ಬೆಂಗಳೂರು: ಕೊರೊನಾ ವಿಚಾರದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಸಿಬ್ಬಂದಿ ನಡುವೆ ವೇತನ ಹಾಗು ಇನ್ನಿತರ ಸೌತಲಭ್ಯಗಳ ತಾರತಮ್ಯವನ್ನು ವಿರೋಧಿಸಿ ಕಳೆದೆರಡು ದಿನಗಳಿಂದ ಬೆಂಗಳೂರು ಮೆಡಿಕಲ್ ಕಾಲೇಜು ಸ್ಟಾಫ್ ನರ್ಸ್‌ಗಳು ಪ್ರತಿಭಟನೆ ನಡೆಸುತ್ತಿದ್ದಾರೆ.
ಮೆಡಿಕಲ್ ಕಾಲೇಜು ಸ್ಟಾಫ್ ನರ್ಸ್ ಪ್ರತಿಭಟನೆಗೆ ಸಚಿವರ ಸ್ಪಂದನೆ: ಬೇಡಿಕೆ ಈಡೇರಿಸುವ ಭರವಸೆ - Staff nurse staff protest
ಶೀಘ್ರದಲ್ಲಿಯೇ ಶುಶ್ರೂಶಕರ ಬೇಡಿಕೆಗಳನ್ನು ಸಿಎಂ ಜೊತೆ ಚರ್ಚಿಸಿ ಈಡೇರಿಸುತ್ತೇನೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಟ್ವೀಟ್ ಮಾಡಿ ತಿಳಿಸಿದ್ದಾರೆ.
ಮೆಡಿಕಲ್ ಕಾಲೇಜು ಸ್ಟಾಫ್ ನರ್ಸ್ ಪ್ರತಿಭಟನೆಗೆ ಸಚಿವರ ಸ್ಪಂದನೆ: ಬೇಡಿಕೆ ಈಡೇರಿಸುವ ಭರವಸೆ
ಈ ಬಗ್ಗೆ ಇದೀಗ ಪ್ರತಿಕ್ರಿಯಿಸಿರುವ ಸಚಿವರು, ಶೀಘ್ರದಲ್ಲಿಯೇ ಶುಶ್ರೂಶಕರ ಬೇಡಿಕೆಗಳನ್ನು ಸಿಎಂ ಜೊತೆ ಚರ್ಚಿಸಿ ಈಡೇರಿಸುತ್ತೇನೆ ಎಂದು ಟ್ವೀಟ್ ಮಾಡಿ ತಿಳಿಸಿದ್ದಾರೆ.
ನೂತನ ಪಿಂಚಣಿ ಸೌಲಭ್ಯಗಳು, ಮೂಲ ವೇತನದ ಶೇ 50ರಷ್ಟು ಹೆಚ್ಚುವರಿ ವೇತನ, ಪ್ರೋತ್ಸಾಹ ಧನ ನೀಡಬೇಕು ಎನ್ನುವುದು ಸ್ಟಾಫ್ ನರ್ಸ್‌ಗಳ ಬೇಡಿಕೆಯಾಗಿದೆ.