ಬೆಂಗಳೂರು:ಉತ್ತರ ಕರ್ನಾಟಕದ ಪ್ರವಾಹ ಸಂತ್ರಸ್ತರು ಸರ್ಕಾರದ ನೆರವಿನ ನಿರೀಕ್ಷೆಯಲ್ಲಿದ್ದಾರೆ. ಆದ್ರೆ ಜವಾಬ್ದಾರಿ ನಿಭಾಯಿಸಬೇಕಿದ್ದ ಕಂದಾಯ ಸಚಿವರು ಮಾತ್ರ ಚುನಾವಣಾ ಸಭೆಯಲ್ಲಿ ಫುಲ್ ಬ್ಯುಸಿಯಾಗಿದ್ದು, ಪಕ್ಷದ ಚಟುವಟಿಕೆಯಲ್ಲಿ ತೊಡಗಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಪ್ರವಾಹ ಸಂತ್ರಸ್ತರ ನೋವಿಗಿಂತ ಸಚಿವರಿಗೆ ಉಪಚುನಾವಣಾ ಸಿದ್ಧತೆಯೇ ಮುಖ್ಯವಾಯ್ತಾ?! - bjp meeting inmalleshwaram news
ಉತ್ತರ ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ಪೂರ್ಣಪ್ರಮಾಣದ ನೆರವು ನೀಡದೇ ರಾಜ್ಯದ ಕಂದಾಯ ಸಚಿವರು ಚುನಾವಣಾ ಸಭೆಯಲ್ಲಿ ಫುಲ್ ಬ್ಯುಸಿಯಾಗಿದ್ದು, ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಮಲ್ಲೇಶ್ವರಂನ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿಂದು ಆಯೋಜಿಸಿರುವ ಉಪಚುನಾವಣಾ ಸಿದ್ಧತಾ ಸಭೆಯಲ್ಲಿ ಕಂದಾಯ ಸಚಿವ ಆರ್. ಅಶೋಕ್ ಭಾಗಿಯಾಗಿದ್ದಾರೆ. ಸಭೆ ಆರಂಭಕ್ಕೂ ಒಂದು ಗಂಟೆ ಮೊದಲೇ ಆಗಮಿಸಿ ಕಾದು ಕುಳಿತಿದ್ದರು.
ಸತತ ಎರಡನೇ ಬಾರಿಗೆ ಪ್ರವಾಹಕ್ಕೆ ಬೆಳಗಾವಿ ಜಿಲ್ಲೆ ನಲುಗಿದರೂ ಬೆಳಗಾವಿ ಜಿಲ್ಲೆಯತ್ತ ತಲೆಹಾಕದ ಅಶೋಕ್ ಸಂತ್ರಸ್ತರನ್ನು ಮರೆತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಕಂದಾಯ ಸಚಿವರದ್ದೇ ಇಲ್ಲಿ ಪ್ರಮುಖ ಪಾತ್ರವಾದರೂ ಅತ್ತ ಸುಳಿಯದೇ ಅಶೋಕ್ ಪಕ್ಷದ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಇನ್ನು ಪ್ರವಾಹ ಪೀಡಿತರ ನೆರವಿಗೆ ಸರ್ಕಾರದ ಜೊತೆ ಕೈ ಜೋಡಿಸಬೇಕಿರುವ ಆಡಳಿತ ಪಕ್ಷ ಚುನಾವಣೆ ಸಿದ್ಧತೆಯಲ್ಲಿ ಬ್ಯುಸಿಯಾಗಿದೆ. ಜನರ ಕಷ್ಟ ಆಲಿಸುವ ಬದಲು ಚುನಾವಣೆ ಗೆಲ್ಲುವುದಕ್ಕೆ ಆದ್ಯತೆ ಕೊಟ್ಟಿರುವ ಆರೋಪಕ್ಕೆ ಸಿಲುಕಿದೆ.