ಬೆಂಗಳೂರು:ಕೆಲ ತಿಂಗಳ ಹಿಂದೆಯಷ್ಟೇ ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ, ಶಸ್ತ್ರ ಚಿಕಿತ್ಸೆ ವೇಳೆ ಔಷಧದ ಲೋಪದೋಷದಿಂದ 24 ಜನರು ಕಣ್ಣು ಕಳೆದುಕೊಂಡ ಪ್ರಕರಣದ ನೆನಪು ಇನ್ನು ಮಾಸಿಲ್ಲ. ಸದ್ಯ ಈ ಪ್ರಕರಣದ ನಂತರ ಮಿಂಟೋ ಆಡಳಿತ ಮಂಡಳಿ ಎಚ್ಚೆತ್ತುಕೊಂಡಿದೆ.
ಔಷಧ ಲೋಪದೋಷದಿಂದ ಸುಮಾರು 24 ಜನರು ದೃಷ್ಠಿ ಹೀನರಾದ ಬಳಿಕ ವೈದ್ಯರ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆಯಿಂದ ಗಲಾಟೆ ಕೂಡಾ ಆಗಿತ್ತು. ಕಾರ್ಯಕರ್ತರು ಹಲ್ಲೇ ಮಾಡಿದರು ಅಂತ ವೈದ್ಯರು ವಾರಗಳ ಕಾಲ ಪ್ರತಿಭಟನೆಯನ್ನು ಮಾಡಿದ್ದರು. ಸದ್ಯ ಇಷ್ಟೆಲ್ಲ ಬೆಳವಣಿಗೆ ಆದ ನಂತರ, ಕೆಟ್ಟ ಮೇಲೆ ಬುದ್ಧಿ ಬಂತು ಅನ್ನೋ ಹಾಗೆ ಮಿಂಟೋ ವೈದ್ಯರು ಔಷಧ ತಪಾಸಣೆ ಮಾಡೋಕ್ಕೆ ಶುರು ಮಾಡಿದ್ದಾರೆ.