ಕರ್ನಾಟಕ

karnataka

ETV Bharat / state

3 ದಿನಗಳಲ್ಲಿ ಬೆಡ್ ಸಮಸ್ಯೆಗೆ ಪರಿಹಾರ ಸಿಗುತ್ತಾ.. ಕಾರ್ಯಾಚರಣೆಗೆ ಇಳಿದ ಸಚಿವರು ಹೇಳಿದ್ದೇನು? - ಹಾಸಿಗೆ ಕುರಿತ ಬೆಡ್ ಬುಲೆಟಿನ್

ಬೆಡ್ ಸಮಸ್ಯೆ ಆದಷ್ಟು ಬೇಗ ಸರಿ ಮಾಡ್ತೀವಿ. ಬೇರೆ ಬೇರೆ ದೇಶದಿಂದ ಹಾಗೂ ಸಂಘ-ಸಂಸ್ಥೆಗಳಿಂದ ಆಕ್ಸಿಜನ್ ಬರ್ತಿದೆ. ಇದನ್ನ ಸ್ವೀಕಾರ ಮಾಡಲು ಇಬ್ಬರು ನೋಡಲ್ ಅಧಿಕಾರಿಗಳನ್ನ ನೇಮಕ ಮಾಡುತ್ತಿದ್ದೇವೆ..

minister
minister

By

Published : May 5, 2021, 8:48 PM IST

Updated : May 5, 2021, 8:55 PM IST

ಬೆಂಗಳೂರು : ಕೋವಿಡ್‌ಗಾಗಿ ಮೀಸಲಿಟ್ಟ ಬೆಡ್​ನಲ್ಲೂ ಹೇಗೆ ಎಲ್ಲ ಅಕ್ರಮಗಳು ನಡೆಯುತ್ತೆ ಎಂಬುದು ಈಗಾಗಲೇ ಬೆಳಕಿಗೆ ಬಂದಿದೆ. ಹೀಗಾಗಿಯೇ, ಬೆಡ್ ವ್ಯವಸ್ಥೆ ಮತ್ತು ವಾರ್ ರೂಮ್ ಸುಧಾರಣೆಗೆ ಸಚಿವರು ಕಾರ್ಯಾಚರಣೆಗೆ ಇಳಿದಿದ್ದಾರೆ.‌

ಆರೋಗ್ಯ ಸೌಧದಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಗೃಹ ಸಚಿವ ಬೊಮ್ಮಾಯಿ, ಕಂದಾಯ ಸಚಿವ ಆರ್ ಅಶೋಕ್ ಮತ್ತು ಅರವಿಂದ ಲಿಂಬಾವಳಿ ಇಂದು ಮಹ್ವತದ ಜಂಟಿ ಸಭೆ ನಡೆಸಿದರು.

ಆಕ್ಸಿಜನ್ ಬೆಡ್ ನೀಡುವ ವಿಚಾರದಲ್ಲಿ‌ ಇರುವ ಸಮಸ್ಯೆಗಳ ಬಗ್ಗೆ, ಮೂರು ದಿನಗಳಲ್ಲಿ ಬೆಡ್ ಸಮಸ್ಯೆ ಪರಿಹಾರದ ಡೆಡ್‌ಲೈನ್ ಕೊಟ್ಟಿರುವ ಹಿನ್ನೆಲೆ ಸಭೆ ನಡೆಸಿದರು.

ಬಳಿಕ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಇನ್ನು ಮುಂದೆ ಕೋವಿಡ್ ಹೆಲ್ತ್ ಬುಲೆಟಿನ್ ರೀತಿ ಲಭ್ಯ ಇರುವ ಹಾಸಿಗೆ ಕುರಿತ ಬೆಡ್ ಬುಲೆಟಿನ್‌ನ ಪ್ರತಿ ದಿನ ಬಿಡುಗಡೆ ಮಾಡಲಾಗುವುದು.

ಕಾರ್ಯಾಚರಣೆಗೆ ಇಳಿದ ಸಚಿವರು ಹೇಳಿದ್ದೇನು?

ಇದರಿಂದ ಸರ್ಕಾರದ ಬಳಿ ಕೋವಿಡ್ ರೋಗಿಗಳಿಗೆ ಖಾಲಿ ಇರುವ ಬೆಡ್​ಗಳ ಬಗ್ಗೆ ಜನರಿಗೆ ಗೊತ್ತಾಗುತ್ತದೆ. ಇದರಲ್ಲಿ ಪಾರದರ್ಶಕತೆ ತರುವುದು ನಮ್ಮ ಉದ್ದೇಶ ಎಂದು ತಿಳಿಸಿದರು.

ಬೆಡ್ ಬ್ಲಾಕಿಂಗ್ ದಂಧೆ ಪ್ರಕರಣ :ಡಾಕ್ಟರ್‌, ಡಾಟಾ ಎಂಟ್ರಿ ಆಪರೇಟರ್​ ಸೇರಿದಂತೆ 8 ಮಂದಿ ವಿಚಾರಣೆ ಆಗ್ತಿದೆ. ಯಾರೇ ಭಾಗಿಯಾಗಿದ್ರೂ ಯಾರನ್ನು ಬಿಡೋದಿಲ್ಲ, ಕೇವಲ ಸೌತ್ ಝೋನ್​ನಲ್ಲಿ ಮಾತ್ರ ಹೀಗೆ ಆಗಿಲ್ಲ.

ಎಲ್ಲಾ‌ ಝೋನ್​ ಬಗ್ಗೆಯೂ ತನಿಖೆ ನಡೆಯುತ್ತಿದೆ. ಪ್ರಕರಣದಲ್ಲಿ ಯಾರೇ ಭಾಗಿಯಾದ್ರೂ ತೀವ್ರತರವಾದ ಕ್ರಮ ತೆಗೆದುಕೊಳ್ಳುತ್ತೇವೆ ಅಂತ ತಿಳಿಸಿದರು.


ಕೋವಿಡ್ ಟೆಸ್ಟ್ ಮಾಡಿಸಿದಾಗ ಎಲ್ಲ ಮಾಹಿತಿ ನೀಡಬೇಕು- ಸಚಿವ ಲಿಂಬಾವಳಿ :

ಸಿಎಂ ಯಡಿಯೂರಪ್ಪ ನಿನ್ನೆ ಸಚಿವರಿಗೆ ಜವಾಬ್ದಾರಿ ನೀಡಿದ್ದಾರೆ. ವಾರ್ ರೂಮ್ ಕಾರ್ಯಚಟುವಟಿಕೆಗಳನ್ನು ಪರಿಶೀಲನೆ ಮಾಡಿದ್ದೇವೆ. ವಾರ್ ರೂಮ್ ಸಂಬಂಧಿಸಿದಂತೆ ಕೆಲವು ತೀರ್ಮಾನ ಮಾಡಿದ್ದೇವೆ. ಕೋವಿಡ್ ಬಂದ ಬಗ್ಗೆ ಮೆಸೇಜ್ ಪಡೆಯುವ 5 ರಿಂದ 10 ಜನ ರೆಸ್ಪಾನ್ಸ್ ಮಾಡ್ತಾ ಇಲ್ಲ.

ಹೀಗಾಗಿ, ಪಾಸಿಟಿವ್ ಬಂದವರು ರೆಸ್ಪಾನ್ಸ್ ಮಾಡಲೇಬೇಕು. ಕೊರೊನಾ ಪರೀಕ್ಷೆಗೆ ಹೋದವರು ಪಾಸಿಟಿವ್ ಬಂದ ಬಳಿಕ ಕೆಲವರು ನಾಪತ್ತೆ ಆಗ್ತಾರೆ. ಹೀಗಾಗಿ, ಟೆಸ್ಟ್ ಮಾಡುವಾಗ ಎಲ್ಲಾ ಮಾಹಿತಿ ಪಡೆಯಲು ತೀರ್ಮಾನ ಮಾಡಲಾಗಿದೆ ಅಂದರು.

ಪ್ರತಿ ತಾಲೂಕು ಕೇಂದ್ರದಲ್ಲಿ ಕೋವಿಡ್ ಆರೈಕೆ ಕೇಂದ್ರ ತೆರೆಯಲು ತಿರ್ಮಾನ ಮಾಡಿದ್ದು, ಹಾಸ್ಟೆಲ್​ಗಳಲ್ಲಿ ಕೋವಿಡ್ ಆರೈಕೆ ಕೇಂದ್ರ ಮಾಡಲಾಗುವುದು ಅಂದರು.

ಇನ್ಮುಂದೆ ರೋಗಿಯೇ ಇಂತಹದ್ದೇ ಬೆಡ್ ಬೇಕು ಅಂತ ನಿರ್ಧಾರ ಮಾಡೋ ಹಾಗಿಲ್ಲ- ಆರ್ ಅಶೋಕ್ :

ಇಂದಿನ ಸಭೆಯಲ್ಲಿ ಹೊಸದಾಗಿ ಎಷ್ಟು ಬೆಡ್ ವ್ಯವಸ್ಥೆ ಮಾಡಬೇಕು? ಎಷ್ಟು ಲಭ್ಯವಾಗಿದೆ ಅಂತ ಮಾಹಿತಿ ಪಡೆದಿದ್ದೇವೆ. ಹಾಗೇ ಇನ್ಮುಂದೆ ರೋಗಿಯೇ ಇಂತಹದೇ ಬೆಡ್ ಬೇಕು ಅಂತ ನಿರ್ಧಾರ ಮಾಡುವ ಹಾಗಿಲ್ಲ.

ನಿಶ್ಚಿತವಾಗಿ ಕೋವಿಡ್ ಕೇಂದ್ರದಲ್ಲಿ ಸಂಬಂಧಿಸಿದ ಡಾಕ್ಟರ್‌ಗಳು ಫೈನಲ್ ಮಾಡಬೇಕು ಅಂತ ಸ್ಪಷ್ಟಪಡಿಸಿದ್ದಾರೆ. ರೋಗಿಗೆ ಯಾವ ಸ್ವರೂಪದ ಬೆಡ್ ಬೇಕು ಅಂತ ಡಾಕ್ಟರ್ ಹೇಳಿದ ಬಳಿಕ ಬೆಡ್ ವ್ಯವಸ್ಥೆ ಆಗಲಿದೆ ಅಂದರು.

ಮುಂದೆ‌ ಆಕ್ಸಿಜನ್ ಬೆಡ್ ಬೇಕು ಅಂತ ರೋಗಿ ತೀರ್ಮಾನ ಮಾಡೋದಲ್ಲ. ಮೊದಲು ಅವ್ರು ಕೇರ್ ಸೆಂಟರ್​ಗೆ ಬರಬೇಕು. ಆಮೇಲೆ‌ ಅಲ್ಲಿನ ವೈದ್ಯರು ನಿರ್ಧಾರ ‌ಮಾಡ್ತಾರೆ. ಆಯುಷ್ ವೈದ್ಯರನ್ನ ಕೇರ್ ಸೆಂಟರ್​ನಲ್ಲಿ ಬಳಸಿಕೊಳ್ಳಲು ನಿರ್ಧಾರ ಮಾಡಲಾಗಿದೆ.

ಬೆಡ್ ಸಮಸ್ಯೆ ಆದಷ್ಟು ಬೇಗ ಸರಿ ಮಾಡ್ತೀವಿ. ಬೇರೆ ಬೇರೆ ದೇಶದಿಂದ ಹಾಗೂ ಸಂಘ-ಸಂಸ್ಥೆಗಳಿಂದ ಆಕ್ಸಿಜನ್ ಬರ್ತಿದೆ. ಇದನ್ನ ಸ್ವೀಕಾರ ಮಾಡಲು ಇಬ್ಬರು ನೋಡಲ್ ಅಧಿಕಾರಿಗಳನ್ನ ನೇಮಕ ಮಾಡುತ್ತಿದ್ದೇವೆ.

ನಾಳೆ ಖಾಸಗಿ ಮೆಡಿಕಲ್ ಕಾಲೇಜು ಪದಾಧಿಕಾರಿಗಳ ಸಭೆ ಕರೆಯಲಾಗಿದೆ. ಎಷ್ಟು ಬೆಡ್ ಇದೆ, ಎಷ್ಟು ಲಭ್ಯ ಆಗಲಿದೆ ಅಂತ ಸ್ಪಷ್ಟವಾಗಿ ತಿಳಿದುಕೊಳ್ಳುತ್ತೇವೆ. ಪ್ರತಿದಿನ ಬೆಡ್ ಬಗ್ಗೆ ರಾಜ್ಯವ್ಯಾಪಿ ಮಾಧ್ಯಮಗಳ ಮೂಲಕ ತಿಳಿಸ್ತೇವೆ. ಯಾರು ಬೆಡ್ ಕೊಟ್ಟಿಲ್ಲ? ಯಾರು ಊಟದ ವ್ಯವಸ್ಥೆ ಮಾಡಿಲ್ಲ.? ಯಾವ ರೀತಿ ಸುಧಾರಣೆ ಮಾಡಬೇಕು ಅನ್ನೋ ಬಗ್ಗೆ ಚರ್ಚೆ ಮಾಡ್ತೇವೆ ಅಂತ ತಿಳಿಸಿದರು.

Last Updated : May 5, 2021, 8:55 PM IST

ABOUT THE AUTHOR

...view details