ಬೆಂಗಳೂರು:ಬಿಎಸ್ವೈ ನೇತೃತ್ವದ ಬಿಜೆಪಿ ಸರ್ಕಾರದ ನೂತನ ಸಚಿವರಾಗಿ 17 ಶಾಸಕರು ಪ್ರಮಾಣ ವಚನ ಸ್ವೀಕರಿಸುತ್ತಿರುವ ಹಿನ್ನೆಲೆ ರಾಜಭವನ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಸಚಿವರ ಪ್ರಮಾಣವಚನ ಹಿನ್ನೆಲೆ ರಾಜಭವನ ಸುತ್ತ ಬಿಗಿ ಬಂದೋಬಸ್ತ್ - Minister's Oath
ಬೆಳಿಗ್ಗೆ 8 ಗಂಟೆಯಿಂದ 12 ಗಂಟೆಯವರೆಗೆ ರಾಜಭವನ ರಸ್ತೆಯ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಪಾಸ್ ಹೊಂದಿದವರನ್ನು ಮಾತ್ರ ರಾಜಭವನದ ಒಳಗೆ ಬಿಡಲಾಗಿದ್ದು, ನೂತನ ಸಚಿವರ ಕುಟುಂಬದ ಸದಸ್ಯರು ಹಾಗೂ ಬೆಂಬಲಿಗರಿಗೆ ಒಳಗೆ ಪ್ರವೇಶಿಸುವ ಅವಕಾಶ ಕಲ್ಪಿಸಲಾಗಿದೆ.
ಬೆಳಿಗ್ಗೆ 8 ಗಂಟೆಯಿಂದ 12 ಗಂಟೆಯವರೆಗೆ ರಾಜಭವನ ರಸ್ತೆಯ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಪಾಸ್ ಹೊಂದಿದವರನ್ನು ಮಾತ್ರ ರಾಜಭವನದ ಒಳಗೆ ಬಿಡಲಾಗಿದೆ. ನೂತನ ಸಚಿವರ ಕುಟುಂಬ ಸದಸ್ಯರು ಹಾಗೂ ಬೆಂಬಲಿಗರಿಗೆ ಒಳಗೆ ಪ್ರವೇಶಿಸುವ ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ ನೂತನ ಸಚಿವರ ಅಭಿಮಾನಿಗಳು ಮತ್ತು ಬಿಜೆಪಿ ಕಾರ್ಯಕರ್ತರು ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದು, ಇವರನ್ನು ಮುಂಚಿತವಾಗಿಯೇ ತಡೆಯುವ ಉದ್ದೇಶದಿಂದ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಜೊತೆಗೆ ಪಾಸ್ ಇಲ್ಲದವರನ್ನು ಯಾವುದೇ ಕಾರಣಕ್ಕೂ ಒಳಗೆ ಬಿಡುತ್ತಿಲ್ಲ.
ಈಗಾಗಲೇ ರಾಜಭವನದಲ್ಲಿ ಪ್ರಮಾಣವಚನ ಪ್ರಾರಂಭವಾಗಿದ್ದು, ಬಂದೋಬಸ್ತ್ ಇನ್ನಷ್ಟು ಹೆಚ್ಚಿದೆ. ಈ ಮಾರ್ಗವಾಗಿ ತೆರಳುವ ಸಾರ್ವಜನಿಕರನ್ನು ರಾಜಭವನ ಪ್ರವೇಶ ಮಾರ್ಗದ ಭಾಗದ ಬದಲು ಎದುರು ಭಾಗದ ಪಾದಚಾರಿ ರಸ್ತೆಯಲ್ಲಿ ಕಳಿಸಿಕೊಡಲಾಗುತ್ತಿದೆ.