ಕರ್ನಾಟಕ

karnataka

ETV Bharat / state

ಸಚಿವಾಲಯದ ಸಿಬ್ಬಂದಿ ಇನ್ಮುಂದೆ ಸ್ಮಾರ್ಟ್ ಕಾರ್ಡ್ ಧರಿಸುವುದು ಕಡ್ಡಾಯ - undefined

ವಿಧಾನಸೌಧ, ವಿಕಾಸಸೌಧ ಹಾಗೂ ಬಹುಮಹಡಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಹೊಸ ಸ್ಮಾರ್ಟ್ ಕಾರ್ಡ್​ಗಳನ್ನು ಫೆಬ್ರವರಿಯಿಂದ ವಿತರಿಸಲಾಗುತ್ತಿದೆ. ಜುಲೈ 1ರಿಂದ ಈ ಹೊಸ ಸ್ಮಾರ್ಟ್ ಕಾರ್ಡ್ ಧರಿಸುವುದು ಕಡ್ಡಾಯವಾಗಿದೆ.

ಸ್ಮಾರ್ಟ್ ಕಾರ್ಡ್

By

Published : Jun 29, 2019, 11:17 PM IST

ಬೆಂಗಳೂರು:ವಿಧಾನಸೌಧ, ವಿಕಾಸಸೌಧ ಹಾಗೂ ಬಹುಮಹಡಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಮುಂದಿನ ತಿಂಗಳಿಂದ ಟ್ಯಾಗ್ ಹೊಂದಿರುವ ಸ್ಮಾರ್ಟ್ ಕಾರ್ಡ್ ಧರಿಸುವುದು ಕಡ್ಡಾಯವಾಗಿದೆ.

ಈ ಸಂಬಂಧ ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಇಲಾಖೆ ಸುತ್ತೋಲೆ ಹೊರಡಿಸಿದೆ. ಈಗಾಗಲೇ ವಿಧಾನಸೌಧ, ವಿಕಾಸಸೌಧ ಮತ್ತು ಬಹುಮಹಡಿ ಕಟ್ಟಡಗಳ ಸುರಕ್ಷತೆ ಹಾಗೂ ಭದ್ರತೆಯ ಹಿತದೃಷ್ಟಿಯಿಂದ ನೀಡಲಾಗಿದ್ದ ಗುರುತಿನ ಚೀಟಿಯನ್ನು ಹಿಂಪಡೆಯಲಾಗಿದೆ. ಅದರ ಬದಲಿಗೆ ಸಿಬ್ಬಂದಿಗೆ ಹೊಸ ಸ್ಮಾರ್ಟ್ ಕಾರ್ಡ್​ಗಳನ್ನು ಫೆಬ್ರವರಿಯಿಂದ ವಿತರಿಸಲಾಗುತ್ತಿದೆ. ಜುಲೈ 1ರಿಂದ ಈ ಹೊಸ ಸ್ಮಾರ್ಟ್ ಕಾರ್ಡ್‌ನ ಸಚಿವಾಲಯದ ಅಧಿಕಾರಿಗಳು ಹಾಗೂ ಸಿಬ್ಬಂದಿ ಧರಿಸುವುದು ಕಡ್ಡಾಯವಾಗಿದೆ.

ಹೊರಗುತ್ತಿಗೆ ಹಾಗೂ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುವ ಸಚಿವಾಲಯದ ಸಿಬ್ಬಂದಿ ತಮಗೆ ನೀಡಿರುವ ಗುರುತಿನ ಚೀಟಿಯನ್ನು ಸಚಿವಾಲಯ ಪ್ರವೇಶಿಸುವಾಗ ಹಾಗೂ ಕಾರ್ಯನಿರ್ವಹಿಸುವಾಗ ಕಡ್ಡಾಯವಾಗಿ ಧರಿಸಬೇಕು ಎಂದು ನಿರ್ದೇಶನ ನೀಡಲಾಗಿದೆ.

For All Latest Updates

TAGGED:

ABOUT THE AUTHOR

...view details