದು ಆರೋಪಿಸಿದ್ದಾರೆ.
ಪತ್ನಿಯ ಒಪ್ಪಿಗೆ ಪಡೆದೇ ಆಕೆಯೊಂದಿಗೆ ನಡೆಸಿದ ರಾಸಲೀಲೆಯನ್ನು ವಿಡಿಯೋ ಮಾಡಿದ್ದಾಗಿ ಹೇಳಿಕೊಂಡಿರುವ ದೂರುದಾರ, ಇದೀಗ ಆಂತಕಗೊಂಡಿದ್ದಾನೆ. ಜು. 18ರಿಂದ ಇಂತಹ ಬೆದರಿಕೆ ಕರೆ ಬರುತ್ತಿವೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾನೆ. ತಮ್ಮ ಬಗ್ಗೆ ತಿಳಿದ ಹತ್ತಿರದವರೇ ಈ ರೀತಿ ಮಾಡುತ್ತಿದ್ದಾರೆ ಎಂದು ಸಂಶಯ ವ್ಯಕ್ತಪಡಿಸಿದ್ದಾನೆ.