ಬೆಂಗಳೂರು:ನಮ್ಮಿಂದ ಮತ ಹಾಕಿಸಿಕೊಂಡವರು ಐಎಂಎ ಹಗರಣ ಪ್ರಕರಣದ ವೇಳೆ ನಮ್ಮನ್ನು ಬೀದಿಯಲ್ಲಿ ಬಿಟ್ಟರು. ಯಡಿಯೂರಪ್ಪ ನುಡಿದಂತೆ ನಡೆದು ನಮಗೆ ನ್ಯಾಯ ಕೊಡಲು ಮುಂದಾಗಿದ್ದಾರೆ ಎಂದು ದಾವಣಗೆರೆ ಜಿಲ್ಲಾ ಅಲ್ಪಸಂಖ್ಯಾತ ಮುಖಂಡರು ಹೇಳಿದ್ದಾರೆ.
ಐಎಂಎ ಪ್ರಕರಣ ಸಿಬಿಐ ತನಿಖೆಗೆ ಆದೇಶ ಹಿನ್ನೆಲೆ: ಸಿಎಂ ಬಿಎಸ್ವೈಗೆ ಅಲ್ಪಸಂಖ್ಯಾತ ಮುಖಂಡರಿಂದ ಸನ್ಮಾನ - bngimanews
ಐಎಂಎ ಪ್ರಕರಣವನ್ನ ಸಿಬಿಐ ತನಿಖೆಗೆ ವಹಿಸಿದ್ದಕ್ಕಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಅಲ್ಪಸಂಖ್ಯಾತ ಮುಖಂಡರು ಸನ್ಮಾನ ಮಾಡಿದ್ದಾರೆ.
ಐಎಂಎ ಪ್ರಕರಣವನ್ನ ಸಿಬಿಐ ತನಿಖೆಗೆ ವಹಿಸಿದ್ದಕ್ಕಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಅಲ್ಪಸಂಖ್ಯಾತ ಮುಖಂಡರು ಸನ್ಮಾನ ಮಾಡಿದರು. ದಾವಣಗೆರೆ ಜಿಲ್ಲಾ ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷರ ನೇತೃತ್ವದ ನಿಯೋಗ ಸಿಎಂಗೆ ಕೃತಜ್ಞತೆ ಸಲ್ಲಿಸಿತು. ಸಿಎಂ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ದಾವಣಗೆರೆ ಜಿಲ್ಲಾ ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಅಬ್ದುಲ್ ಮಜೀದ್, ಮನ್ಸೂರ್ ಐಎಂಎ ಹಣ ತಿಂದು ನಾಲ್ಕು ತಿಂಗಳಾಯ್ತು. ಈ ಹಗರಣ ಪ್ರಕರಣದಲ್ಲಿ ನುಡಿದಂತೆ ನಡೆದವರು ಬಿಎಸ್ವೈ ಮಾತ್ರ. ಅವರು ಸಿಎಂ ಆಗಿ ಹದಿನೈದು ದಿನದಲ್ಲೇ ಪ್ರಕರಣ ಸಿಬಿಐಗೆ ಕೊಟ್ಟಿದ್ದಾರೆ. ಅದಕ್ಕಾಗಿ ಇಂದು ಅವರನ್ನು ಅಭಿನಂದಿಸಿದ್ದೇವೆ ಎಂದರು.
ಸನ್ಮಾನ ಸ್ವೀಕರಿಸಿದ ಸಿಎಂ, ಪ್ರಕರಣದಲ್ಲಿ ನ್ಯಾಯ ಸಿಗಬೇಕು. ಬಡ ಹೆಣ್ಣುಮಕ್ಕಳಿಗೆ ನ್ಯಾಯ ದೊರೆತು ಹಣ ವಾಪಸ್ ಬರಬೇಕು. ಅಲ್ಲಿಯವರೆಗೂ ಹೋರಾಟ ಮಾಡುತ್ತೇನೆ ಎಂದು ಹೇಳಿದ್ದಾರೆ. ನಾವು ಅಲ್ಪಸಂಖ್ಯಾತರು ಮತ ಹಾಕಿದ್ದು ಬೇರೆ ಪಕ್ಷಕ್ಕೆ. ವೋಟ್ ಹಾಕಿಸಿಕೊಂಡವರು ನಾವು ಸತ್ತಿದ್ದೇವೋ ಬದುಕಿದ್ದೇವೋ ಎಂದು ಕೇಳಲಿಲ್ಲ. ರಸ್ತೆ ಮೇಲೆ ಬಿಟ್ಟರು. ಆದರೆ ಯಡಿಯೂರಪ್ಪ ಸರ್ಕಾರ ತನಿಖೆ ನಡೆಸಿ ಬಡ ಹೆಣ್ಣುಮಕ್ಕಳು ಸೇರಿ ಎಲ್ಲರಿಗೂ ಹಣ ಕೊಡಿಸುವ ಪ್ರಯತ್ನ ಮಾಡುವುದಾಗಿ ಹೇಳಿದ್ದಾರೆ ಎಂದ್ರು. ಇನ್ನು ಸಂಸದೆ ಶೋಭಾ ಕರಂದ್ಲಾಜೆ ಲೋಕಸಭೆಯಲ್ಲಿ ಐಎಂಎ ಹಗರಣದ ಬಗ್ಗೆ ದನಿ ಎತ್ತಿದ್ದಾರೆ. ಹಗರಣ ಸಂಬಂಧ ಮಾತನಾಡಲು ನಮ್ಮ ನಿಯೋಗವನ್ನು ಅಮಿತ್ ಶಾ ಅವರಿಗೆ ಭೇಟಿ ಮಾಡಿಸಿದರು. ನಮ್ಮ ಪರ ಕಳಕಳಿಯಿಂದ ಶೋಭಾ ಕರಂದ್ಲಾಜೆ ಸಂಸತ್ತಿನಲ್ಲಿ ಮಾತನಾಡಿದ್ದಾರೆ ಎಂದ್ರು.